ನಾನಾ ಪಾಟೇಕರ್ ತಮ್ಮ 'ಪ್ರಹಾರ್' ಸಿನಿಮಾದ ಸೇನಾ ಅಧಿಕಾರಿಯ ಪಾತ್ರಕ್ಕಾಗಿ, ಬೆಳಗಾವಿಯ 'ಮರಾಠಾ ಲೈಟ್ ಇನ್ಫೆಂಟ್ರಿ' ಕಮಾಂಡೋ ಕೇಂದ್ರದಲ್ಲಿ ಸುಮಾರು 3 ವರ್ಷ ಕಠಿಣ ತರಬೇತಿ ಪಡೆದಿದ್ದರು. ಆ ಸಮಯದಲ್ಲಿ ಬೆಳಗಾವಿಯಲ್ಲಿ ನಾನು ಅಧ್ಯಾಪಕರಾಗಿದ್ದಾಗ ಭೇಟಿಯಾಗಿದ್ದು, ನಾನಾ ಅವರು ನೋಡಿ ಚೌಗುಲೆಯವರೇ ನಿಮ್ಮ ಭಾಷೆಯಲ್ಲಿ ನಾನು ಸಿನಿಮಾ ಮಾಡಿದ್ದೆ, ಆ ಪಾತ್ರದ ಸಂಭಾಷಣೆ ಹೀಗಿದೆ ಎಂದು ಅಷ್ಟು ದೊಡ್ಡದ ಸಾಲುಗಳ ಡೈಲಾಗ್ ಅನ್ನು ಕನ್ನಡದಲ್ಲೇ ಹೇಳಿದರು ಅಷ್ಟು ನೆನೆಪಿನ ಶಕ್ತಿ ಅವರಿಗಿತ್ತು. ಅಷ್ಟೇ ಅಲ್ಲದೇ ಕನ್ನಡ ಚಿತ್ರರಂಗದ ಶಿಸ್ತು, ಕನ್ನಡ ನಿರ್ದೇಶಕರ ಬಗ್ಗೆ ಮಾತನಾಡಿದರು. ಕನ್ನಡ ಚಿತ್ರರಂಗದ ಮೇಲೆ ಅವರಿಗೆ ಅಪಾರ ಗೌರವವಿತ್ತು. ಅಷ್ಟು ದೊಡ್ಡ ನಟರಾದರು ಬಹಳ ಸರಳವಾಗಿದ್ದರೂ. ತುಂಬ ಡೌನ್ ಟು ಅರ್ತ್, ಪ್ಯೂರ್ ಗ್ರೇಟ್ ಸೋಲ್ ಆಗಿ ಕಾಣುಸ್ತಿದ್ರು.
ನಾನಾ ಪಾಟೇಕರ್ ಕೇವಲ ಶ್ರೇಷ್ಠ ನಟನಷ್ಟೇ ಅಲ್ಲ, ಒಬ್ಬ ಮಹಾನ್ ಸಮಾಜ ಸೇವಕ ಕೂಡ ಹೌದು. ಅದಕ್ಕೆ ಸಾಕ್ಷಿ ಅವರು ಸ್ಥಾಪಿಸಿದ 'ನಾಮ್ ಫೌಂಡೇಶನ್'. ಈ ಸಂಸ್ಥೆ ಆರಂಭಕ್ಕೆ ಒಂದು ಪ್ರಮುಖ ಕಾರಣವಿತ್ತು. ನಾನಾ ಅವರು ಐಷಾರಾಮಿ ಕಾರೊಂದನ್ನು ಖರೀದಿಸಲು ಹಣ ಕೂಡಿಟ್ಟಿದ್ದರು. ಆದರೆ ಆ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಸಣ್ಣ ಸಾಲವನ್ನು ತೀರಿಸಲಾಗದೆ ರೈತರು ಆತ್ಮಹ*ತ್ಯೆಗೆ ಶರಣಾಗುತ್ತಿರುವ ಸುದ್ದಿ ಹಾಗೂ ರೈತರ ಮಡದಿಯರ ರೋಧನೆ ಹಾಗೂ ಮಕ್ಕಳ ಕಣ್ಣೀರು ನಾನಾ ಅವರನ್ನು ಕಾಡಿತು. "ಇಂತಹ ಸಂಕಷ್ಟದ ಸ್ಥಿತಿಯಲ್ಲಿ ನನಗೇಕೆ ಐಷಾರಾಮಿ ಕಾರು?" ಎಂದು ಯೋಚಿಸಿ, ಕೂಡಿಟ್ಟಿದ್ದ ಸಂಪೂರ್ಣ ಹಣವನ್ನು ರೈತರ ನೆರವಿಗಾಗಿ ನೀಡಿದರು. ಅಂದಿನಿಂದ ರೈತರ ಶಾಶ್ವತ ಏಳಿಗೆಗಾಗಿ 'ನಾಮ್ ಫೌಂಡೇಶನ್' ನಿರ್ಮಿಸಿ ಸೇವೆ ಸಲ್ಲಿಸುತ್ತಿದ್ದಾರೆ.
