ರಾಜಧಾನಿ ಬೆಂಗಳೂರು ಎಂದರೇ ಹಾಗೇ…ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ ಎನ್ನುತ್ತದೆ. ಹಾಗೇ ಬಂದವರನೆಲ್ಲಾ ಒಡಲೊಳಗೆ ತುಂಬಿಸಿಕೊಂಡು ಪೋಷಿಸುತ್ತಾ ಬಂದಿದೆ. ಜಾತಿ ನೋಡಲ್ಲ..ಭಾಷೆ ಕೇಳಲ್ಲ. ಏನನ್ನೂ ಕೇಳದೇ ಬರೀ ಕೊಡುವುದನ್ನೇ ಮಾಡುತ್ತಿದೆ. ಉದಾರ ಮನಸ್ಸಿನ ಇಂಥ ಬೆಂಗಳೂರು ಕೋಟ್ಯಂತರ ಜನರ ಉದರೋಪಯಕ್ಕೆ ಕಾರಣವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜೀವನ ಕಟ್ಟಿಕೊಳ್ಳಲು ಇಲ್ಲಿಗೆ ಬಂದ ಹೊರ ರಾಜ್ಯದವರು ಬೆಂಗಳೂರಿನಲ್ಲಿ ನೆಲೆಸಿರುವವರ ಜೀವ ಹಾಗೂ ಜೀವನ ಇವೆರಡಕ್ಕೂ ಕಂಟಕವಾಗುತ್ತಿದ್ದಾರೆ.
ಹೊರ ರಾಜ್ಯದಿಂದ ಬಂದು ಇಲ್ಲಿನ ವಾತಾವರಣ ಹದಗೆಡೆಸುತ್ತಿರುವವರಲ್ಲಿ ಹೆಚ್ಚಿನವರು ಬಿಹಾರಿಗಳು ಎನ್ನುವುದು ಗಮನಾರ್ಹ ಇದನ್ನು ನಾವು ಹೇಳುತ್ತಾ ಇರುವುದಲ್ಲ.. ಎಲ್ಲವೂ ಪೊಲೀಸ್ ದಾಖಲೆಗಳಲ್ಲಿ ಉಲ್ಲೇಖವಾಗಿವೆ. ಇಲ್ಲಿ ನಾವು ಇವತ್ತು ಈ ಬಗ್ಗೆ ಮಾತಾಡಲು ಮತ್ತೊಂದು ಕಾರಣವಿದೆ ಅದೇನು ಎಂದರರೆ ಕಳೆದ ವಾರ ಬೆಂಗಳೂರು ಮೂಲದ ಸಂಸ್ಥೆಯೊಂದು ತಮ್ಮ ಕಂಪನಿ ನೇಮಕಾತಿಯಲ್ಲಿ ಉತ್ತರ ಭಾರತದ ನಿರ್ದಿಷ್ಟ ರಾಜ್ಯಗಳ ಅಭ್ಯರ್ಥಿಗಳಿಗೆ ಅವಕಾಶ ನೀಡಲ್ಲ ಎಂದು ಘೋಷಣೆ ಮಾಡಿತ್ತು. ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಎಸ್.