ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬರೆದ ಪ್ರತ್ಯೇಕ ಪತ್ರಗಳನ್ನು ಪರೇಶ್ವರ್ ಬರಂದಿದ್ದು ಎಲ್ಲವನ್ನೂ ಗಂಭೀರವಾಗಿ ಉಲ್ಲೇಖ ಮಾಡಿದ್ದಾರೆ. ಇಲ್ಲಿಯವರೆಗೆ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಮತ್ತು ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 46,324.5 ಕೋಟಿ ರೂ. ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ರಾಜ್ಯ ಆರಂಭದಲ್ಲಿ 101 ಬರಪೀಡಿತ ತಾಲೂಕುಗಳಿಗಾಗಿ 3,705.30 ಕೋಟಿ ರೂ. ಕೋರಿ ಖಾರಿಫ್ 2026ರ ಬರಗಾಲದ ಮನವಿಯನ್ನು ಸಲ್ಲಿಸಿತ್ತು. ಬಳಿಕ ವೈಜ್ಞಾನಿಕ ಮೌಲ್ಯಮಾಪನ ಮಾಡಲಾಯಿತು. ಎರಡನೇ ಹಂತದಲ್ಲಿ ಇನ್ನೂ 76 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು ಎಂದು ಪರಮಶ್ವರ್ ಹೇಳಿದ್ದಾರೆ.
ಇನ್ನು ಹೊಸದಾಗಿ ಘೋಷಣೆ ಮಾಡಿದ 76 ತಾಲೂಕುಗಳಲ್ಲಿ ನಡೆಸಿದ ಬೆಳೆ ನಷ್ಟದ ಮೌಲ್ಯಮಾಪನದಲ್ಲಿ, 26.08 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ಮತ್ತು 1.49 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾದೆ ಎಂದು ತಿಳಿದು ಬಂದಿದೆ. ಈ ಹಾನಿಯ ಪ್ರಮಾಣವು ಶೇಕಡ 33 ರಿಂದ ಶೇಕಡ 100 ರಷ್ಟಿದ್ದು, ಬಾಧಿತ ಪ್ರದೇಶದ ಗಮನಾರ್ಹ ಭಾಗದಲ್ಲಿ ಶೇ. 50 ಕ್ಕಿಂತ ಹೆಚ್ಚು ನಷ್ಟ ಸಂಭವಿಸಿದೆ. ಈ ಅಂಶವನ್ನೂ ಉಪ ಮುಖ್ಯಮಂತ್ರಿಗಳು ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
177 ಬರಪೀಡಿತ ತಾಲೂಕುಗಳಲ್ಲಿ ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ವರದಿಯಾಗಿದೆ. ಇದರಿಂದ ಅಂದಾಜು ಆರ್ಥಿಕ ನಷ್ಟ 46,324.5 ಕೋಟಿ ರೂಪಾಯಿಗಳನ್ನು ತಲುಪಿದೆ. ಸದ್ಯ ನಡೆಯುತ್ತಿರುವ ಮೌಲ್ಯಮಾಪನದ ಆಧಾರದ ಮೇಲೆ, ಖಾರಿಫ್ 2026ರ ಅವಧಿಯಲ್ಲಿ ಒಟ್ಟು ಬೆಳೆ ನಷ್ಟವು 55 ಲಕ್ಷ ಹೆಕ್ಟೇರ್ ಪ್ರದೇಶವನ್ನು ಮೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರಸ್ತುತ ಕೃಷಿ ವೆಚ್ಚ ಮತ್ತು ಬೆಳೆ ನಷ್ಟಕ್ಕೆ ಹೋಲಿಸಿದರೆ ಈಗಿನ ಪರಿಹಾರ ಸಾಕಷ್ಟಿಲ್ಲ ಎಂದು ಹೇಳಿದ ಪರಮೇಶ್ವರ್, ಅಸ್ತಿತ್ವದಲ್ಲಿರುವ SDRF/NDRF ಪರಿಹಾರ ಮಾನದಂಡಗಳನ್ನು, ಅದರಲ್ಲೂ ವಿಶೇಷವಾಗಿ ರೈತರಿಗೆ ನೀಡುವ ಸಹಾಯಧನದ ಮಾನದಂಡಗಳನ್ನು ಪರಿಷ್ಕರಿಸುವಂತೆ ಇದೇ ವೇಳೆ ಕೇಂದ್ರ ಸರ್ಕಾರವನ್ನು ಕೋರಿದರು.
ಸದ್ಯ ಬರಗಾಲ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬರದ ವ್ಯಾಪ್ತಿ ಮತ್ತು ತೀವ್ರತೆಯನ್ನುಗಮನದಲ್ಲಿಟ್ಟುಕೊಂಡು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ಪರಮೇಶ್ವರ್ ಹೇಳಿದರು. ನಮ್ಮ ರೈತರಿಗೆ ಸಕಾಲದಲ್ಲಿ ಮತ್ತು ಸಮರ್ಪಕವಾದ ಬೆಂಬಲ ಸಿಗಬೇಕು. ನೀಡಲಾಗುವ ಪರಿಹಾರವು ಅವರು ಅನುಭವಿಸಿದ ನೈಜ ನಷ್ಟವನ್ನು ಪ್ರತಿಬಿಂಬಿಸುವಂತಿರಬೇಕು, ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.


