ದಸರಾ ಹಬ್ಬದ ಶುಭ ದಿನದಂದು ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಕೇವಲ ಕೆಲವೇ ದಿನಗಳಲ್ಲಿ ಭಾರತದಲ್ಲಿ ಬ್ಲಾಕ್ಡ್ ಸೀಟ್ ಹೊರತುಪಡಿಸಿ 13.30 ಕೋಟಿಗೂ ಅಧಿಕ ಬುಕಿಂಗ್ ಆಗಿದೆ. ಇನ್ನು ವಿಶ್ವದಾದ್ಯಂತ ಲೆಕ್ಕ ಹಾಕಿದರೆ ಈ ಪ್ರೀ-ಸೇಲ್ಸ್ ಕಲೆಕ್ಷನ್ ಈಗಾಗಲೇ 20 ಕೋಟಿ ಗಡಿ ದಾಟಿದೆ. ದೇಶದಲ್ಲೇ ಬರೋಬ್ಬರಿ 4,600ಕ್ಕೂ ಹೆಚ್ಚು ಶೋಗಳಿಂದ 2.46 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ.
ಹಿಂದಿ ಆವೃತ್ತಿ ಎಂದಿನಂತೆ ಮೊದಲ ಸ್ಥಾನದಲ್ಲಿದ್ದರೆ, ಸೌತ್ ಭಾಷೆಗಳ ಪೈಕಿ ಕನ್ನಡ ಡಬ್ಬಿಂಗ್ ಆವೃತ್ತಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಕರ್ನಾಟಕದಲ್ಲಿ ನಮ್ಮ ರಾಕಿ ಭಾಯ್ ಕ್ರೇಜ್‌ನಿಂದಾಗಿ ಈಗಾಗಲೇ 1.27 ಕೋಟಿಗೂ ಹೆಚ್ಚಿನ ಟಿಕೆಟ್‌ಗಳು ಸೇಲ್ ಆಗಿವೆ. ವಿಶೇಷ ಅಂದರೆ ಅಡ್ವಾನ್ಸ್ ಬುಕಿಂಗ್ ಕಲೆಕ್ಷನ್‌ನಲ್ಲಿ ನಮ್ಮ ಬೆಂಗಳೂರು, ಮಹಾರಾಷ್ಟ್ರದ ಮುಂಬೈ ನಗರವನ್ನೇ ಹಿಂದಿಕ್ಕಿ ಹೊಸ ದಾಖಲೆ ಬರೆದಿದೆ. ಬೆಂಗಳೂರಿನಲ್ಲಿ ಟಿಕೆಟ್ ಬುಕಿಂಗ್ ಶೇ. 172 ರಷ್ಟು ಏರಿಕೆ ಕಂಡಿದೆ. ಮುಂಬೈನ ಪ್ರೀಮಿಯಂ ಐಮ್ಯಾಕ್ಸ್ 3D ಶೋಗಳ ಟಿಕೆಟ್ ಬೆಲೆ 3,170 ವರೆಗೆ ತಲುಪಿದ್ದರೂ ಫ್ಯಾನ್ಸ್ ಮುಗಿಬಿದ್ದು ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಮೊದಲ ದಿನವೇ 200 ಕೋಟಿ ಓಪನಿಂಗ್ ಪಕ್ಕಾ ಎನ್ನಲಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ಚರಿತ್ರೆ ಸೃಷ್ಟಿಯಾಗುವುದು ಖಚಿತ.