ಜಿ ಕಾರ್ತಿಕ್ ಈ ಹೇಳಿಕೆ ಹೊರಡಿಸಿದ್ದರು. ಇದು ವ್ಯಾಪಕ ಚರ್ಚೆಗೆ ಕಾರಣವೂ ಆಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು ನಾವು ಮಕ್ಕಳೊಂದಿಗೆ ಕೆಲಸ ಮಾಡುತ್ತೇವೆ. ಇದರಿಂದ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಆ ಭಾಗಗಳಿಂದ ಬರುವ ಯುವಕರಿಗೆ ಜೀವನದ ಮೌಲ್ಯದ ಬಗ್ಗೆ ಅರಿವಿರುವುದಿಲ್ಲ ಎಂದಿದ್ದರು. ಕಾರ್ತಿಕ್ ಅವರು ಯಾವ ಅರ್ಥದಲ್ಲಿ ಹೇಳಿದ್ದರೋ ಏನೋ ಆದರೆ ಅಪರಾಧಿಕ ಹಿನ್ನೆಯಲ್ಲಿ ನೋಡುವುದಾದರೆ ಉತ್ತರ ರಾಜ್ಯಗಳಿಂದ ಬಂದವರಿಂದ ಬೆಂಗಳೂರು ತತ್ತರಿಸುತ್ತಿದೆ ಎಂಬ ಮಾತುಗಳು ಇವೆ. ಸರಿ ಹಾಗಿದ್ರೆ ಉತ್ತರ ರಾಜ್ಯಗಳಿಂದ ಬಂದವರಿಂದ ಏನೆಲ್ಲಾ ಅನಾಹುತಗಳು ಆಗುತ್ತಿವೆ ಎಂಬುದನ್ನು ಅವಲೋಕನ ಮಾಡೋಣಫುಡ್ ಡೆಲಿವರಿ ನೆಪದಲ್ಲಿ ಡ್ರಗ್ಸ್ ಸಪ್ಲೈ – ಬಿಹಾರಿ ಬಾಯ್ ಬಂಧನ(2022)
2022ರಲ್ಲಿ ಸಿಸಿಬಿ ಪೊಲೀಸರು ಬಿಹಾರ ಮೂಲದ ಅಭಿಜಿತ್ ಎಂಬಾತನನ್ನು ಬಂಧಿಸಿದ್ದರು. ಅಷ್ಟು ದೂರದಿಂದ ಬಂದಿದ್ದ ಈ ಖತರ್ನಾಕ್ ಆಸಾಮಿ ಇಲ್ಲಿ ಫುಡ್ ಡೆಲಿವರಿ ಹೆಸರಲ್ಲಿ ಮಾಡುತ್ತಾ ಇದ್ದಿದ್ದು ಡ್ರಗ್ಸ್ ಸಪ್ಲೈ. ಆವತ್ತು ಈತನನ್ನು ಬಂಧಿಸಿದ ಸಿಸಿಬಿ ಪೊಲೀಸರು ಮೂರು ಕೆಜಿ ಗಾಂಜಾ ಹಾಗೂ 12 ಎಲ್ ಎಸ್ ಡಿ ಸ್ಟ್ಯಾಂಪ್ ಗಳನ್ನು ವಶಕ್ಕೆ ಪಡೆದು ಕೊಂಡಿದ್ದರು. ಇವುಗಳ ಮೌಲ್ಯ ಸುಮಾರು ನಾಲ್ಕು ಲಕ್ಷ ರೂಪಾಯಿಗಳು. ಈತ ಬೆಂಗಳೂರಿಗೆ ಬಂದಿದ್ದು ಒಂದು ಬದುಕು ಕಟ್ಟಿುಕೊಳ್ಳಲು. ಆದರೆ ಮಾಡುತ್ತಾ ಇದ್ದಿದ್ದು ಮಾತ್ರ ಇನ್ನೊಬ್ಬರ ಬದುಕನ್ನು ಹಾಳು ಮಾಡುವ ಕೆಲಸ. ಈತನೊಬ್ಬನಷ್ಟೇ ಅಲ್ಲ.. ಇಂಥ ಅನೇಕ ಉದಾಹರಣೆಗಳು ಇವೆ.
