ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಇಂದು ಕೊಂಚ ಸಮಾಧಾನ ತರುವ ಸುದ್ದಿಯೊಂದು ಬಂದಿದೆ. ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಬಂಗಾರದ ಬೆಲೆಯಲ್ಲಿ ಇಂದು ಸಣ್ಣ ಪ್ರಮಾಣದ ಇಳಿಕೆ ಕಂಡುಬಂದಿದೆ. ನೀವು ಇವತ್ತು ಆಭರಣ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಮಾರುಕಟ್ಟೆಯಲ್ಲಿ ಇಂದಿನ ದರ ಹೇಗಿದೆ ಎಂಬುದನ್ನು ಒಮ್ಮೆ ನೋಡಿಕೊಳ್ಳಿ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಮೇಲೆ 85 ರೂಪಾಯಿ ಕಡಿಮೆಯಾಗಿದ್ದು, ಈಗ ಅದರ ಬೆಲೆ 14,205 ರೂಪಾಯಿಗೆ ಬಂದು ತಲುಪಿದೆ. ಅದೇ ರೀತಿ, 8 ಗ್ರಾಂ ಚಿನ್ನದ ಆಭರಣಕ್ಕೆ 1,13,640 ರೂಪಾಯಿ ಹಾಗೂ 10 ಗ್ರಾಂ ಬೆಲೆ 1,42,050 ರೂಪಾಯಿಯಾಗಿದೆ. ಇನ್ನು 100 ಗ್ರಾಂ ತೂಕದ ಆಭರಣ ತಗೆದುಕೊಳ್ಳುವುದಾದರೆ 14,20,500 ರೂಪಾಯಿ ನೀಡಬೇಕಾಗುತ್ತದೆ.
 
ಶುದ್ಧ ಚಿನ್ನ ಅಂದರೆ 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 92 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 15,497 ರೂಪಾಯಿಗೆ ಮಾರಾಟವಾಗುತ್ತಿದೆ. ಇದರ ಪ್ರಕಾರ 8 ಗ್ರಾಂಗೆ 1,23,976 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ನಾಣ್ಯ ಅಥವಾ ಬಾರ್‌ಗೆ 1,54,970 ರೂಪಾಯಿ ನಿಗದಿಯಾಗಿದೆ. 100 ಗ್ರಾಂ ಅಪರಂಜಿ ಬಂಗಾರದ ಬೆಲೆ 15,49,700 ರೂಪಾಯಿಯಾಗಿದೆ.

ಬಂಗಾರದ ಜೊತೆಗೆ ಬೆಳ್ಳಿಯ ದರದಲ್ಲೂ ಸ್ವಲ್ಪ ಇಳಿಕೆಯಾಗಿದೆ. ನಗರದಲ್ಲಿ ಇಂದಿನ 1 ಗ್ರಾಂ ಬೆಳ್ಳಿಯ ಬೆಲೆ 245 ರೂಪಾಯಿಯಿದ್ದರೆ, 10 ಗ್ರಾಂ ಬೆಳ್ಳಿಗೆ 2,450 ರೂಪಾಯಿ ಇದೆ. ಇನ್ನು ಒಂದು ಕೆಜಿ ಬೆಳ್ಳಿ ಖರೀದಿಸಬೇಕೆಂದರೆ 2,45,000 ರೂಪಾಯಿ ಪಾವತಿಸಬೇಕಾಗುತ್ತದೆ.

ವಿಶೇಷ ದಿನಗಳ ಹತ್ತಿರದಲ್ಲಿ ಬೆಲೆ ಕೊಂಚ ಇಳಿದಿರುವುದು ಗೃಹಿಣಿಯರಿಗೆ ಹಾಗೂ ಹೂಡಿಕೆದಾರರಿಗೆ ಸಂತಸ ತಂದಿದೆ.