ಚಿತ್ರಮಂದಿರದಿಂದ ಹೊರಬಂದ ಜನರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಫಸ್ಟ್ ಹಾಫ್ ಅಂತೂ ಸಖತ್ ಆಗಿದೆ. ನೆಲ್ಸನ್ ಶೈಲಿಯ ಡಾರ್ಕ್ ಕಾಮಿಡಿ ಮತ್ತು ಅನಿರುದ್ಧ್ ಅವರ ಬಿಜಿಎಮ್ ಸೀನ್ಗಳಿಗೆ ಸೂಪರ್ ಫೀಲ್ ಕೊಡುತ್ತೆ ಎಂದು ಎಲ್ಲೆಡೆ ಹೆಚ್ಚು ಮೆಚ್ಚಿಗೆ ವ್ಯಕ್ತವಾಗುತ್ತಿದೆ. ಇಂಟರ್ವಲ್ ಬ್ಲಾಕ್ ತನಕ ಸಿನಿಮಾ ಪ್ರೇಕ್ಷಕರನ್ನು ಕಟ್ಟಿಹಾಕುತ್ತದೆ.
ಇನ್ನು ಸೀಕ್ವೆಲ್ನ ಪ್ರಮುಖ ಆಕರ್ಷಣೆಯಾಗಿದ್ದ ಅತಿಥಿ ಪಾತ್ರಗಳಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವಣ್ಣನ ಎಂಟ್ರಿಗೆ ಥಿಯೇಟರ್ನಲ್ಲಿ ಸೀಟಿ, ಚಪ್ಪಾಳೆಗಳ ಮಹಾಮಳೆಯೇ ಹರಿದುಬಂದಿದೆ. ಜೊತೆಗೆ ಮೋಹನ್ಲಾಲ್ ಮತ್ತು ಹೃತಿಕ್ ರೋಷನ್ ಅವರ ಕ್ಯುಟೋ ಕ್ಯಾರೆಕ್ಟರ್ಗಳು ಮಾಸ್ ಪ್ರಿಯರಿಗೆ ಇಷ್ಟವಾಗಿವೆ. ಆದರೆ ಕೆಲವರು ನಿರೀಕ್ಷೆ ತಕ್ಕೆಂತೆ ಅತಿಥಿ ಪಾತ್ರಗಳು ಇರಲಿಲ್ಲ ಎಂದು ಪ್ರೇಕ್ಷಕರು ಹೇಳಿದ್ದಾರೆ. ಇನ್ನು ಎಸ್.ಜೆ. ಸೂರ್ಯ ಹಾಗೂ ವಿದ್ಯಾ ಬಾಲನ್ ಪಾತ್ರಗಳು ಕಥೆಗೆ ಅಷ್ಟಾಗಿ ಬಲ ತಂದಿಲ್ಲ ಎನ್ನುವುದು ಕೆಲವರ ಅಭಿಪ್ರಾಯ.
ಸೆಕೆಂಡ್ ಹಾಫ್ ಬರುವಷ್ಟರಲ್ಲಿ ಕಥೆಯ ವೇಗ ಕೊಂಚ ಕಡಿಮೆಯಾಗಿ, ಹಳೆಯ ಫಾರ್ಮುಲಾ ಶೈಲಿಯಂತೆ ಅನಿಸುತ್ತದೆ. ಚಿತ್ರಕಥೆಯಲ್ಲಿ ಹೊಸತನದ ಕೊರತೆ ಎದ್ದು ಕಾಣುತ್ತದೆಯಾದರೂ, ರಜನಿ ಅವರ ಮಾಸ್ ಎಲಿವೇಶನ್ ಸೀನ್ಗಳು ಅದನ್ನು ಸರಿದೂಗಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಪ್ರೇಕ್ಷಕರು.
ಒಟ್ಟಾರೆಯಾಗಿ ಜೈಲರ್ 2 ಮೊದಲ ಭಾಗದಷ್ಟೇ ಹೊಸತನ ಹೊಂದಿಲ್ಲದಿದ್ದರೂ, ರಜನಿಕಾಂತ್ ಅಭಿಮಾನಿಗಳಿಗೆ ಮತ್ತು ಮಾಸ್ ಸಿನಿಮಾ ಪ್ರಿಯರಿಗೆ ಸಂಪೂರ್ಣ ಪೈಸಾ ವಸೂಲ್ ಮನರಂಜನೆ ನೀಡುವುದರಲ್ಲಿ ಅನುಮಾನವಿಲ್ಲ.
ಸಿನಿಮಾ ಅಂದಮೇಲೆ ಪಾಸಿಟಿವ್ ಮತ್ತು ನೆಗೆಟಿವ್ ರಿವ್ಯೂಗಳು ಬರೋದು ಕಾಮನ್. ಒಂದೇ ಸಿನಿಮಾನ ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ನೋಡ್ತಾರೆ, ಹಾಗಾಗಿ ಎಲ್ಲರ ಅಭಿಪ್ರಾಯವೂ ಒಂದೇ ತರ ಇರಲ್ಲ. ಬಾಕ್ಸ್ ಆಫೀಸ್ ಗಳಿಕೆ ಮತ್ತು ಫೇಮ್ ಅಷ್ಟೇ ಅಲ್ಲದೆ, ಪ್ರೇಕ್ಷಕರನ್ನು ರಂಜಿಸುವುದು ಚಿತ್ರತಂಡದ ಮುಖ್ಯ ಉದ್ದೇಶವಾಗಿರುತ್ತದೆ. ಹಾಗಾಗಿ, ಜನರಿಗೆ ಎಂಥಾ ಸಿನಿಮಾಗಳು ಇಷ್ಟ ಆಗ್ತಿವೆ ಅಂತ ತಿಳಿದುಕೊಂಡು ಮುಂದಿನ ಸಿನಿಮಾ ಮಾಡಲು ಈ ಎಲ್ಲ ವಿಮರ್ಶೆಗಳು ಸಹಾಯ ಮಾಡುತ್ತವೆ.




