ಯೂಟ್ಯೂರ್ ಧ್ರುವ್ ರಾಠಿ ವಿರುದ್ಧ ದೆಹಲಿ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ.2018ರ ಮಾನನಷ್ಟ ಮೊಕದ್ದಮೆಯೊಂದಕ್ಕೆ ಸಂಬಂಧಿಸಿದಂತೆ ಇವತ್ತು ಈ ಆದೇಶ ಹೊರಡಿಸಿದೆ.ಇದು ಜಾಮೀನು ನೀಡಬಹುದಾದ ವಾರಂಟ್ ಆಗಿದ್ದು, ಸಮನ್ಸ್ ನೀಡಲು ಹೋದಾಗ, ರಾಠಿ ಅವರ ಮನೆಗೆ ಬೀಗ ಹಾಕಲಾಗಿತ್ತು.ಇದರ ಬಗ್ಗೆ process server ವರದಿ ಮಾಡಿದ್ದರು.ಇದರ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಾರಂಟ್ ಜಾರಿಗೊಳಿಸಿದೆ.
 
ಬಿಜೆಪಿ ಐಟಿ ಸೆಲ್ ಸದಸ್ಯ ವಿಕಾಸ್ ಪಾಂಡೆ ಎಂಬುವವರು ದಾಖಲಿಸಿರುವ ಈ ಪ್ರಕರಣದಲ್ಲಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಾಹುಲ್ ಜೈನ್ ಈ ವಾರಂಟ್ ಹೊರಡಿಸಿದ್ದಾರೆ.ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋವೊಂದರ ಮೂಲಕ ರಾಠಿ ಮಾನನಷ್ಟ ಉಂಟುಮಾಡಿದ್ದಾರೆ ಎಂದು ವಿಕಾಸ್ ಪಾಂಡೆ ಆರೋಪ ಮಾಡಿದ್ದರು. ಬಿಜೆಪಿ ಐಟಿ ಸೆಲ್ ಸದಸ್ಯ ವಿಕಾಸ್ ಪಾಂಡೆ ದಾಖಲಿಸಿದ್ದ ಈ ಪ್ರಕರಣದಲ್ಲಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಾಹುಲ್ ಜೈನ್ ಈ ವಾರಂಟ್ ಹೊರಡಿಸಿದ್ದಾರೆ. ನ್ಯಾಯಾಲಯವು ಈ ಪ್ರಕರಣವನ್ನು ಮುಂದಿನ ವಿಚಾರಣೆಗಾಗಿ ಅಕ್ಟೋಬರ್ 31ಕ್ಕೆ ನಿಗದಿ ಮಾಡಿದೆ.

ವಾರಂಟ್ ಹೊರಡಿಸುವ ಕೆಲವೇ ದಿನಗಳ ಮೊದಲು, ಅಂದರೆ ಅಕ್ಟೋಬರ್ 12 ರಂದು ನ್ಯಾಯಾಲಯ ಧ್ರುವ ರಾಠಿಗೆ ಹೊಸದಾಗಿ ಸಮನ್ಸ್ ಜಾರಿಗೊಳಿಸಿತ್ತು. ದೂರುದಾರರು ಹಲವು ವರ್ಷಗಳಿಂದ ರಾಠಿ ಅವರಿಗೆ ಲೀಗಲ್ ನೋಟಿಸ್ ತಲುಪಿಸಲು ಪ್ರಯತ್ನ ಮಾಡುತ್ತಲೇ ಇದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಇದರಿಂದ ಹರಿಯಾಣದ ಗುರುಗ್ರಾಮದಲ್ಲಿರುವ ಧ್ರುವ್ ರಾಠಿ ಮನೆಗೆ ಹೊಸ ಸಮನ್ಸ್ ಕಳುಹಿಸುವಂತೆ ಮತ್ತು ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರಿಗೆ ಸೂಚಿಸುವಂತೆ ನ್ಯಾಯಾಲಯವು ಆದೇಶಿಸಿತ್ತು.