ನಾನಾ ಪಾಟೇಕರ್ ಅವರ ಬಾಲ್ಯದ ದಿನಗಳ ಹೇಗಿತ್ತು ಅಂದ್ರೆ ಅವರ ಮೂಲ ಹೆಸರು ವಿಶ್ವನಾಥ್ ಎಂದೂ, ಮರಾಠಿಯಲ್ಲಿ 'ನಾನಾ' ಎಂದು ಕರೆಯುವುದು ರೂಢಿಯಾಗಿತ್ತು. 'ಉರುಡ್' ಎಂಬ ಗ್ರಾಮದಲ್ಲಿ ಜನಿಸಿದ ನಾನಾ ಮೂಲತಃ ರಂಗಭೂಮಿ ಕಲಾವಿದರು. ಚಿಕ್ಕ ವಯಸ್ಸಿನಲ್ಲೇ ಆರ್ಥಿಕ ಸಂಕಷ್ಟ ಎದುರಿಸಿದ ಅವರು, ದುಡಿಯುತ್ತಲೇ ಮುಂಬೈನ ಪ್ರಸಿದ್ಧ 'ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್'ನಲ್ಲಿ ರಂಗಭೂಮಿ ಪದವಿ ಪಡೆದರು.
ದುಡಿಮೆ ಜೊತೆಗೆ ರಂಗಭೂಮಿಯ ನಟನೆಗೆ ಬರ್ತಾರೆ. ಅವರು ರಂಗಭೂಮಿಯಲ್ಲಿ ಅನೇಕ ನಾಟಕಗಳಲ್ಲಿ ನಟಿಸಿ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ ಆದ್ರೆ ಹೆಚ್ಚು ಪ್ರಸಿದ್ಧ ನಾಟಕಗಳು ಅಂದ್ರೆ ಜಯವಂತ್ ದಳವಿ ಅವರು ಬರೆದ ಜನಪ್ರಿಯ ಮತ್ತು ಬಲಿಷ್ಠ ಸಾಮಾಜಿಕ ನಾಟಕವಾಗಿದೆ. ಈ ನಾಟಕದಲ್ಲಿ ನಾನಾ ಪಾಟೇಕರ್ ಅವರು ನಿರ್ವಹಿಸಿದ 'ಗುಲಾಬ್ ರಾವ್' ಎಂಬ ರಾಜಕಾರಣಿಯ ನೆಗೆಟಿವ್ (ಖಳನಾಯಕನ) ಪಾತ್ರವು ಅವರ ವೃತ್ತಿಜೀವನಕ್ಕೆ ಬಹಳ ದೊಡ್ಡ ಹೆಸರು ತಂದುಕೊಡುತ್ತದೆ. ಹಾಗೆಯೇ 1978 ರಲ್ಲಿ ಪ್ರಸಿದ್ಧ ರಂಗ ನಿರ್ದೇಶಕಿ ವಿಜಯ ಮೆಹ್ತಾ ಅವರ ನಿರ್ದೇಶನದ ‘ಹಮೀದಾಬಾಯಿಚಿ ಕೋಠಿ’ ನಾಟಕವು ನಾನಾ ಅವರ ನಟನಾ ವೃತ್ತಿಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟಿತು. ಈ ನಾಟಕದಲ್ಲಿನ ಆವೇಶಭರಿತ ನಟನೆ, ವಿಶಿಷ್ಟ ಸಂಭಾಷಣೆ ಧಾಟಿ ಮತ್ತು ಕಣ್ಣುಗಳಲ್ಲೇ ಭಾವನೆ ಮೂಡಿಸುವ ಕಲೆ ರಂಗಭೂಮಿ ವಿಮರ್ಶಕರನ್ನು ಬೆರಗುಗೊಳಿಸಿತು. ಈ ನಾಟಕದ ಯಶಸ್ಸಿನ ನಂತರವೇ ಚಿತ್ರರಂಗದ ಪ್ರಮುಖ ನಿರ್ದೇಶಕರು ಅವರನ್ನು ಗುರುತಿಸಿ ಅವಕಾಶ ನೀಡಲು ಪ್ರಾರಂಭಿಸಿದರು.
