ರಾಹುಲ್ ಯಲ್ಲಿ ಕರ್ನಾಟಕದಿಂದ 3,910 ಧ್ವನಿಗಳು ದಾಖಲಾಗಿವೆ. ರಾಜ್ಯದ 31 ಜಿಲ್ಲೆಗಳಿಂದ ಸಾರ್ವಜಗಾಂಧಿ ಅವರ ಅಧಿಕೃತ ‘ಸತ್ಯಾಗ್ರಹ’ ವೇದಿಕೆಯಲ್ಲಿ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ದಾಖಲಾಗಿರುವ ಧ್ವನಿಗಳ ಪೈಕಿ ಆರೋಗ್ಯ ಸೇವೆಗಳ ಲಭ್ಯತೆ 1,118 ದಾಖಲೆಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಬಳಿಕ ಕಾರ್ಮಿಕರ ಹಕ್ಕುಗಳು 548, ಶಿಕ್ಷಣದ ಅವಕಾಶ 264 ಮತ್ತು ಭ್ರಷ್ಟಾಚಾರ 253 ದಾಖಲೆಗಳು ಬಂದಿವೆ.
ಕರ್ನಾಟಕದಲ್ಲಿ ಯಾವ ಸಮಸ್ಯೆಗಳಿಗೆ ಎಷ್ಟು ಧ್ವನಿಗಳು?
ಕರ್ನಾಟಕದಲ್ಲಿ ಸಾರ್ವಜನಿಕರು ದಾಖಲಿಸಿರುವ ಪ್ರಮುಖ ವಿಷಯಗಳ ಪೈಕಿ ಆರೋಗ್ಯ ಸೇವೆಗಳ ಲಭ್ಯತೆ ಅಗ್ರಸ್ಥಾನದಲ್ಲಿದೆ. ವಿಷಯವಾರು ದಾಖಲೆಗಳ ವಿವರ ಹೀಗಿದೆ:
ಆರೋಗ್ಯ ಸೇವೆಗಳ ಲಭ್ಯತೆ: 1,118
ಕಾರ್ಮಿಕರ ಹಕ್ಕುಗಳು: 548
ಶಿಕ್ಷಣದ ಅವಕಾಶ: 264
ಭ್ರಷ್ಟಾಚಾರ: 253
ಜಾತಿ ಆಧಾರಿತ ತಾರತಮ್ಯ: 120
ಮಹಿಳೆಯರ ಸುರಕ್ಷತೆ: 65
ಭೂಮಿ ಹಕ್ಕುಗಳು: 51
ರೈತರ ಸಮಸ್ಯೆಗಳು: 51
ಬೆಂಗಳೂರು ನಗರಕ್ಕೆ ಅಗ್ರ ಸ್ಥಾನ
ಜಿಲ್ಲಾವಾರು ಅಂಕಿ-ಅಂಶಗಳನ್ನು ಗಮನಿಸಿದರೆ, ಬೆಂಗಳೂರು ನಗರ 534 ಧ್ವನಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರ ತುಮಕೂರು 385, ಬೆಳಗಾವಿ 199, ದಾವಣಗೆರೆ 191, ಮಂಡ್ಯ 160 ಮತ್ತು ಹಾವೇರಿ 149 ಧ್ವನಿಗಳು ದಾಖಲಾಗಿವೆ.
ಶಿವಮೊಗ್ಗದಿಂದ 143, ವಿಜಯನಗರದಿಂದ 142, ಚಿಕ್ಕಮಗಳೂರಿನಿಂದ 141, ಧಾರವಾಡದಿಂದ 139, ಚಾಮರಾಜನಗರ ಮತ್ತು ದಕ್ಷಿಣ ಕನ್ನಡದಿಂದ ತಲಾ 134 ಧ್ವನಿಗಳು ದಾಖಲಾಗಿವೆ.
ಬೆಂಗಳೂರು ಗ್ರಾಮಾಂತರದಿಂದ 128, ಮೈಸೂರಿನಿಂದ 116, ಬಾಗಲಕೋಟೆ ಮತ್ತು ವಿಜಯಪುರದಿಂದ ತಲಾ 106 ಹಾಗೂ ಚಿತ್ರದುರ್ಗದಿಂದ 104 ಧ್ವನಿಗಳು ದಾಖಲಾಗಿವೆ. ರಾಮನಗರದಿಂದ 91, ಬೀದರ್ 87, ರಾಯಚೂರು 85, ಕೊಪ್ಪಳ 69, ಕಲಬುರಗಿ 67, ಕೊಡಗು 65, ಚಿಕ್ಕಬಳ್ಳಾಪುರ 63 ಮತ್ತು ಯಾದಗಿರಿಯಿಂದ 60 ಧ್ವನಿಗಳು ದಾಖಲಾಗಿವೆ. ಇನ್ನು ಉಡುಪಿ 54, ಹಾಸನ 51, ಬಳ್ಳಾರಿ 39, ಕೋಲಾರ 31 ಮತ್ತು ಗದಗ 28 ಧ್ವನಿಗಳು ದಾಖಲಾಗಿವೆ.
‘ಸತ್ಯಾಗ್ರಹ’ ಡಿಜಿಟಲ್ ವೇದಿಕೆಯಲ್ಲಿ ನಾಗರಿಕರು ತಮ್ಮ ಸ್ಥಳೀಯ ಸಮಸ್ಯೆಗಳು, ಸಾರ್ವಜನಿಕ ಅಹವಾಲುಗಳು ಮತ್ತು ವಿವಿಧ ಬೇಡಿಕೆಗಳನ್ನು ದಾಖಲಿಸುವ ಅವಕಾಶವನ್ನು ಹೊಂದಿದ್ದಾರೆ. ಕರ್ನಾಟಕದ 31 ಜಿಲ್ಲೆಗಳಿಂದ ದಾಖಲಾಗಿರುವ 3,910 ಧ್ವನಿಗಳಲ್ಲಿ ಆರೋಗ್ಯ, ಕಾರ್ಮಿಕರ ಹಕ್ಕುಗಳು, ಶಿಕ್ಷಣ, ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳು ಪ್ರಮುಖವಾಗಿ ಕಾಣಿಸಿಕೊಂಡಿವೆ.

