ಸೆಪ್ಟೆಂಬರ್ 25ರಂದು ರಿಲೀಸ್ ಆದಾಗ ಈ ಚಿತ್ರಕ್ಕೆ ಸಿಕ್ಕಿದ್ದು ಬರೀ 45ರಿಂದ 60 ಶೋಗಳು ಮಾತ್ರ. ಆದರೆ ಸಿನಿಮಾ ನೋಡಿದ ಜನ ನೀಡಿದ ಸೂಪರ್ ರೆಸ್ಪಾನ್ಸ್‌ನಿಂದಾಗಿ ಶೋಗಳ ಸಂಖ್ಯೆ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಹೆಚ್ಚಾಯಿತು. ಮೊದಲು 400 ಶೋಗಳ ಗಡಿ ದಾಟಿದ್ದ ಈ ಸಿನಿಮಾ, ಈಗ ಬರೋಬ್ಬರಿ 700ಕ್ಕೂ ಹೆಚ್ಚು ಪ್ರದರ್ಶನ ಕಾಣುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಜೀವ ತಂದಿದೆ.
ಕೇವಲ 2ರಿಂದ 2.50 ಕೋಟಿ ರೂಪಾಯಿ ಸಣ್ಣ ಬಜೆಟ್‌ನಲ್ಲಿ ತಯಾರಾದ ಈ ಪ್ರೇಮಕಥೆ, ಈಗ ಬಾಕ್ಸ್ ಆಫೀಸ್‌ನಲ್ಲಿ 10ರಿಂದ 13 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಕಮಾಲ್ ಮಾಡುತ್ತಿದೆ. ರಿಲೀಸ್‌ಗೂ ಮುನ್ನವೇ ಹಾಡುಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡಿದ್ದ ಈ ಚಿತ್ರ, ಈಗ ಬೆಳ್ಳಿಪರದೆ ಮೇಲೂ ಮ್ಯಾಜಿಕ್ ಮಾಡ್ತಿದೆ.
ದೊಡ್ಡ ಬ್ಯಾನರ್, ಸ್ಟಾರ್ ನಟರಿಲ್ಲದಿದ್ದರೂ ಕಂಟೆಂಟ್ ಚನ್ನಾಗಿದ್ದರೆ ಕನ್ನಡಿಗರು ಖಂಡಿತ ಗೆಲ್ಲಿಸುತ್ತಾರೆ ಅನ್ನೋದಕ್ಕೆ 'ಪ್ರೇಮದ ಊರಲಿ' ಸಿನಿಮಾವೇ ಸೂಕ್ತ ಉದಾಹರಣೆ. ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಹೊರಬರುತ್ತಿರುವ ಜನ, "ಕನ್ನಡದಲ್ಲೂ ಇಂತಹ ಅದ್ಭುತ ಸಿನಿಮಾಗಳು ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ" ಅಂತ ಮನಸಾರೆ ಮೆಚ್ಚಿಕೊಳ್ತಿದ್ದಾರೆ.




