ಕರ್ನಾಟಕ ರಾಜ್ಯೋತ್ಸವದ ಸಂದರ್ಭದ ವೇಳೆ ಬೆಂಗಳೂರು ಮತ್ತು ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ಸೇವೆಗೆ ಹಸಿರು ನಿಶಾನೆ ತೋರಿದ ರೈಲ್ವೆ ಸಚಿವರು ಪ್ರಧಾನಿ ಮೋದಿ ದಕ್ಷಿಣ ಬುಲೆಟ್ ರೈಲು ಕಾರಿಡಾರ್ ಗೆ ಅನುಮೋದನೆ ನೀಡಿದ್ದಾರೆ. ಈ ಕಾರಿಡಾರ್ ಈ ಪ್ರದೇಶದ ಪ್ರಮುಖ ತಾಂತ್ರಿಕ ಮತ್ತು ಆರ್ಥಿಕ ಕೇಂದ್ರಗಳನ್ನು ಸಂಪರ್ಕಿಸುತ್ತದೆ ಎಂದರು. ದಕ್ಷಿಣ ರಾಜ್ಯಗಳ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಎಂದು ತಿಳಿಸಿದರು. ಈ ಪ್ರಸ್ತಾವಿತ ಕಾರಿಡಾರ್ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದ ಅವರು ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣವು ಈಗ ಕೇವಲ 73 ನಿಮಿಷಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು. ಇನ್ನು ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಪ್ರಯಾಣವು ಸುಮಾರು 2 ಗಂಟೆ 10 ನಿಮಿಷ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಇದೇ ವೇಳೆ ಬೆಂಗಳೂರು ಮತ್ತು ಚೆನ್ನೈ ಈಗ ಒಂದೇ ನಗರದಂತಾಗಲಿವೆ. ಈ ಸಂಪರ್ಕ ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವಿನ ಆರ್ಥಿಕ ಏಕೀಕರಣವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತಿಳಿಸಿದರು. ದೇಶವು ಅಭಿವೃದ್ಧಿ ಹೊಂದಿದ ಭಾರತದ ಗುರಿಯತ್ತ ಸಾಗುತ್ತಿರುವಾಗ, ಪ್ರಧಾನಿ ಮೋದಿ ಅವರು 4,000 ಕಿಲೋಮೀಟರ್ ಬುಲೆಟ್ ರೈಲು ಕಾರಿಡಾರ್ ಅನ್ನು ಅನುಮೋದಿಸಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು. ಮುಂದಿನ ದಿನಗಳಲ್ಲಿ ಮತ್ತೊಂದು 3,000 ಕಿಲೋಮೀಟರ್ ಕಾರಿಡಾರ್ ಅನ್ನು ಘೋಷಿಸಲಾಗುವುದು ಎಂದ ಅವರು ಉತ್ತರ ಕರ್ನಾಟಕದ ಮೂಲಕ ಹಾದುಹೋಗುವ ಪ್ರಸ್ತಾವಿತ ಬೆಂಗಳೂರು-ಪುಣೆ ಬುಲೆಟ್ ರೈಲು ಕಾರಿಡಾರ್ ಕೂಡ ಶೀಘ್ರದಲ್ಲೇ ವಾಸ್ತವವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