ನಾನಾ ಪಾಟೇಕರ್ ಅಭಿನಯದ ಮೊದಲ ಚಿತ್ರ 'ಗಮನ್'. ನಂತರ 1979 ರಲ್ಲಿ ಬಿಡುಗಡೆಯಾದ 'ಸಿಂಹಾಸನ್' ಅವರ ಮೊದಲ ಮರಾಠಿ ಚಲನಚಿತ್ರವಾಯಿತು. ಇನ್ನು 2010 ರಲ್ಲಿ ಬಿಡುಗಡೆಯಾದ ಲೂಸ್ ಮಾದ ಯೋಗೇಶ್ ಅಭಿನಯದ 'ಯಕ್ಷ' ಸಿನಿಮಾದಲ್ಲಿ 'ಯೋಗರಾಜ್ ಪುಲಕೇಶಿ' ಎಂಬ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡುವ ಮೂಲಕ ಅವರು ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದರು. 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ದೂರದ ಹಳ್ಳಿಯಲ್ಲಿ ಇರಬೇಕು, ಓದಬೇಕು, ಬರೆಯಬೇಕು, ಹಳ್ಳಿಯ ಬಡ ಜನರಿಗೆ ನೆರವಾಗಬೇಕು ಆರ್ಥಿಕವಾಗಿ ಅವರನ್ನು ಎತ್ತರಕ್ಕೆ ಕರೆದೊಯ್ಯಬೇಕು ಎಂಬ ಆಸೆ ಇತ್ತು. ಒಂದು ದಿನ ಮರಣ ಹೊಂದಿದ್ದರೆ ಅವರೇ ನನ್ನ ಶವವನ್ನು ಹೊತ್ತರೆ ಸಾಕು ನನ್ನ ಜೀವನ ಸಾರ್ಥಕ ಎನ್ನುತ್ತಿದ್ದರು. ರಾಜಕೀಯವಾಗಿಯೂ ರಾಜಕೀಯ ಧೋರಣೆಯನ್ನು ಮೆಚ್ಚುತ್ತಾ ಮೆಚ್ಚುತ್ತಾ ಟೀಕಿಸುತ್ತಿದ್ದರು.
ಹೀಗೆ ನಟನೆ, ರಂಗಭೂಮಿ ಹಾಗೂ ಸಮಾಜ ಸೇವೆ ಮೂಲಕ ರೈತರು ಮತ್ತು ಸೈನಿಕರಿಗೆ ಸದಾ ನೆರವಾಗುತ್ತಿದ್ದ ನಾನಾ ಪಾಟೇಕರ್ ಅವರ ಅಗಲಿಕೆ ಇಡೀ ಕಲಾ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
