ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಈ ವಿಷಯ ಪ್ರಸ್ತಾಪಿಸಿದ್ದಾರೆ. ಈ ಎರಡು ದೇಶಗಳ ನಡುವೆ ಸಂಘರ್ಷ ನಡೆಯುತ್ತಿದ್ದಾಗ ಅದನ್ನು ನಿಲ್ಲಿಸಲು ಅಮೆರಿಕ ಸುಂಕ ವಿಧಿಸುವ ಬೆದರಿಕೆ ಹಾಕಿತ್ತು. ಇದರಿಂದ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂಬ ತಮ್ಮ ಹಳೆಯ ಹೇಳಿಕೆಯನ್ನು ಟ್ರಂಪ್ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮತ್ತೆ ಪ್ರಸ್ತಾಪ ಮಾಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಟ್ರಂಪ್ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. ನಾನು ಅಧಿಕಾರಕ್ಕೆ ಬಂದ ನಂತರ ಎಂಟು ಯುದ್ಧಗಳನ್ನು ಇತ್ಯರ್ಥಪಡಿಸಿದ್ದೇನೆ. ಇದು ನನ್ನ ಪಾಲಿಗೆ ದೊಡ್ಡ ಗೌರವವಾಗಿದೆ. ಈ ಮೂಲಕ ಹಲವು ದೇಶಗಳ ನಾಯಕರೊಂದಿಗೆ ಸ್ನೇಹಪೂರ್ಣ ಸಂಬಂಧ ಬೆಳೆಸಿಕೊಂಡಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಭಾರತ-ಪಾಕಿಸ್ತಾನ, ಕೊಸೊವೊ-ಸೆರ್ಬಿಯಾ, ಕಾಂಬೋಡಿಯಾ-ಥಾಯ್ಲೆಂಡ್, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ-ರುವಾಂಡಾ, ಅರ್ಮೇನಿಯಾ-ಅಜರ್ಬೈಜಾನ್ ಹಾಗೂ ಗಾಜಾ ಸಂಘರ್ಷ ಸೇರಿದಂತೆ ಹಲವು ಸಂಘರ್ಷಗಳ ಇತ್ಯರ್ಥಕ್ಕೆ ತಾವು ಕಾರಣರಾಗಿರುವುದಾಗಿ ಟ್ರಂಪ್ ಹೇಳಿದ್ದಾರೆ. ಇದರಿಂದ ಈ ಎಲ್ಲಾ ದೇಶಗಳ ನಾಯಕರು ತನಗೆ ಧನ್ಯವಾದ ಪತ್ರಗಳನ್ನು ಕಳುಹಿಸಿದ್ದಾರೆ ಎಂದೂ ಟ್ರಂಪ್ ತಿಳಿಸಿದ್ದಾರೆ. ಅದರಲ್ಲೂ ಪಾಕಿಸ್ತಾನದ ಪ್ರಧಾನಿ ತಮ್ಮನ್ನು ಅದ್ಭುತ ವ್ಯಕ್ತಿ ಎಂದಿದ್ದು ಡೊನಾಲ್ಡ್ ಟ್ರಂಪ್ 3 ಕೋಟಿ ಜನರ ಜೀವಗಳನ್ನು ಉಳಿಸಿದ್ದಾರೆ ಎಂದು ತಮನ್ನು ಪಾಕ್ ಪ್ರಧಾನಿ ಕೊಂಡಾಡಿದ್ದಾರೆಂದು ಟ್ರಂಪ್ ಹೇಳಿದ್ದಾರೆ
ಇಲ್ಲಿ ಟ್ರಂಪ್ ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಕಳೆದ ವರ್ಷ ಮೇ 10ರಂದು ಮೊದಲು ಹೇಳಿಕೆ ನೀಡಿದ್ದರು.ಸುದೀರ್ಘ ಮಾತುಕತೆ ಬಳಿಕ ಭಾರತ ಮತ್ತು ಪಾಕಿಸ್ತಾನ ಪೂರ್ಣ ಹಾಗೂ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಬಳಿಕ ಇದೇ ವರ್ಷ ಡಿಸೆಂಬರ್ 23ರಂದು ಮತ್ತೇ ಅದನ್ನೇ ಹೇಳಿದ್ದರ. ಹೀಗೆ ಅಂದಿನಿಂದ ಇಂದಿನವರೆಗೂ ಸಮಯ ಸಿಕ್ಕಾಗಲೆಲ್ಲಾ.. ಸಿಕ್ಕ ಕಡೆಯಲ್ಲಾ ಇದನ್ನೇ ಹೇಳುತ್ತಾ ಕ್ರೆಡಿಟ್ ತೆಗೆದುಕೊಳ್ಳುತ್ತಾ ಬಂದಿದ್ದಾರೆ. ಇದೀಗ ಈ ಬಗ್ಗೆ ಕೇಂದ್ರ ಸರ್ಕಾರ ಅದರಲ್ಲೂ ಪ್ರಧಾನಿ ಮೋದಿ ಡೊನಾಲ್ಡ್ ಟ್ರಂಪ್ ಖಡಕ್ ಉತ್ತರ ಕೊಟ್ಟು ಟ್ರಂಪ್ ಬಾಯಿ ಮುಚ್ಚಿಸಲೇ ಬೇಕಿದೆ.
