ಬೈನಿಂದ ಇಸ್ರೇಲ್ಗೆ ಪ್ರಯಾಣಿಸುತ್ತಿದ್ದ ಅರಬ್ ಎಮಿರೇಟ್ಸ್ನ ವಿಮಾನದ ಕಾಕ್ಪಿಟ್‌ ನಲ್ಲಿ  ನಿನ್ನೆ (ಬುಧವಾರ) ನಡೆದ ಸಂಘರ್ಷ ಬೆಚ್ಚಿ ಬೀಳಿಸುವಂಥದ್ದು. ಇದು ವಿಮಾನ ಪ್ರಯಾಣದ ಭದ್ರತೆಗೆ ಧಕ್ಕೆ ತರುವಂತ ವಿಚಾರ. ಇದೀಗ ಇದರ ಬಗ್ಗೆ ಹಲವು ಅನುಮಾನಗಳು.. ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇಷ್ಟೆಲ್ಲದರ ಮಧ್ಯೆ ಮತ್ತೊಂದು ವಿಚಾರ ಗೊತ್ತಾಗಿದೆ. ಸಹ-ಪೈಲಟ್ನಿಂದ ನಡೆದ ವಿಮಾನ ವಿಧ್ವಂಸಕ ಕೃತ್ಯದ ಪ್ರಯತ್ನವನ್ನು ತಡೆಗಟ್ಟಿದ್ದು ಬೇರೆ ಯಾರೂ ಅಲ್ಲ ಫ್ಲೈದುಬೈ ಸಂಸ್ಥೆಯ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಈ ಮೂಲಕ ಅವರು 180ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ್ದಾರೆ ಎಂದು ಇಸ್ರೇಲ್ನ 'ವೈನೆಟ್ ನ್ಯೂಸ್' ಮತ್ತು 'ಚಾನೆಲ್ 12' ಮಾಧ್ಯಮಗಳು ವರದಿ ಮಾಡಿವೆ.

ವಿಮಾನ ಆಗಸದಲ್ಲಿ ಹಾರಾಡುತ್ತಿದ್ದಾಗ ಒಮಾನಿ ಸಹ ಪೈಲಟ್ ಇದ್ದಕ್ಕಿದ್ದಂತೆ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಚಾಕುವಿನಿಂದ ಭೀಕರವಾಗಿ ದಾಳಿ ಮಾಡಿದ. ಆದರೆ ಆತನಿಂದ ಇರಿತಕ್ಕೊಳದರೂ ಸ್ಮಿತ್ ಮಚ್ಚಾರ್ ಎದೆಗುಂದಲಿಲ್ಲ ಸಹ ಪೈಲಟ್ ವಿಮಾನವನ್ನು ನೆಲಕ್ಕೆ ಅಪ್ಪಳಿಸದಂತೆ ಅಥವಾ ಹೈಜಾಕ್ ಮಾಡದಂತೆ ತೀವ್ರವಾಗಿ ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಕಂಟ್ರೋಲ್ ರೂಮ್ ನಿಂದ ಹೊರಬಂದ ಕಿರುಚಾಟ ಕೇಳಿ, ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದ ಸಾಧಾರಣ ಉಡುಪಿನಲ್ಲಿದ್ದ ಇತರೆ ಪೈಲಟ್ಗಳು ಹಾಗೂ ಪ್ರಯಾಣಿಕರು ಕಾಕ್ ಪೀಟ್ ಗೆ ಧಾವಿಸಿ ಬಂದಿದ್ದಾರೆ. ಬಳಿಕ, ಪ್ರಯಾಣಿಕರ ತಂಡದಲ್ಲಿದ್ದ ಪೈಲಟ್ಗಳು ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.

ಹಲ್ಲೆಗೊಳಗಾದ ಸ್ಮಿತ್ ಮಚ್ಚಾರ್ ಮಾತನಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು. ಈ ವೇಳೆ ಪ್ರಯಾಣಿಕರು ಅವರನ್ನು ವೀರ- ವೀರ ಎಂದು ಕೂಗಿ ಕೊಂಡಾಡುತ್ತಿದ್ದರು. ತೀವ್ರವಾಗಿ ಗಾಯಗೊಂಡಿರುವ ಭಾರತೀಯ ಕ್ಯಾಪ್ಟನ್ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಸೌದಿ ಅರೇಬಿಯಾದ ತಬುಕ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನದಲ್ಲಿದ್ದ ಇಸ್ರೇಲಿ ದಂತವೈದ್ಯರೊಬ್ಬರು ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಲು ನೆರವಾಗಿದ್ದಾರೆ. ದಾಳಿಕೋರ ಸಹ- ಪೈಲಟ್ ಕೂಡ ಆಸ್ಪತ್ರೆಯಲ್ಲಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. 

