ಅಷ್ಟೇ ಅಲ್ಲ, ದರ್ಶನ್ ಜೈಲಿಗೆ ಹೋಗೋ ಸಮಯದಲ್ಲಿ ಮನೆಯಲ್ಲಿದ್ದ ಸುಮಾರು 10 ಕೋಟಿ ನಗದನ್ನು ಧನ್ವೀರ್ ಕೈಗೆ ಸೇಫ್ ಆಗಿ ಇಡೋಕೆ ಕೊಟ್ಟಿದ್ರು ಅನ್ನೋ ಮಾತು ಕೇಳಿಬಂದಿದೆ. ಈ ಹಣ ವಾಪಸ್ ಕೇಳಿದಾಗ ಧನ್ವೀರ್ ನಾಳೆ, ನಾಡಿದ್ದು ಅಂತ ಸತಾಯಿಸ್ತಿದ್ದಾರೆ ಅನ್ನೋ ಆರೋಪ ಬಂದಿದ್ದು, ಜೈಲಿನಿಂದ ದರ್ಶನ್ ಕೂಡ ಹಣ ವಾಪಸ್ ಕೊಡು ಅಂತ ಧನ್ವೀರ್‌ಗೆ ಸೂಚನೆ ನೀಡಿದ್ರಂತೆ. ಈ 10 ಕೋಟಿ ನಗದು ವ್ಯವಹಾರದ ಬಗ್ಗೆ ಈಗ ಇಡಿ ಮತ್ತು ಐಟಿ ಇಲಾಖೆಗೂ ದೂರು ಹೋಗಿರೋದು ನಿಮಗೆಲ್ಲಾ ಗೊತ್ತೇ ಇದೆ.
ಇಷ್ಟೇ ಅಲ್ಲದೆ ಧನ್ವೀರ್ ಅವರದ್ದು ಎನ್ನಲಾದ ಕೆಲ ಆಡಿಯೋ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ವು. ಅದರಲ್ಲಿ ವಿಜಯಲಕ್ಷ್ಮಿ ಅವರ ಬಗ್ಗೆ ಆಕ್ಷೇಪಾರ್ಹ ಮಾತುಗಳಿದ್ದವು. ಇದರಿಂದ ಕೋಪಗೊಂಡ ದರ್ಶನ್ ಕೋರ್ಟ್ ಮೆಟ್ಟಿಲೇರಿ, ನನ್ನಿಂದಲೇ ಬೆಳೆದವನು ಈಗ ನನ್ನ ಬೆನ್ನಿಗೇ ಚೂರಿ ಹಾಕ್ತಿದ್ದಾನೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ತಮ್ಮ ಕುಟುಂಬದ ವಿರುದ್ಧ ಸುಳ್ಳು ಹರಡದಂತೆ ಕೋರ್ಟ್‌ನಿಂದ ಮಧ್ಯಂತರ ತಡೆಆಜ್ಞೆ ತಂದಿದ್ದಾರೆ.
ಈ ಜಗಳ ಇಲ್ಲಿಗೇ ನಿಲ್ಲಲಿಲ್ಲ. ಅಕ್ಟೋಬರ್ 21 ರಂದು ವಿಜಯಲಕ್ಷ್ಮಿ ಮತ್ತೆ ಅವರ ಮ್ಯಾನೇಜರ್ ನಾಗರಾಜ್ ಧನ್ವೀರ್ ಮನೆಗೆ ಹೋಗಿ ಗಲಾಟೆ ಮಾಡಿದ್ರು ಅಂತ ಧನ್ವೀರ್ ತಂದೆ ರಾಜಾಜಿನಗರ ಠಾಣೆಯಲ್ಲಿ ದೂರು ಕೊಟ್ಟರೆ, ಧನ್ವೀರ್ ತಮಗೆ ಪ್ರಾಣಬೆದರಿಕೆ ಹಾಕಿದ್ದಾನೆ ಅಂತ ಮ್ಯಾನೇಜರ್ ನಾಗರಾಜ್ ದೂರು ನೀಡಿದ್ದಾರೆ. ಸದ್ಯ ಧನ್ವೀರ್ ವಿರುದ್ಧ ಆರ್‌ಆರ್ ನಗರ ಹಾಗೂ ಬಸವೇಶ್ವರನಗರ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿರೋದು ದೊಡ್ಡ ಸುದ್ದಿಯಾಗಿದೆ.
ಇದೀಗ ಅಕ್ಟೋಬರ್ 31 ರಂದು ರೇಣುಕಾಸ್ವಾಮಿ ಪ್ರಕರಣದ ನಂತರ ಕುಟುಂಬದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ವಿಜಯಲಕ್ಷ್ಮಿ ಅವರು ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿದ್ದು, ತಮ್ಮ ಬಳಿ ಎಲ್ಲಾ ಆಡಿಯೋ-ಮೆಸೇಜ್ ಸಾಕ್ಷಿಗಳಿವೆ ಎಂದಿದ್ದಾರೆ. ಈ ಕೇಸ್‌ನ ವಿಚಾರಣೆಯನ್ನು ಕೋರ್ಟ್ ನವೆಂಬರ್ 30ಕ್ಕೆ ಮುಂದೂಡಿದೆ.



