ಎಸ್ ಐಆರ್ ಗದ್ದಲ ದೇಶವ್ಯಾಪಿ ವ್ಯಾಪಿಸುತ್ತಲೇ ಇದೆ. ಪ್ರತಿಭಟನೆಗಳು ಜೋರಾಗುತ್ತಿವೆ. ಇಂಥಹ ಸಂದರ್ಭದಲ್ಲೇ ಇಂಡಿಯಾ ಒಕ್ಕೂಟದ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ದೇಶದಲ್ಲಿ ಚುನಾವಣಾ ಕಳ್ಳತನ ನಡೆದಿದೆ ಎಂದು ಗಂಭೀರ ಆರೋಪಿ ಜ್ಞಾಪನ ಪತ್ರ ಸಲ್ಲಿಕೆ ಮಾಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಾಷ್ಚ್ರಪತಿಗಳ ಭೇಟಿಯ ಸಂದರ್ಭದಲ್ಲಿ ನಾವು ಚುನಾವಣಾ ಅಕ್ರಮ ಹಾಗೂ ಮತಗಳ್ಳತನದ ವಿಷಯವನ್ನು ರಾಷ್ಟ್ರಪತಿಗಳ ಗಮನಕ್ಕೆ ತಂದೆವು. ಅಚ್ಚರಿ ಎಂದರೆ ನಾವು ಪ್ರಸ್ತಾಪಿಸಿದ ಮತಗಳ್ಳತನದ ಆರೋಪಗಳನ್ನು ರಾಷ್ಟ್ರಪತಿಗಳು ನಿರಾಕರಿಸಲಿಲ್ಲ ಎಂದು ತಿಳಿಸಿದರು.

ನಾವು ಮಾಡುವ ಮತ ಕಳ್ಳತನದ ಆರೋಪಗಳನ್ನು ರಾಷ್ಟ್ರಪತಿಗಳು ತಿರಸ್ಕರಿಸುತ್ತಾರೆ.ಅಲ್ಲದೆ ಭಾರತದಲ್ಲಿ ಚುನಾವಣಾ ವ್ಯವಸ್ಥೆ ಮುಕ್ತ ಮತ್ತು ನ್ಯಾಯಯುತವಾಗಿದೆ ಅಂತ ಹೇಳುತ್ತಾರೆ ಎಂದು ಭಾವಿಸಿದ್ದೆವು. ಆದರೆ ಅದು ಹಾಗಗಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ರಾಷ್ಟ್ರಪತಿಗಳು ನಮ್ಮ ಮಾತನ್ನು ಒಪ್ಪಿಕೊಂಡಿದ್ದು ನೋಡಿ ನನಗೆ ಆಶ್ಚರ್ಯವಾಯಿತು. ಮತ ಕಳ್ಳತನ ನಡೆಯುತ್ತಿದೆ ಎಂದು ಇಡೀ ದೇಶಕ್ಕೆ ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಕಳ್ಳತನದ ಸೂತ್ರಧಾರಿಯೆಂದು ರಾಹುಲ್ ಗಾಂಧಿ ಇದೇ ವೇಳೆ ಆರೋಪಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಇದನ್ನು ಆಯೋಜಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಇನ್ನು 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಅವರು ಮತ ಕಳ್ಳತನ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆಪಾದನೆ ಮಾಡಿದರು.ಈ ಚುನಾವಣಾ ರಿಗ್ಗಿಂಗ್ನ ಪುರಾವೆ ಹಾಗೂ ಸಾಕ್ಷಿಗಳನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲು ತಮ್ಮ ತಂಡ ಸಿದ್ಧವಾಗಿದೆ, ಅದನ್ನು ರಾಷ್ಟ್ರಪತಿಗಳು ಪರಿಶೀಲನೆ ನಡೆಸಲು ಸಿದ್ಧರಿದ್ದಾರೆ ಎಂದು ರಾಹುಲ್ ತಿಳಿಸಿದರು. 

ನಾವು ನಾಲ್ಕು ದಿನಗಳ ಹಿಂದೆ ಪ್ರಾರಂಭಿಸಲಾದ ಮತ ಕಳ್ಳತನದ ವಿರುದ್ಧದ ಆಂದೋಲನದ ಬಗ್ಗೆ ರಾಷ್ಟ್ರಪತಿಗೆ ವಿವರಿಸಿದ್ದೇವೆ. ವಿರೋಧ ಪಕ್ಷದ ನಿಲುವನ್ನು ವಿವರವಾಗಿ ಪ್ರಸ್ತುತಪಡಿಸಲಾಗಿದೆ ಎಂದು ಇದೇ ವೇಳೆ ರಾಹುಲ್ ಗಾಂಧಿ ತಿಳಿಸಿದರು. ರಾಹುಲ್ ಗಾಂಧಿ ಬಳಿು ಮಾತಾನಾಡಿದ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಮತ ಕಳ್ಳತನದ ವಿಷಯ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಾಡಿದ ಗಂಭೀರ ತಪ್ಪನ್ನು ಪ್ರಸ್ತಾಪಿಸಲಾಯಿತು ಎಂದರು..ಚುನಾವಣೆಗಳಿಗೆ ಇವಿಎಂಗಳನ್ನು ಮತಪತ್ರಗಳೊಂದಿಗೆ ಬದಲಾಯಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದವು. ರಾಷ್ಟ್ರಪತಿಗಳು ಮತ ಕಳ್ಳತನ ಪ್ರಕರಣಗಳ ಪುರಾವೆಗಳನ್ನು ಕೋರಿದ್ದಾರೆ ಎಂದು ಅವರು ಹೇಳಿದರು. ಪ್ರತಿಪಕ್ಷಗಳು ಪ್ರಸ್ತುತ ಈ ಪುರಾವೆಗಳನ್ನು ಸಂಗ್ರಹಿಸುತ್ತಿವೆ ಮತ್ತು ಶೀಘ್ರದಲ್ಲೇ ಅದನ್ನು ರಾಷ್ಟ್ರಪತಿಗಳಿಗೆ ಪ್ರಸ್ತುತಪಡಿಸಲಿವೆ ಎಂದು ಖರ್ಗೆ ಸ್ಪಷ್ಟಪಡಿಸಿದರು