ಒಲಿಂಪಿಕ್ಸ್ ಮಾದರಿಯಲ್ಲೇ ಪ್ರತಿ 4 ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾಕೂಟವು ಏಷ್ಯಾದ ದೇಶಗಳ ನಡುವೆ ಕ್ರೀಡಾ ಒಕ್ಕೂಟ ಮತ್ತು ಬಾಂಧವ್ಯ ಬೆಳೆಸುವ ಉದ್ದೇಶ ಹೊಂದಿದೆ. ಕೋವಿಡ್ ಕಾರಣದಿಂದಾಗಿ 2023ರಲ್ಲಿ ನಡೆದಿದ್ದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 107 ಪದಕಗಳನ್ನು ಗೆದ್ದು ಇತಿಹಾಸ ಬರೆದಿತ್ತು.
ಈ ಭಾರಿ ಭಾರತದಿಂದ ಒಟ್ಟು 499 ಕ್ರೀಡಾಪಟುಗಳ ಬಲಿಷ್ಠ ತಂಡಗಳಲ್ಲಿ, 232 ಮಹಿಳಾ ಕ್ರೀಡಾಪಟುಗಳು ಮತ್ತು 267 ಪುರುಷ ಕ್ರೀಡಾಪಟುಗಳು ಭಾಗವಹಿಸಿದ್ದರು. ಅಷ್ಟೇಅಲ್ಲದೇ ಮಹಿಳಾ ಕ್ರೀಡಾಪಟುಗಳು ಪುರುಷರಿಗಿಂತ ಮೇಲುಗೈ ಸಾಧಿಸಿದ್ದು, ದೇಶಕ್ಕೆ ಬಂದ 21 ಚಿನ್ನದ ಪದಕಗಳಲ್ಲಿ 11 ಚಿನ್ನದ ಪದಕಗಳನ್ನು ಮಹಿಳೆಯರೇ ಗೆದ್ದು ತಂದಿರುವುದು ವಿಶೇಷ.
ಇನ್ನು ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ನಮ್ಮ ಕರ್ನಾಟಕದ ಕ್ರೀಡಾಪಟುಗಳ ಸಾಹಸವೂ ಕಮ್ಮಿಯೇನೂ ಇರಲಿಲ್ಲ. ನಮ್ಮ ರಾಜ್ಯದ ತಾರೆಯರು ಒಟ್ಟು 6 ಪ್ರಮುಖ ಪದಕಗಳನ್ನು ಗೆದ್ದು ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಚಿನ್ನದ ಪದಕ ಗೆದ್ದರೆ, ಅಥ್ಲೆಟಿಕ್ಸ್‌ನಲ್ಲಿ ರಾಜ್ಯದ ಹೆಮ್ಮೆಯ ಓಟಗಾರ್ತಿ ಎಂ.ಆರ್. ಪೂವಮ್ಮ 4x400 ಮೀಟರ್ ರಿಲೇಯಲ್ಲಿ ಚಿನ್ನ ಹಾಗೂ ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಶೂಟಿಂಗ್‌ನಲ್ಲಿ ತಿಲೋತ್ತಮಾ ಸೇನ್ ಬೆಳ್ಳಿ ಗೆದ್ದರೆ, ಅಥ್ಲೆಟಿಕ್ಸ್‌ನಲ್ಲಿ ಎಸ್.ಎಸ್. ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಆಯುಷ್ ಶೆಟ್ಟಿ ಕಂಚಿನ ಪದಕ ತಂದುಕೊಟ್ಟಿದ್ದಾರೆ.
ಜಪಾನ್‌ನ ನಗೋಯಾದಲ್ಲಿ ನಡೆದ ಈ ಐತಿಹಾಸಿಕ ಕ್ರೀಡಾಕೂಟ ಮುಗಿದಿದ್ದು, ಕ್ರೀಡಾಪಟುಗಳು ಹಾಗೂ ಅಭಿಮಾನಿಗಳ ಕಣ್ಣು ಈಗ 4 ವರ್ಷಗಳ ನಂತರ, ಅಂದರೆ 2030ರಲ್ಲಿ ಕತಾರ್‌ನ ದೋಹಾದಲ್ಲಿ ನಡೆಯಲಿರುವ ಮುಂದಿನ ಏಷ್ಯನ್ ಗೇಮ್ಸ್ ಕಡೆಗೆ ನೆಟ್ಟಿದೆ. ಭಾರತದ ಕ್ರೀಡಾ ಪಟುಗಳು ಮುಂದಿನ ಆವೃತ್ತಿಯಲ್ಲಿ ಇನ್ನಷ್ಟು ಹೆಚ್ಚು ಪದಕ ಗೆಲ್ಲುವ ಭರವಸೆ ಹೆಚ್ಚಾಗಿದೆ.



