ವಸತಿ ಸಚಿವ ಜಮೀರ್ ಅಹಮದ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಸಂಬಂಧ ಹಳಸಿದೆ ಎನ್ನುವ ಮಾತುಗಳು ಇವೆ.ಜಮೀರ್‌ ಗೆ ಮಂತ್ರಿ ಸ್ಥಾನ ನೀಡುವ ವಿಚಾರದಲ್ಲಿ ಸಿದ್ದರಾಮಯ್ಯ ವಿರೋಧ ವ್ಯಕ್ತ ಪಡಿಸಿದ್ದರು ಎನ್ನಲಾಗಿತ್ತು. ಇದಕ್ಕೆಲ್ಲಾ ತಕ್ಕಂತೆ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೂ ನಾನೊಂದು ತೀರ..ನೀನೊಂದು ತೀರ ಎನ್ನುವಂತಿದ್ದರು. ಇದೀಗ ಇದಕ್ಕೆ ತೇಪೆ ಹಾಕುವ ಕೆಲಸವನ್ನು ಜಮೀರ್ ಮಾಡಿದ್ದಾರೆ. ನಮ್ಮ ನಾಯಕ ಸಿದ್ದರಾಯ್ಯ ಫುಲ್ ಸ್ಟ್ರಾಂಗ್ ಇದ್ದಾರೆ . ಅವರು ಯಾವುದೇ ಕಾರಣಕ್ಕೂ ವೀಕ್ ಆಗಿಲ್ಲ ಅವರು ರಾಜಕಾರಣದಲ್ಲಿ ಟಗರು ಇದ್ದಂತೆ ಎಂದಿದ್ದಾರೆ. ಅಲ್ಲದೇ ಪಕ್ಷದಲ್ಲಿ ಅವರನ್ನು ನಿರ್ಲಕ್ಷ್ಯ ಮಾಡಿದೆ ಎನ್ನುತ್ತಿರುವುದು ಕೇವಲ ಮಾಧ್ಯಗಳ ಸೃಷ್ಟಿ ಎಂದು ಜಮೀರ್ ಹೇಳಿದರು. 
 
ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್ ಇವತ್ತಿಗೂ ಅವರೇ ನಮ್ಮ ನಾಯಕರೇ ನಾವು ಅವರ ಮೇಲೆ ವಿಶ್ವಾಸ ಇಟ್ಟಿದ್ದೇವೆ ಎಂದರು. ಸಿದ್ದರಾಮಯ್ಯ ಎಲ್ಲಾ ಹಿಂದುಳಿದ ಜಾತಿ ಮತ್ತು ವರ್ಗದವರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಶಕ್ತಿ ಹೊಂದಿರುವ ಅಹಿಂದ ನಾಯಕ ಎಂದು ಸ್ಪಷ್ಟ ಪಡಿಸಿದ್ದಾರೆ. ಅವರನ್ನು ನಾವ ವೀಕ್ ಆಗೋಕೂ ಬಿಡುವುದಿಲ್ಲ ಎಂದ ಜಮೀರ್ 2028ಕ್ಕೂ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಾಣೆ ಎದುರಿಸುತ್ತೇವೆ ಎಂದರು.  
 
ಇನ್ನು ಇದೇ ವೇಳೆ ಸಿದ್ದರಾಮಯ್ಯ ಗೃಹ ಪ್ರವೇಶದ ಬಗ್ಗೆ ಮಾತನಾಡಿದ ಜಮೀರ್. ಅವರೇನೂ ಅರಮನೆಯಂತ ಮನೆ ಕಟ್ಟಿಲ್ಲ. ಅದೊಂದು ಸರಳವಾದ ಮನೆ. ಗೃಹಪ್ರವೇಶ ಅವರ ಖಾಸಗಿ ಕಾರ್ಯಕ್ರಮವಾಗಿತ್ತು. ಅದರಲ್ಲಿ ಕೇವಲ ಕುಟುಂಬದವರ ಮಾತ್ರ ಭಾಗವಹಿಸಿದ್ದರು ಎಂದರು. ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದರೂ ಒಂದು ಮನೆ ಕಟ್ಟಿಕೊಂಡಿರಲಿಲ್ಲ. ಈಗ ಸಣ್ಣದೊಂದು ಮನೆ ಮಾಡಿಕೊಂಡಿದ್ದಾರೆ ಎಂದ ಜಮೀರ್ ನನ್ನ ಮತ್ತು ಸಿದ್ದರಾಮಯ್ಯನವರ ಅನುಬಂಧ ಚೆನ್ನಾಗಿಯೇ ಇದೆ. ಇಬ್ಬರ ನಡುವೆ ಯಾವುದೇ ಮುನಿಸಿಲ್ಲ ಎಂದು ಸ್ಪಷ್ಟಪಡಿಸಿದರು.