ಕೊರಿಯರ್ ಮೂಲಕ ಡ್ರಗ್ಸ್ ಮಾರಾಟ- ಬಿಹಾರಿ- ದೆಹಲಿಗನ ಅರೆಸ್ಟ್ (2022)
ಇನ್ನು ಐದು ಮಂದಿ ಬಿಹಾರ ಹಾಗೂ ದೆಹಲಿಯಿಂದ ಬಂದ ಕಿಲಾಡಿಗಳು ಡ್ರಗ್ಸ್ ಮಾರಾಟ ಮಾಡಲು ಐನಾತಿ ಐಡಿಯಾ ಮಾಡಿಕೊಂಡಿದ್ದರು. ಅವರು ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಾ ಇದ್ದಿದ್ದು ಹೇಗೆಂದ್ರೆ ಕೊರಿಯರ್ ಮೂಲಕ.. ಯಾವುದೇ ಅನುಮಾನ ಬಾರದೇ ಇರಲಿ ಅಂತ ಹುಟ್ಟು ಹಬ್ಬದ ಗಿಫ್ಟ್ ಹಾಗೂ ಮೆಡಿಕಲ್ ಎಮರ್ಜೆನ್ಸಿ ಕಿಟ್ ಮೂಲಕ ಡ್ರಗ್ಸ್ ಡಿಲೆವರಿ ಮಾಡುತ್ತಾ ಇದ್ದರು. ಇವರನ್ನು ಬಂಧಿಸಿದ ಸಿಸಿಬಿ ಪೊಲೀಸರು ಸುಮಾರು ಎರಡ ಕೋಟಿ ಮೌಲ್ಯದ MDMA, ecstasy, LSD, cocaine, hashish ಇವುಗಳನ್ನು ವಶಕ್ಕೆ ಪಡೆದುಕೊಂಡರು
ಕಾಲೇಜುಗಳ ಬಳಿ ಡ್ರಗ್ಸ ಮಾರಾಟ ಐವರು ಉತ್ತರದವರ ಬಂಧನ(2017)
2017ರಲ್ಲಿ ತಿಲಕ್ ನಗರ ಪೊಲೀಸರು ಬಿಹಾರ ಮೂಲದ ಸೂರಜ್ ಕುಮಾರ್, ಕಮಲೇಶ್ ಕುಮಾರ್, ಒಡಿಸ್ಸಾದ ಪೂರ್ಣ ಚಂದ್ರನಾಥ್ ಹಾಗೂ ಉತ್ತರ ಪ್ರದೇಶದ ವಿಜಯ್ ಕುಮಾರ್ ಪಾಲ್ ಎಂಬ ನಾಲ್ವರನ್ನು ಬಂಧಿಸಿದ್ದರು.ಇವರು ಖಾಸಗಿ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು. ಕಾಲೇಜುಗಳಿಗೆ ಹೋಗಿ ಗಾಂಜಾ ಮಾರಾಟ ಮಾಡುತ್ತಿದ್ದರು.
ಸಿಕ್ಕಿ ಬಿದ್ದ ಡ್ರಗ್ಸ್ ಮಾರಾಟ ಜಾಲದಲ್ಲಿದ್ದ ಬಿಹಾರಿಗ ( 2023)
2023ರಲ್ಲಿ ಸಿಸಿಬಿ ಆ್ಯಂಟಿ ನಾರ್ಕೋಟಿಕ್ ದಳ ಅಖಿಲೇಶ್ ಕುಮಾರ್ ಎಂಬಾತನನ್ನು ಬಂಧಿಸುತ್ತೆ. ಅಚ್ಚರಿ ಎಂದರೆ ಈತ ಕೂಡಾ ಬಿಹಾರಿಗನೇ.. ಪೊಲೀಸರ ಪ್ರಕಾರ ಬಂಧಿತ ಅಖಿಲೇಶ್ ಕುಮಾರ್ ಈ ಪೊಲೀಸರಿಗೆ ಬೇಕಿದ್ದ ಹಳೇ ಗಿರಾಕಿ. ಆತನ ಮೇಲೆ 2018ರಲ್ಲೇ ವೈಟ್ ಫೀಲ್ಡ್, ಆಡುಗೋಡಿ, ಚಾಮರಾಜಪೇಟೆ, ಹಾಗೂ ಕಾಟನ್ ಪೇಟೆಯಲ್ಲಿ ಡ್ರಗ್ಸ್ ಮಾರಾಟಕ್ಕೆ ಸಂಬಂಧಪಟ್ಟಂತೆ NDPS ಆ್ಯಕ್ಟ್ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಗಾಂಜಾ ಮಾರಾಟ- ಪಶ್ಚಿಮ ಬಂಗಾಳ ಮೂಲದವನು ಅರೆಸ್ಟ್ (2024)
2024ರಲ್ಲಿ ಮಾರತ್ ಹಳ್ಳಿ ಪೊಲೀಸರು ಬಿಜಾಯ್ ಕುಜೂರ್ ಎಂಬಾತನನ್ನು ಬಂಧಿಸಿದರು. ಆತನ ಮೂಲ ಪಶ್ಚಿಮ ಬಂಗಾಳ. ಆತ ಅಸ್ಸಾಂನಿಂದ ಸ್ಮಗ್ಲಿಂಗ್ ಮೂಲಕ ಬೆಂಗಳೂರಿಗೆ ಗಾಂಜಾ ತರಿಸುತ್ತಿದ್ದು ಅದನ್ನು ಕರಿಯಮ್ಮನ ಅಗ್ರಹಾರದಲ್ಲಿರುವ ಲೇಬರ್ ಶೆಡ್ ನಲ್ಲಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ. ಆತನಿಂದ ಸುಮಾರು ಏಳುವರೆ ಲಕ್ಷ ಮೌಲ್ಯದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು
