ನವೆಂಬರ್ 26 ಮತ್ತು 27 ರಂದು ಮೈಸೂರಿನಲ್ಲಿ ಸಂವಿಧಾನದ ಹೆಸರಿನಲ್ಲಿ ರಾಷ್ಟ್ರೀಯ ಸಂವಿಧಾನ ದಿನ ಸಮ್ಮೇಳನವನ್ನ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನ ಮಾಜಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಆದರೆ ಇದಕ್ಕೆ ಸಿದ್ದರಾಮಯ್ಯನವರಿಗೆ ಆಹ್ವಾನ ಇಲ್ಲ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಸಿದ್ದರಾಮಯ್ಯ ಅವರನ್ನು ಈ ಸಮಾರಂಭಕ್ಕೆ ಆಹ್ವಾನಿಸಲ್ವಾ? ಎಂಬ ಪ್ರಶ್ನೆಗೆ ಮಹಾದೇವಪ್ಪ ಸ್ಪಷ್ಟ ಉತ್ತರ ನೀಡಿಲ್ಲ.ಇದು ಇಬ್ಬರ ನಡುವಿನ ಮುನಿಸು ಮತ್ತೊಂದು ಹಂತ ತಲುಪಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಸಿದ್ದರಾಮಯ್ಯ ಅವರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲ್ವಾ ಅನ್ನೋ ಪ್ರಶ್ನೆಗೆ ಮಹಾದೇವಪ್ಪ ಹೆಸರು ಹೇಳದೇ ಖಡಕ್ ಉತ್ತರ ಕೊಟ್ಟಿದ್ದಾರೆ. ಇಲ್ಲಿ ಯಾವ ವ್ಯಕ್ತಿಯ ಪ್ರಶ್ನೆಯೂ ಇರಲ್ಲ. ಸಂವಿಧಾನದ ರಕ್ಷಕರು ಎಲ್ಲಾ ಸೇರಿ ಇದರಲ್ಲಿ ಭಾಗವಹಿಸುತ್ತಾರೆ ಎಂದಷ್ಟೇ ಹೇಳಿ ನುಣುಚಿಕೊಂಡಿದ್ದಾರೆ. ಇನ್ನು ತಮ್ಮ ಹಾಗೂ ಸಿದ್ದರಾಮಯ್ಯ ನಡುವಿನ ಗೆಳೆತನದ ಕುರಿತು ಉತ್ತರ ನೀಡದೇ ನುಣುಚಿಕೊಂಡ ಮಹಾದೇವಪ್ಪ Once a Friend is always a Friend ಸ್ನೇಹದ ಪ್ರೀತಿ ಜಾಸ್ತಿಯೂ ಆಗಲ್ಲ.. ಕಡಿಮೆಯೀಿ ಆಗಲ್ಲ.. ನಾನು ಈಗ ಬೇರೆ ಯಾವ ಪ್ರಶ್ನೆಗಳಿಗೂ ಈಗ ಉತ್ತರ ಕೊಡಲ್ಲ ಎಂದರು. ಅಲ್ಲದೇ ಬೇರೆ ಯಾವುದೇ ವಿಷಯವನ್ನ ಇಲ್ಲಿ ತರೋದು ಬೇಡ, ಮುಕ್ತ ಮನಸ್ಸಿನಿಂದ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಲ್ಲರೂ ಬನ್ನಿ ಎಂದಷ್ಟೇ ಹೇಳಿದರು.