ಇದೇ ವೇಳೆ ಇರಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಟ್ರಂಪ್ ಶಾಂತಿ ಒಪ್ಪಂದಕ್ಕೆ ಬಾರದಿದ್ದರೆ ಆ ದೇಶವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವುದಾಗಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆಯೇ? ಆ ಮೂಲಕ ಅದು ಹಿಂದೆಂದಿಗಿಂತಲೂ ದೊಡ್ಡ ಹಾಗೂ ಶಕ್ತಿಶಾಲಿ ರಾಷ್ಟ್ರವಾಗಿ, ಮಧ್ಯಪ್ರಾಚ್ಯ ಮಾತ್ರವಲ್ಲದೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆಯಲು ಅವಕಾಶ ನೀಡಬೇಕೇ? ಅಥವಾ ಇಸ್ಲಾಮಿಕ್ ಗಣರಾಜ್ಯವನ್ನು ಸಂಪೂರ್ಣವಾಗಿ ನಾಶಪಡಿಸಿ, ಮತ್ತೆ ಜನರು ಮತ್ತು ರಾಷ್ಟ್ರಗಳನ್ನು ಕೊಲ್ಲಲು, ನಾಶಮಾಡಲು ಅವಕಾಶವೇ ಸಿಗದಂತೆ ಮಾಡಬೇಕೇ? ಯಾವುದೇ ಭವಿಷ್ಯದ ಭರವಸೆ ಇಲ್ಲದಂತೆ ಅದನ್ನು ನರಕಕ್ಕೆ ತಳ್ಳಬೇಕೇ ಎಂಬ ದೊಡ್ಡ ನಿರ್ಧಾರವನ್ನು ನಾನು ತೆಗೆದುಕೊಳ್ಳಬೇಕಿದೆ ಎಂದು ಕಟುವಾಗಿ ಟ್ರಂಪ್ ಹೇಳಿದ್ದಾರೆ. ಯುದ್ಧದಿಂದ ಉಂಟಾಗಿರುವ ಹೆಚ್ಚಿನ ಇಂಧನ ಬೆಲೆಗಳು ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಚರ್ಚೆಗಳ ನಡುವೆಯೇ ಅವರು ಈ ಹೇಳಿಕೆ ನೀಡಿದ್ದಾರೆ.
ಇರಾನ್ ವಿರುದ್ಧ ಕಳೆದ ಆರು ತಿಂಗಳಲ್ಲಿ ನಡೆದಿರುವ ಸೇನಾ ದಾಳಿಗಳ ಕುರಿತು ಟ್ರಂಪ್ ಸಭೆಯಲ್ಲಿ ಮಾತನಾಡಲು ಶುರು ಮಾಡುತ್ತಾ ಇದ್ದಂತೆ ವಿಶ್ವಸಂಸ್ಥೆಯ ಸಭಾಂಗಣದಲ್ಲಿ ಹಾಜರಿದ್ದ ಇರಾನ್ ಪ್ರತಿನಿಧಿಗಳು ತಕ್ಷಣ ಹೊರನಡೆದರು. ಕೇವಲ ಒಬ್ಬ ಪ್ರತಿನಿಧಿ ಮಾತ್ರ ಉಳಿದಿದ್ದರು. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಹಾಗೂ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನ್ಯೂಯಾರ್ಕ್ನಲ್ಲಿದ್ದರೂ ಟ್ರಂಪ್ ಭಾಷಣದ ವೇಳೆ ಸಾಮಾನ್ಯ ಸಭಾಂಗಣಕ್ಕೆ ಆಗಮಿಸಿರಲಿಲ್ಲ. ಅವರ ಪರವಾಗಿ ಕೆಳಹಂತದ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಹಾಜರಿದ್ದರು.
ಇಲ್ಲಿ ಭಾರತದ ಬಗ್ಗೆ ಅಮೆರಿಕ ಅಧ್ಯಕ್ಷ ಹೀಗೆ ಬಾಯಿ ದೊಡ್ಡದು ಮಾಡುತ್ತಾ ಇರುವುದು ಇದೇ ಮೊದಲಲ್ಲಯ ಅನೇಕ ಬಾಯಿ ಮೂಗು ತೂರಿಸುತ್ತಾ ಬಂದಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಗಟ್ಟಿಯಾಗಿ ಮಾತಾಡದೇ ಇದ್ದರೆ ಟ್ರಂಪ್ ತನ್ನ ಹರಕಲು ಬಾಯನ್ನುಆಡಿಸುತ್ತಲೇ ಇರುತ್ತಾರೆ.

