ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಹಾಗೂ ಪರೀಕ್ಷೆ-2ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ವಿಷಯವಾರು ದಿನಾಂಕಗಳನ್ನು ಗಮನಿಸಿ ಅಧ್ಯಯನದ ಯೋಜನೆ ರೂಪಿಸಿಕೊಳ್ಳಬಹುದು.

SSLC ಪರೀಕ್ಷೆ-1 ವೇಳಾಪಟ್ಟಿ

  • ಮಾರ್ಚ್ 22 – ಪ್ರಥಮ ಭಾಷೆ
  • ಮಾರ್ಚ್ 25 – ವಿಜ್ಞಾನ
  • ಮಾರ್ಚ್ 27 – ದ್ವಿತೀಯ ಭಾಷೆ
  • ಮಾರ್ಚ್ 30 – ಗಣಿತ
  • ಏಪ್ರಿಲ್ 2 – ತೃತೀಯ ಭಾಷೆ
  • ಏಪ್ರಿಲ್ 5 – ಸಮಾಜ ವಿಜ್ಞಾನ

SSLC ಪರೀಕ್ಷೆ-2 ವೇಳಾಪಟ್ಟಿ

  • ಮೇ 24 – ಪ್ರಥಮ ಭಾಷೆ
  • ಮೇ 25 – ವಿಜ್ಞಾನ
  • ಮೇ 26 – ದ್ವಿತೀಯ ಭಾಷೆ
  • ಮೇ 27 – ಗಣಿತ
  • ಮೇ 28 – ತೃತೀಯ ಭಾಷೆ
  • ಮೇ 29 – ಸಮಾಜ ವಿಜ್ಞಾನ
  • ದ್ವಿತೀಯ ಪಿಯುಸಿ ಪರೀಕ್ಷೆ-1

ಪರೀಕ್ಷೆಗಳು ಫೆಬ್ರವರಿ 27ರಿಂದ ಮಾರ್ಚ್ 18ರವರೆಗೆ ನಡೆಯಲಿವೆ. ಕನ್ನಡ, ಅರೇಬಿಕ್, ಇಂಗ್ಲಿಷ್, ವಿಜ್ಞಾನ ವಿಷಯಗಳು, ಗಣಿತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳಿಗೆ ಪ್ರತ್ಯೇಕ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-2

ಪರೀಕ್ಷೆಗಳು ಮೇ 3ರಿಂದ ಮೇ 15ರವರೆಗೆ ನಡೆಯಲಿವೆ. ವಿದ್ಯಾರ್ಥಿಗಳು ತಮ್ಮ ವಿಷಯಗಳ ಪರೀಕ್ಷಾ ದಿನಾಂಕಗಳನ್ನು ಅಧಿಕೃತ ವೇಳಾಪಟ್ಟಿಯಲ್ಲಿ ಪರಿಶೀಲಿಸಬೇಕು.

2nd PUC ಪರೀಕ್ಷೆ 1 ವೇಳಾಪಟ್ಟಿ

  • ಫೆ 27- ಕನ್ನಡ, ಅರೇಬಿಕ್
  • ಮಾರ್ಚ್ 1- ಇಂಗ್ಲಿಷ್
  • ಮಾರ್ಚ್ 2- ತಮಿಳು,ತೆಲುಗು, ಮಲಯಾಳಂ,ಮರಾಠಿ ಉರ್ದು,ಸಂಸ್ಕೃತ, ಫ್ರೆಂಚ್.
  • ಮಾರ್ಚ್ 3- ಭೂಗೋಳ ಶಾಸ್ತ್ರ, ಮನಃಶಾಸ್ತ್ರ
  • ಮಾರ್ಚ್ 4- ಸಮಾಜಶಾಸ್ತ್ರ, ಭೌತಶಾಸ್ತ್ರ
  • ಮಾರ್ಚ್ 5- ಲೆಕ್ಕಶಾಸ್ತ್ರ
  • ಮಾರ್ಚ್ 8- ರಸಾಯನಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ
  • ಮಾರ್ಚ್ 9- ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ.
  • ಮಾರ್ಚ್ 11- ಹಿಂದುಸ್ತಾನಿ ಸಂಗೀತ,ಎಲೆಕ್ಟ್ರಾನಿಕ್ಸ್, ರಿಟೇಲ್, ಆಟೋಮೊಬೈಲ್ ಬಿಸಿನೆಸ್ ಅಂಡ್ ವೆಲ್ ನೆಸ್, ಮಾಹಿತಿ ತಂತ್ರಜ್ಞಾನ.
  • ಮಾರ್ಚ್ 12- ವ್ಯವಹಾರ ಅಧ್ಯಯನ, ಗಣಿತ
  • ಮಾರ್ಚ್ 13- ಐಚ್ಚಿಕ ಕನ್ನಡ, ತರ್ಕಶಾಸ್ತ್ರ,ಗೃಹ ವಿಜ್ಞಾನ
  • ಮಾರ್ಚ್ 15- ರಾಜ್ಯಶಾಸ್ತ್ರ, ಜೀವಶಾಸ್ತ್ರ,, ಗಣಕ ವಿಜ್ಞಾನ.
  • ಮಾರ್ಚ್ 16- ಸಂಖ್ಯಾಶಾಸ್ತ್ರ, ವಿದ್ಯುನ್ಮಾನಶಾಸ್ತ್ರ
  • ಮಾರ್ಚ್ 17- ಹಿಂದಿ
  • ಮಾರ್ಚ್ 18- ಇತಿಹಾಸ.

2nd PUC ಪರೀಕ್ಷೆ 2 ವೇಳಾಪಟ್ಟಿ

  • ಮೇ 3- ಕನ್ನಡ, ಅರೇಬಿಕ್
  • ಮೇ 4- ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನಶಾಸ್ತ್ರ
  • ಮೇ 5- ರಾಜ್ಯಶಾಸ್ತ್ರ, ಗಣಕ ವಿಜ್ಞಾನ.
  • ಮೇ 6- ಇತಿಹಾಸ, ರಸಾಯನಶಾಸ್ತ್ರ
  • ಮೇ 7- ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ.
  • ಮೇ 8- ಐಚ್ಛಿಕ ಕನ್ನಡ,ಭೌತಶಾಸ್ತ್ರ, ಮೂಲ ಗಣಿತ
  • ಮೇ 10- ಅರ್ಥಶಾಸ್ತ್ರ, ಗಣಿತ
  • ಮೇ 11-ಹಿಂದಿ
  • ಮೇ 12- ಇಂಗ್ಲಿಷ್
  • ಮೇ 13- ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
  • ಮೇ 14- ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ
  • ಮೇ 15- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ , ಮಾಹಿತಿ ತಂತ್ರಜ್ಞಾನ, ಡಿಟೇಲ್ ಆಟೋಮೊಬೈಲ್.

ವಿದ್ಯಾರ್ಥಿಗಳು ಪರೀಕ್ಷೆಯ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಓದಿನ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ. ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರದ ವಿವರಗಳನ್ನು ಮುಂಚಿತವಾಗಿ ಪರಿಶೀಲಿಸಿ. ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆಗಳಿದ್ದರೆ ಮಂಡಳಿಯ ಅಧಿಕೃತ ಪ್ರಕಟಣೆಯನ್ನು ಗಮನಿಸಿ.