ಎಷ್ಟು ನೇಮಕಾತಿಗಳಲ್ಲಿ ನಡೆದಿದೆ ಅವ್ಯವಹಾರ.?
ಈ ಎರಡು ತಂಡಗಳು ಎಷ್ಟು ನೇಕಾತಿಗಳಲ್ಲಿ ಅವ್ಯವಹಾರ ನಡೆಸಿರಬಹುದು ಎಂಬುದಕ್ಕೆ ತನಿಖೆಯ ವೇಳೆ ಉತ್ತರ ದೊರಕಿದೆ. ಐಎಎಸ್ ಅಧಿಕಾರಿ ಜ್ಞಾನೇಂದ್ರ ವಿಚಾರಣೆ ವೇಳೆ ನೀಡಿರುವ ಮಾಹಿತಿಯ ಪ್ರಕಾರ ಕಳೆದ 3-4 ವರ್ಷಗಳಲ್ಲಿ ಕೆಪಿಎಸ್ಸಿ ಮುಖಾಂತರ ನಡೆದಿರುವ ಬರೋಬ್ಬರಿ 13 ನೇಮಕಾತಿಗಳಲ್ಲಿ ಅಕ್ರಮ ನಡೆಸಿದ್ದಾರಂತೆ. ಈಗ ಬೆಳಕಿಗೆ ಬಂದಿರುವ ಪಶುವೈದ್ಯಧಿಕಾರಿಗಳ ಹೊರತು ಪಡಿಸಿ KAS ಅಧಿಕಾರಿಗಳ ನೇಮಕಾತಿ, ಸಾರಿಗೆ ಇಲಾಖೆಯ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ಗಳು, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಎಂಜಿನಿಯರ್ಗಳು ಸೇರಿರಿದಂತೆ ಹಲವು ಇಲಾಖೆ ನೇಮಕಾತಿಗಳ ವೇಳೆ ಸರ್ಕಾರಿ ಹುದ್ದೆಯ ಮಾರಾಟ ನಡೆದಿರುವ ಬಗ್ಗೆ ಜ್ಞಾನೇಂದ್ರ ಮಾಹಿತಿ ನೀಡಿದ್ದು,ಅಧಿಕಾರಿಗಳು ಅವುಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಡೀಲ್ ಹೇಗೆ ನಡೆಯುತ್ತಿತ್ತು ಎಂದರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳ ಅರ್ಹತಾ ಪಟ್ಟಿ ಪ್ರಕಟವಾಗುವ ಮೊದಲೇ ಇವರು ಅದನ್ನು ಸೋರಿಕೆ ಮಾಡುತ್ತಿದ್ದರು. ಬಳಿಕ ಆ ಪಟ್ಟಿಯಲ್ಲಿದ್ದ ಕೆಲವು ಅಭ್ಯರ್ಥಿಗಳೊಂದಿಗೆ ಮಧ್ಯವರ್ತಿಗಳು ಸಂಪರ್ಕ ಸಾಧಿಸಿಸುತ್ತಿದ್ದರು. ಅಇವರ ಬಳಿ ಹುದ್ದೆಗೆ ಕೋಟಿ - ಕೋಟಿಗೆ ಡೀಲ್ ಮಾಡುತ್ತಿದ್ದರು. ಮೌಲ್ಯಮಾಪನ ಪ್ರಕ್ರಿಯೆ ಮುಗಿದ ನಂತರ ಕೆಲವು ಕೆಪಿಎಸ್ಸಿ ಸದಸ್ಯರು ತಮ್ಮನ್ನು ಭೇಟಿಯಾಗುತ್ತಿದ್ದರು ಎಂದು ವಿಚಾರಣೆ ವೇಳೆ ಜ್ಞಾನೇಂದ್ರ ಬಾಯ್ಬಿಟ್ಟಿದ್ದಾರಂತೆ.
ಪ್ರಕರಣ ಸಂಬಂಧ ಜ್ಞಾನೇಂದ್ರ ಮತ್ತು ಟೀಮ್ ಬಂಧನವಾಗಿದೆ. ಆದರೆ KPSC ಮಾಜಿ ಅಧ್ಯಕ್ಷ ಹಾಗೂ ಸದಸ್ಯರ ಟೀಮ್ ಬಗ್ಗೆ ಈಗ ಸಾಕ್ಷಿಗಳು ಸಿಕ್ಕಿದ್ದು, ಅವರ ವಿರುದ್ಧ ಕ್ರಮಕ್ಕೆ ಸರ್ಕಾರದ ಅನುಮತಿಗೆ CID ಕಾಯುತ್ತಿದೆ ಎನ್ನಲಾಗಿದೆ. ಆದರೆ ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರೂ ಉಲ್ಲೇಖವಾಗುವ ಸಾಧ್ಯತೆ ಇದೆಯಂತೆ, ಈ ಕಾರಣಕ್ಕಾಗಿ ಸರ್ಕಾರ ಒತ್ತಡಕ್ಕೆ ಸಿಲುಕಿದೆಯಂತೆ. ಇದರಿಂದ ಸರ್ಕಾರ ಅನುಮತಿಗೆ ಮೀನಾಮೇಷ ಎಣಿಸುತ್ತಿದೆ ಎನ್ನುವ ಮಾತುಗಳು ಸಣ್ಣದಾಗಿ ಕೇಳಿ ಬರುತ್ತಿವೆ.