ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ನಟಿ ರನ್ಯಾ ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದರು ಈ ವೇಳೆ ಹಲವಾರು ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬಿದ್ದಿವೆ. ಮಾರ್ಚ್ 7, 2024 ಮತ್ತು ಫೆಬ್ರವರಿ 2, 2025ರ ನಡುವಿನ ಕೇವಲ ಒಂದು ವರ್ಷದ ಅವಧಿಯಲ್ಲಿ ಈ ದಂಧೆ ನಡೆದಿದೆ ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ. ರನ್ಯಾ ರಾವ್ ದುಬೈನಿಂದ ಭಾರತಕ್ಕೆ ಬರೋಬ್ಬರಿ 113 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ತನಿಖೆಯಲ್ಲಿ ಸ್ಪಷ್ಟವಾಗಿ ಸಾಬೀತಾಗಿದೆ.
ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ 399 ಪುಟಗಳ ಸುದೀರ್ಘ ಆದೇಶದ ಹೊರಡಿಸಿದ್ದು ಅದರಲ್ಲಿ ನಟಿ ರನ್ಯಾ ರಾವ್ ಅಂತರರಾಷ್ಟ್ರೀಯ ಮಟ್ಟದ ಗೋಲ್ಡ್ ಸ್ಮಗ್ಲಿಂಗ್ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿರುವುದನ್ನು ಸಾಕ್ಷಿ ಸಮೇತ ಸಾಬೀತು ಪಡಿಸಲಾಗಿದೆ. ದಂಡದ ಮೊತ್ತ ಹಾಗೂ ಆದೇಶದ ಅಧಿಕೃತ ಪ್ರತಿಯನ್ನು ಕಸ್ಟಮ್ಸ್ ಇಲಾಖೆ ಈಗಾಗಲೇ ರನ್ಯಾರಾವ್ಗೆ ಕಳುಹಿಸಿದೆ.
ವಿಚಾರಣೆಯಲ್ಲಿ ಮತ್ತಷ್ಟು ವಿಚಾರಗಳು ಬಯಲಾಗಿದೆ ಅದರಲ್ಲೂ ರನ್ಯಾರಾವ್ ತರುಣ್ ಸೇರಿದಂತೆ ಇತರ ಮೂವರ ಜೊತೆಗೂಡಿ ಈ ಬೃಹತ್ ಚಿನ್ನದ ಕಳ್ಳಸಾಗಣೆ ವಹಿವಾಟು ನಡೆಸಿದ್ದುಗೊತ್ತಾಗಿದೆ. ಈ ಹಿಂದೆ ಹಿಂದೆ ಡಿಆರ್ಐ ಅಧಿಕಾರಿಗಳು ರನ್ಯಾ ರಾವ್ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 2.5 ಕೋಟಿ ರೂಪಾಯಿ ನಗದು ಮತ್ತು 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು. ಇದೀಗ ಕಸ್ಟಮ್ಸ್ ಅಧಿಕಾರಿಗಳು ಇಷ್ಟು ಭಾರೀ ಮೊತ್ತದ ದಂಡವನ್ನು ರನ್ಯಾರಾವ್ ಗೆ ವಿಧಿಸಿದ್ದು ಆಕೆಗೆ ನೀಡಿರುವ ದೊಡ್ಡ ಶಾಕ್ ಎನ್ನುವುದರಲ್ಲಿ ಎರಡು ಮಾತಿಲ್ಲ.





