ಆಕಾಶದ ಈ ಕೆಂಪು ಬಣ್ಣಕ್ಕೂ ಹಾಗೂ ಅರ್ನಬ್ ಚಂಡಮಾರುತಕ್ಕೂ ಸಂಬಂಧ ಸಂಬಂಧ ಇದೆ ಎಂದು ಹೇಳಲಾಗುತ್ತಿದ್ದರೂ, ಅದು ಅಧಿಕೃತವಾಗಿ ದೃಢಪಟ್ಟಿಲ್ಲ.ಚಂಡಮಾರುತದ ತೀವ್ರತೆಯೇ ಇದಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ ಆಸ್ಟ್ರೇಲಿಯಾ ಸೇರಿದಂತೆ ಪ್ರಪಂಚದ ವಿವಿಧ ಭಾಗಗಳಲ್ಲಿ ಚಂಡಮಾರುತ ಅಪ್ಪಳಿಸುವ ಮುನ್ನ ಇಂತಹ ಸುದೀರ್ಘ Apocalyptic ಎಂಬ ಭಯಾನಕ ದೃಶ್ಯಗಳು ಕಂಡುಬಂದಿದ್ದ ಉದಾಹರಣೆಗಳಿವೆ
ತಜ್ಞರು ಹೇಳುವ ಪ್ರಕಾರ ತೀವ್ರ ಸ್ವರೂಪದ ಚಂಡಮಾರುತ ಬೀಸುವಾಗ ಅದರ ಭೀಕರ ಮಾರುತಗಳು ಅಪಾರ ಪ್ರಮಾಣದ ಧೂಳು, ಮರಳು ಅಥವಾ ಕಬ್ಬಿಣದ ಅಂಶ ಹೆಚ್ಚಿರುವ ಕೆಂಪು ಮಣ್ಣನ್ನು ಭಾರಿ ಎತ್ತರಕ್ಕೆ ಎತ್ತಿ ವಾತಾವರಣದ ಮೇಲ್ಭಾಗದಲ್ಲಿ ಸೇರುವಂತೆ ಮಾಡುತ್ತವೆ. ಛತ್ತೀಸ್ಗಢದಲ್ಲೂ ಅರ್ನಬ್ ಚಂಡಮಾರುತದ ಬಲವಾದ ಗಾಳಿ ಕೆಂಪು ಮಣ್ಣಿನ ಧೂಳನ್ನು ವಾತಾವರಣಕ್ಕೆ ಚಿಮ್ಮಿಸಿರುವುದರಿಂದ ಆಕಾಶ ಈ ರೀತಿ ಕೆಂಪು ಬಣ್ಣಕ್ಕೆ ತಿರುಗಿರಬಹುದು ಎಂದು ಅಂದಾಜಿಸಲಾಗಿದೆ.
ಆಕಾಶ ಕೆಂಪಾಗಲು ಚಂಡಮಾರುತ ಕಾರಣವಲ್ಲ ಎಂದರೆ..ಮತ್ತೇನು ಕಾರಣ ಇರಬಹುದು ಎನ್ನುವ ಪ್ರಶ್ನೆ ಕೂಡಾ ಏಳುತ್ತೆ. ವಿಜ್ಞಾನಿಗಳ ಪ್ರಕಾರ, ನಿಸರ್ಗದಲ್ಲಿರುವ ಅಣುಗಳು ಹಾಗೂ ಸೂರ್ಯನ ಬೆಳಕಿನ ಕಿರಣಗಳ ಚುದುರುವಿಕೆಯಲ್ಲಿನ ವ್ಯತ್ಯಾಸಗಳಿಂದ ಆಕಾಶ ಕೆಂಪು ಬಣ್ಣಕ್ಕೆ ಬದಲಾಗುತ್ತದಂತೆ. ಇನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ, ಸೂರ್ಯನ ಬೆಳಕು ವಾತಾವರಣದ ದೀರ್ಘ ಭಾಗದ ಮೂಲಕ ಹಾದುಹೋಗಬೇಕಾಗುತ್ತದೆ. ಈ ವೇಳೆ ನೀಲಿ ಬಣ್ಣದಂತಹ ಕಡಿಮೆ ತರಂಗ ಹೊಂದಿರುವ ಬೆಳಕು ಹೆಚ್ಚು ಪ್ರಬಲವಾಗಿ ಚದುರಿಹೋಗುತ್ತದೆ. ಇದರಿಂದಾಗಿ ಕೆಂಪು ಮತ್ತು ಕಿತ್ತಳೆ ಬಣ್ಣಗಳಂತಹ ಹೆಚ್ಚು ತರಂತ ಹೊಂದಿರುವ ಬಣ್ಣಗಳು ಎದ್ದು ಕಾಣುತ್ತವೆಂತೆ.
ಹೀಗೆ ನಡೆಯುವ ವಿದ್ಯಮಾನವನ್ನು ಸಾಮಾನ್ಯವಾಗಿ ರೇಲಿ ಸ್ಕ್ಯಾಟರಿಂಗ್ ಎಂದು ಹೇಳಲಾಗುತ್ತದೆ. ಆದರೂ ಧೂಳು, ಹೊಗೆ ಮತ್ತು ನೀರಿನ ಹನಿಗಳಂತಹ ದೊಡ್ಡ ಕಣಗಳು ಸಹ ಬೇರೆ ರೀತಿಯ ಚದುರುವಿಕೆ ಪ್ರಕ್ರಿಯೆಗಳ ಮೂಲಕ ಬೆಳಕಿನ ಬಣ್ಣ ಮತ್ತು ತೀವ್ರತೆಯ ಮೇಲೆ ಪ್ರಭಾವ ಬೀರಬಲ್ಲವು ಎನ್ನಲಾಗುತ್ತದೆ.
