ಜಂತರ್ ಮಂತರ್ ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಇದೇ ವೇಳೆ ಸಿಇಸಿ ವಿರುದ್ಧ ನಡೆಸಲಾಗುತ್ತಿರುವ ಪ್ರತಿಭಟನೆಯಿಂದ ದೂರ ಉಳಿಯುವಂತೆ ತಮ್ಮ ಸಮುದಾಯಕ್ಕೆ ಪ್ರಮುಖ ಮುಸ್ಲಿಂ ಧರ್ಮಗುರುಯೊಬ್ಬರು ಕರೆ ಕೊಟ್ಟಿದ್ದಾರೆ. ಅಲ್ಲದೆ ಮುಸ್ಲಿಮರು ರಾಜಕೀಯ ಹಿತಾಸಕ್ತಿಗಳಿಗೆ ಬಲಿಯಾಗಬಹಾರದು ಎಂದು ಎಚ್ಚರಿಸಿದ್ದಾರೆ. 

ಆಲ್ ಇಂಡಿಯಾ ಇಮಾಮ್ ಸಂಘದ ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಈ ಕರೆ ನೀಡಿದವರಾಗಿದ್ದಾರೆ. ಮುಸ್ಲಿಮರು, ವಿಶೇಷವಾಗಿ ಮಸೀದಿ ಇಮಾಮ್ಗಳು, ಪ್ರಸ್ತಾವಿತ ಪ್ರತಿಭಟನೆಗಳಿಂದ ದೂರವಿರುವಂತೆ ಅವರು ಮನವಿ ಮಾಡಿದ್ದಾರೆ. ಕೆಲವು ಶಕ್ತಿಗಳು ದೇಶದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿವೆ ಎಂದು ಉಮರ್ ಅಹ್ಮದ್ ಇಲ್ಯಾಸಿ ಇದೇ ವೇಳೆ ಆರೋಪಿಸಿದ್ದಾರೆ ನಾನು ಎಲ್ಲಾ ಮುಸ್ಲಿಮರಿಗೆ, ವಿಶೇಷವಾಗಿ ಮಸೀದಿಗಳ ಇಮಾಮ್ಗಳಿಗೆ ಮನವಿ ಮತ್ತು ವಿನಂತಿ ಮಾಡುತ್ತೇನೆ. ಅದೇನೆಂದ್ರೆ ಪ್ರಸ್ತುತ ದೇಶದಲ್ಲಿ ಪರಿಸ್ಥಿತಿ ಯಾವ ರೀತಿ ಎಂದು ನಿಮಗೆ ತಿಳಿದಿದೆ. ಕೆಲವು ದೇಶವಿರೋಧಿ ಶಕ್ತಿಗಳು ನಮ್ಮ ದೇಶದಲ್ಲಿ ಶಾಂತಿಯನ್ನು ಹಾಳು ಮಾಡಲು ಬಯಸುತ್ತಿವೆ ಎಂದಿದ್ದಾರೆ.  

ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯಾವ ರಾಜಕೀಯ ಪಕ್ಷಗಳು ಕರೆ ನೀಡಿವೆಯೋ ಮತ್ತು ಆ ಕರೆಯನ್ನು ನೀಡಿದ ರೀತಿಯನ್ನು ಗಮನಿಸಿ ನೋಡಿ… ಈ ಪ್ರತಿಭಟನೆಗಳನ್ನು ಸರ್ಕಾರದ ವಿರುದ್ಧ ನಡೆಸಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಮುಸ್ಲಿಮರೇ ನಾವು ಕೇವಲ ಬಳಸಿಕೊಳ್ಳುವಂತಹ ವಸ್ತುಗಳಲ್ಲ ಎಂಬುದನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ ಎಂದು ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಸಮುದಾಯಕ್ಕೆ ತಿಳಿಸಿದ್ದಾರೆ.