ನ್ಯಾಯಾಲಯದಲ್ಲಿ ಹಾಜರಿದ್ದ ಹಾಗೂ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಯಾವುದೇ ಆರೋಪಿಗಳನ್ನು ತಾನು ಘಟನಾ ಸ್ಥಳದಲ್ಲಿ ನೋಡಿರಲಿಲ್ಲ ಎಂದು ತಿಳಿಸಿದ್ದಾನೆ. ಇದಕ್ಕೂ ಮೊದಲು ಪುನೀತ್ ನ್ಯಾಯಾಧೀಶರ ಮುಂದೆ CRPC 164ರ ಅಡಿಯಲ್ಲಿ ನೀಡಿದ್ದ ಹೇಳಿಕೆಯಿಂದ ಸಂಪೂರ್ಣವಾಗಿ ಹಿಂದೆ ಸರಿದಿದ್ದಾನೆ.ತನ್ನ ಹಿಂದಿನ ಹೇಳಿಕೆಗೆ ವಿರುದ್ಧವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಕೋರ್ಟ್ನಲ್ಲಿ ಆತನನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲಾಗಿದೆ.
ಸಾಕ್ಷಿಯ ಭಾಗಶಃ ಹೇಳಿಕೆಯನ್ನು ದಾಖಲಿಸಿಕೊಂಡಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಪ್ರತ್ಯಕ್ಷ ಸಾಕ್ಷಿಯೇ ಹೀಗೆ ಹೇಳಿಕೆ ಬದಲಿಸಿ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿರುವುದು ಪ್ರಕರಣದ ತನಿಖಾ ಹಂತದಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಪುನೀತ್ ಡಿ ಕಂಪೆನಿ ಫ್ಯಾನ್ ಪೇಜಿನ ಅಡ್ಮಿನ್ ಎನ್ನಲಾಗಿದ್ದು, ಪ್ರತ್ಯಕ್ಷ ಸಾಕ್ಷಿಯಾಗಿದ್ದ. ವಿಚಾರಣೆಗೆ ಗೈರಾದ ಕಾರಣ ಆತನ ವಿರುದ್ಧ ಸಮನ್ಸ್ ಜಾರಿ ಮಾಡಿ, ಬಂಧನದ ವಾರಂಟ್ ಹೊರಡಿಸಲಾಗಿತ್ತು.ಇದರಿಂದ ಇವತ್ತು ವಿಚಾರಣೆಗೆ ಹಾಜರಾಗಿದ್ದ ಆದರೆ ವಿಚಾರಣೆ ವೇಳೆ ಉಲ್ಟಾ ಹೊಡಿದ್ದಾನೆ. ಇದರಿಂದ ಪ್ರಕರಣ ಯಾವ ದಿಕ್ಕಿಗೆ ಹೋಗುತ್ತೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