-ಯಾರು ಗೊತ್ತಾ ಈ ಸ್ಮಿತ್ ಮಚ್ಚಾರ್ 
ಸ್ಮಿತ್ ಮಚ್ಚಾರ್ ಭಾರತೀಯರು ಯುಎಇ ಸರ್ಕಾರದ ಒಡೆತನದ ಕಡಿಮೆ ದರದ ವಿಮಾನಯಾನ ಸಂಸ್ಥೆಯಾದ 'ಫ್ಲೈದುಬೈ'ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಮೊದಲು ಸ್ಮಿತ್ 10 ವರ್ಷಗಳ ಕಾಲ 'ಸ್ಪೈಸ್ಜೆಟ್' (SpiceJet) ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಅವರ ಲಿಂಕ್ಡ್ಇನ್ ಪ್ರೊಫೈಲ್ ಹೇಳುವಂತೆ ಕ್ಯಾಪ್ಟನ್ ಮಚ್ಚಾರ್ ಬೋಯಿಂಗ್ 737 ವಿಮಾನಗಳ ಕಾರ್ಯಾಚರಣೆಯಲ್ಲಿ 13 ವರ್ಷಗಳಿಗೂ ಹೆಚ್ಚು ಕಾಲ ವಾಣಿಜ್ಯ ವಿಮಾನಯಾನ ಅನುಭವವನ್ನು ಹೊಂದಿದ್ದಾರೆ. ಅಲ್ಲದೇ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿಯೂ ಸೇವೆ ಸಲ್ಲಿಸದ ಅನುಭವ ಹೊಂದಿದ್ದಾರೆ. ಇಲ್ಲಿಯವರೆ 9,750 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಚಲಾಯಿಸಿದ ಅನುಭವವನ್ನು ಹೊಂದಿದ್ದಾರೆ. 

ಮೊದಲಿಗೆ ಈ ಘರ್ಷಣೆ ವಿಮಾನ ಅಪಹರಣದ ಆತಂಕವನ್ನು ಹುಟ್ಟುಹಾಕಿತ್ತು ಆದರೆ ಆ ಸಾಧ್ಯತೆಯನ್ನು ಶೀಘ್ರದಲ್ಲೇ ತಳ್ಳಿಹಾಕಲಾಯಿತು. ಇತರ ಪೈಲಟ್‌ಗಳು ಕಾಕ್‌ಪಿಟ್‌ನ ನಿಯಂತ್ರಣವನ್ನು ವಹಿಸಿಕೊಂಡು, ವಿಮಾನವನ್ನು ಸೌದಿ ಅರೇಬಿಯಾದ ಬೇರೊಂದು ಸ್ಥಳಕ್ಕೆ ಸುರಕ್ಷಿತವಾಗಿ ಇಳಿಸಿದರು.


ಇಸ್ರೇಲ್ ಅಧಿಕಾರಿಗಳಿಂದ ಶ್ಲಾಘನೆ
ಇನ್ನು ಸ್ಮಿತ್ ಮಚ್ಚಾರ್ ಸಾಹಸದ ಬಗ್ಗೆ ಇಸ್ರೇಲ್ ಆಡಳಿತ ಪ್ರಶಂಸೆ ವ್ಯಕ್ತ ಪಡಿಸಿದೆ. ಇಸ್ರೇಲ್ನ N12 ಡಿಜಿಟಲ್ ಮಾಧ್ಯಮದೊಂದಿಗೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, "ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್‌ಗೆ ಚಾಕುವಿನಿಂದ ಇರಿದು 9/11 ಮಾದರಿಯ ದಾಳಿ ನಡೆಸಲು ಯತ್ನಿಸಿದ್ದಾನೆ. ಇದರಲ್ಲಿ ಭಯೋತ್ಪಾದಕರ ಕೈವಾಡವಿರುವ ಶಂಕೆಯಿದೆ. ಅವರಿಗೆ ವಿಮಾನವನ್ನು ನೆಲಕ್ಕೆ ಅಪ್ಪಳಿಸುವುದು ಅಥವಾ ಹೈಜಾಕ್ ಮಾಡುವುದು ಉದ್ದೇಶವಾಗಿತ್ತು. ಆದರೆ ಸ್ಮಿತ್ ಮಚ್ಚಾರ್ ಅದನ್ನು ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.

ದಾಳಿಕೋರ ಒಮಾನಿ ಸಹ- ಪೈಲಟ್ ಕೇವಲ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿಂದ ಈ ಏರ್‌ಲೈನ್ಸ್‌ ನಲ್ಲಿ ಉದ್ಯೋಗದಲ್ಲಿದ್ದನು. ಇಸ್ರೇಲ್ ವಾಯುಪ್ರದೇಶ ಪ್ರವೇಶಿಸಲು ನೀಡಲಾಗುವ ಭದ್ರತಾ ಅನುಮತಿಯನ್ನು ಆತ ಹೇಗೆ ಪಡೆದುಕೊಂಡ ಎಂಬ ಬಗ್ಗೆ ಹಾಗೂ ಆತನ ಬಳಿ ದ್ವಿಪೌರತ್ವ ಇತ್ತೇ ಎಂಬ ಕುರಿತು ಇಸ್ರೇಲ್ ತನಿಖಾ ಸಂಸ್ಥೆಗಳು ತನಿಖೆ ಚುರುಕುಗೊಳಿಸಿವೆ.