ಭದ್ರತೆಯ ನಿಯೋಜನೆಗಾಗಿ ಕೇಂದ್ರ ಗೃಹ ಸಚಿವಾಲಯ ದೆಹಲಿ ಪೊಲೀಸರ ನೆರವಿಗೆ 221 ಸಿಎಪಿಎಫ್ ಕಂಪನಿಗಳನ್ನು ಒದಗಿಸಿದೆ. ಅಲ್ಲದೇ ಸುಮಾರು 23 ಸಾವಿರ ಭದ್ರತಾ ಸಿಬ್ಬಂದಿ ನಗರದಾದ್ಯಂತ ನಿಯೋಜನೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ 5 ಸಂಪೂರ್ಣ ಮಹಿಳಾ ಪ್ಯಾರಾಮಿಲಿಟರಿ ಪಡೆಗಳೂ ಸೇರಿವೆ. ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್ಗಢಗಳಿಂದ ಪ್ರಮುಖವಾಗಿ ಸಿಆರ್ ಪಿಎಫ್ ತುಕಡಿಗಳನ್ನು ಬರ ಮಾಡಿಕೊಳ್ಳಲಾಗಿದೆ.
ಈ ಹಿಂದೆ ದೆಹಲಿಯ ಜಂತರ್ ಮಂತರ್ನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳ ಹೊಣೆ ಹೊತ್ತು ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಿಜೆಪಿ ಹಲವು ದಿನಗಳ ಕಾಲ ಧರಣಿ ನಡೆಸಿತ್ತು. ಈ ಸಂದರ್ಭದಲ್ಲೇ ದೆಹಲಿ ಪೊಲೀಸರು, ಪೊಲೀಸ್ ಸಮವಸ್ತ್ರವಿಲ್ಲದ ಗೂಂಡಾಗಳು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರು ಪೆಲೆಟ್ ಗನ್ ಬಳಸಿದ್ದರು. ಇದರಿಂದಾಗಿ ಹಲವಾರು ಮಂದಿಗೆ ಗಾಯವಾಗಿತ್ತು. ಇದೀಗ ಮತ್ತೊಮ್ಮೆ ಕಾಕ್ರೋಚ್ ಜನತಾ ಪಾರ್ಟಿ ಮತ್ತೊಂದು ಐತಿಹಾಸಿಕ ಹೋರಾಟಕ್ಕೆ ಸಿದ್ಧವಾಗಿದೆ. ಆದರೆ ಇಷ್ಟೊಂದು ಭದ್ರತೆಯ ನಡುವೆ ಅದು ಎಷ್ಟರ ಮಟ್ಟಿಗೆ ನಡೆಯಲಿದೆ ಎಂಬ ಪ್ರಶ್ನೆ ಎದುರಾಗಿದೆ.
