ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆರಿಟೇಜ್, ದೊಡ್ಲಾ, ತಿರುಮಲ, ಮದರ್ ಡೇರಿ ಸೇರಿದಂತೆ ಹಲವು ಖಾಸಗಿ ಬ್ರ್ಯಾಂಡ್ಗಳು ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿವೆ.
ಯಾವ ಬ್ರ್ಯಾಂಡ್‌ನಲ್ಲಿ ಎಷ್ಟು ಬೆಲೆ ಏರಿಕೆ?
- ಮದರ್ ಡೇರಿ: ಹಾಲಿನ ಪ್ರತಿ ಲೀಟರ್ಗೆ 2 ರೂ. ಹೆಚ್ಚಳ.
- ಹೆರಿಟೇಜ್: ಹಾಲಿನ ದರದಲ್ಲಿ 2.50 ರೂ.ನಿಂದ 5.90 ರೂ.ವರೆಗೆ ಹೆಚ್ಚಳ.
- ಹೆರಿಟೇಜ್ ಮೊಸರು: ಕೆಜಿಗೆ 14 ರೂ. ಹೆಚ್ಚಳ.
- ದೊಡ್ಲಾ ಹಾಲು: ಪ್ರತಿ ಲೀಟರ್ಗೆ 6 ರೂ. ಹೆಚ್ಚಳ.
- ದೊಡ್ಲಾ ಮೊಸರು: ಪ್ರತಿ ಕೆಜಿಗೆ 12 ರೂ. ಹೆಚ್ಚಳ.
ಇನ್ನು ನಂದಿನಿ ಹಾಲಿನ ದರ ಪರಿಷ್ಕರಣೆಯ ಬಳಿಕ ಕೆಎಂಎಫ್ಗೆ ರೈತರಿಂದ ಹಾಲು ಪೂರೈಕೆಯ ಪ್ರಮಾಣವೂ ಹೆಚ್ಚಾಗಿದೆ ಎನ್ನಲಾಗಿದೆ. ಕೇವಲ ಎರಡು ದಿನಗಳಲ್ಲಿ ಸುಮಾರು 2 ಲಕ್ಷ ಲೀಟರ್ ಹೆಚ್ಚುವರಿ ಹಾಲು ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಲಿನ ಖರೀದಿ ದರ ಹೆಚ್ಚಳದಿಂದ ರೈತರಿಗೆ ಅನುಕೂಲವಾಗಿದ್ದರೂ, ಗ್ರಾಹಕರಿಗೆ ಮಾತ್ರ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮತ್ತಷ್ಟು ಹೊರೆಯಾಗಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.



