KPSC ವಿರುದ್ಧ ಇರುವ ಆರೋಪಗಳು ಸಾಕಷ್ಟಿದೆ .ಅನೇಕ ಇಲಾಖೆಗಳ ಪರೀಕ್ಷೆಗಳಲ್ಲಿ ಗೋಲ್ಮಲ್ ನಡೆದಿದೆ. ಇದ್ರಿಂದ ಸರ್ಕಾರ ಇಂಥದೊಂದು ಚಿಂತನೆ ನಡೆಸಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಕೆಪಿಎಸ್ಸಿ ಕಚೇರಿಯನ್ನೇ ಮುಚ್ಚುವ ಬಗ್ಗೆ ಯೋಚನೆ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಕಾನೂನಾತ್ಮಕವಾಗಿ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಾವು ಅಧಿಕಾರಿಗಳ ಮೇಲೆ ಅತ್ಯಂತ ನಂಬಿಕೆ ಇಟ್ಟು ಅವರನ್ನು ನೇಮಕ ಮಾಡಿರುತ್ತೇವೆ ಅವರೇ ಹೀಗಾದರೆ ಏನು ಮಾಡುವುದು ಎಂದು ಪ್ರಶ್ನಿಸಿದರು ಅಲ್ಲದೇ ಈ ರೀತಿಯ ಅಕ್ರಮಗಳು ನಡೆದಾಗ ಭವಿಷ್ಯಕ್ಕೆ ಸಮಸ್ಯೆ ಆಗುತ್ತೆ.ಇದರಿಂದ ಈ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