ಒಡಿಸ್ಸಾ ಗಾಂಡಾ ಐಟಿ ಉದ್ಯೋಗಿಗಳಿಗೆ ಮಾರಾಟ(2018)
ಇದು ನಿಜಕ್ಕೂ ವಿಚಿತ್ರ ಪ್ರಕರಣ ಇದರಲ್ಲಿ ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳೇ ಟಾರ್ಗೆಟ್ . ಇದರಲ್ಲಿ ಮೈಕೋ ಲೇಔಟ್ ಪೊಲೀಸರು ಜುಗಾರ್ ಸಾಮಲ್ ಮತ್ತು ಲೋಕನಾಥ್ ಎಂಬ ಇಬ್ಬರನ್ನು ಬಂಧಿಸಿದ್ದರು ಇವರಿಂದ 15 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಇವರಿಬ್ಬರು ಒಡಿಸ್ಸಾದಿಂದ ಅತ್ಯಂತ ಕಡಿಮೆ ಬೆಲೆಗೆ ಗಾಂಜಾ ತಂದು ಇಲ್ಲಿನ ಸಾಫ್ಟ್ ವೇರ್ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು
ಗಾಂಜಾ ಮಾರಾಟ ಒಡಿಸ್ಸಾ-ಬಿಹಾರಿ ಬಂಧನ (2025)
2025ರಲ್ಲಿ ಮತ್ತೊಬ್ಬ ಒಡಿಸ್ಸಾ ಮೂಲದವನು ಇದೇ ಗಾಂಜಾ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದ ವಿವೇಕನಗರ ಪೊಲೀಸರು ಒಡಿಸ್ಸಾ ಮೂಲದ ಗೋಪಿನಾಥ್ ಸಾಮಲ್ ಎಂಬಾತನನ್ನು ಬಂಧಿಸಿ ಆತನಿಂದ 11.15 ಕೆಜಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಈತ ಕೂಡಾ ಒಡಿಸ್ಸಾದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಇಲ್ಲಿ ಮಾರಾಟ ಮಾಡುತ್ತಿದ್ದ. ಮತ್ತೊಂದು ಪ್ರಕರಣದಲ್ಲಿ ಬಿಹಾರ ಮೂಲದ ಬಿರೇಂದ್ರ್ ಎಂಬಾತನನ್ನೂ ಅರೆಸ್ಟ್ ಮಾಡಲಾಗಿತ್ತು.

ಮುಂದುವರೆದು ಮಾತನಾಡಿದ ಅವರು, " ವಲಸಿಗರ ಮೇಲೆ ನಿಗಾ ಇಡುವ, ನೋಂದಣಿ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು. ಆಗ ರಾಜ್ಯದಲ್ಲಿ ವಲಸಿಗರಿಂದ ಯಾವುದೇ ರೀತಿ ಅಹಿತಕರವಾದ, ಸಮಾಜ ವಿರೋಧಿಯಾದ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಒಂದು ವೇಳೆ ಅಂತಹ ಘಟನೆ ಸಂಭವಿಸಿದರೂ ತನಿಖೆಗೆ ಕಷ್ಟವಾಗುವುದಿಲ್ಲ. ರಾಜ್ಯದ ಗೃಹ ಇಲಾಖೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ವಲಸಿಗರು ನೊಂದಾಯಿಸುವ ಒಂದು ವ್ಯವಸ್ಥೆ ಜಾರಿಗೆ ತರಬೇಕು. ಇಲ್ಲವಾದರೆ ಎಲ್ಲಿಂದಲೋ ಬಂದು ಕಾನೂನು ಸುವ್ಯವಸ್ಥೆ ಹಾಳು ಮಾಡುವವರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ" ಎಂದು ಗೃಹ ಇಲಾಖೆಗೆ ಒತ್ತಾಯಿಸಿದರು.




