ಬೆಂಗಳೂರು ಟೆಕ್ ಸಮಿಟ್ 2026 ನವೆಂಬರ್ 17ರಿಂದ ಬೆಂಗಳೂರಿನಲ್ಲಿ ನಡೆಯಲಿದ್ದು, ತಂತ್ರಜ್ಞಾನ, ನವೋದ್ಯಮ, ಹೂಡಿಕೆ ಮತ್ತು ಜಾಗತಿಕ ಸಹಭಾಗಿತ್ವದ ಪ್ರಮುಖ ವೇದಿಕೆಯಾಗಿ ಗಮನ ಸೆಳೆಯಲಿದೆ. ಈ ಬಾರಿಯ ಸಮಿಟ್‌ನಲ್ಲಿ ವಿಶೇಷ ಎಐ ಮತ್ತು ರೋಬೋಟಿಕ್ಸ್ ಪೆವಿಲಿಯನ್ ಪ್ರಮುಖ ಆಕರ್ಷಣೆಯಾಗಲಿದೆ.

ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಮತ್ತು ಆಟೋನಮಸ್ ಸಿಸ್ಟಮ್ಸ್ ಕ್ಷೇತ್ರಗಳಲ್ಲಿ ಭಾರತ ವೇಗವಾಗಿ ಬೆಳೆಯುತ್ತಿರುವ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಪೆವಿಲಿಯನ್‌ ಅನ್ನು ರೂಪಿಸಲಾಗಿದೆ. ವಿಶೇಷ ಪೆವಿಲಿಯನ್ ಭಾರತದ ರೋಬೋಟಿಕ್ಸ್ ಮತ್ತು ಆಟೋನಮಸ್ ಸಿಸ್ಟಮ್ಸ್ ಎಕೋಸಿಸ್ಟಮ್‌ನ ಸ್ಟಾರ್ಟ್ಅಪ್‌ಗಳು, ತಂತ್ರಜ್ಞಾನ ಸಂಸ್ಥೆಗಳು, ಸಂಶೋಧಕರು ಹಾಗೂ ಉದ್ಯಮಗಳಿಗೆ ತಮ್ಮ ನವೀನ ತಂತ್ರಜ್ಞಾನಗಳನ್ನು ಜಾಗತಿಕ ಪ್ರೇಕ್ಷಕರ ಮುಂದೆ ಪ್ರದರ್ಶಿಸಲು ಅವಕಾಶ ಒದಗಿಸಲಿದೆ.

ಇದರೊಂದಿಗೆ ಉದ್ಯಮದ ಪ್ರಮುಖರು ಮತ್ತು ಅಂತಾರಾಷ್ಟ್ರೀಯ ತಂತ್ರಜ್ಞಾನ ಸಮುದಾಯದೊಂದಿಗೆ ಸಂವಾದ ನಡೆಸಲು, ಹೊಸ ಪಾಟ್‌ನರ್‌ಶಿಪ್‌ಗಳನ್ನು ನಿರ್ಮಿಸಲು ಹಾಗೂ ಎಂಟರ್‌ಪ್ರೈಸಸ್‌ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶದ ಅವಕಾಶಗಳನ್ನು ಅನ್ವೇಷಿಸಲು ವೇದಿಕೆ ಸಿಗಲಿದೆ.

ಬೆಂಗಳೂರು ಟೆಕ್ ಸಮಿಟ್ 2026, ಬೆಂಗಳೂರು ಮತ್ತು ಕರ್ನಾಟಕವನ್ನು ತಂತ್ರಜ್ಞಾನ, ಇನ್ನೋವೇಶನ್, ಹೂಡಿಕೆ ಮತ್ತು ಸಹಭಾಗಿತ್ವದ ಜಾಗತಿಕ ಮೀಟಿಂಗ್ ಪಾಯಿಂಟ್ ಆಗಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಸಮಿಟ್ ಮೂಲಕ ಭಾರತದ ಡೀಪ್-ಟೆಕ್ ಎಕೋಸಿಸ್ಟಮ್ ಜಗತ್ತಿನ ವಿವಿಧ ಭಾಗಗಳಲ್ಲಿರುವ ಉದ್ಯಮ, ಹೂಡಿಕೆದಾರರು, ತಂತ್ರಜ್ಞಾನ ಸಂಸ್ಥೆಗಳು ಮತ್ತು ಸಂಶೋಧನಾ ಸಮುದಾಯಗಳೊಂದಿಗೆ ಮತ್ತಷ್ಟು ಸಂಪರ್ಕ ಸಾಧಿಸಲಿದೆ.

ಎಐ, ರೋಬೋಟಿಕ್ಸ್, ಆಟೋನಮಸ್ ಸಿಸ್ಟಮ್ಸ್ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಹೊಸ ಆವಿಷ್ಕಾರಗಳು, ಸಹಭಾಗಿತ್ವದ ಅವಕಾಶಗಳು ಮತ್ತು ಜಾಗತಿಕ ಮಾರುಕಟ್ಟೆ ಸಂಪರ್ಕಗಳಿಗೆ ಬೆಂಗಳೂರು ಟೆಕ್ ಸಮಿಟ್ 2026 ಹೊಸ ವೇದಿಕೆಯನ್ನು ಒದಗಿಸಲಿದೆ.