ಜ್ಞಾನೇಶ್ ಕುಮಾರ್ ಈಗಾಗಲೇ ದೇಶದ ಎರಡನೇ ಅತ್ಯುನ್ನತ ಭದ್ರತಾ ಶ್ರೇಣಿಯಾದ Z-ಪ್ಲಸ್ ರಕ್ಷಣೆ ಹೊಂದಿದ್ದಾರೆ. ಆದರೂ ಇತ್ತೀಚಿನ ಗಂಭೀರ ಸುರಕ್ಷತೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅವರ ನಿವಾಸ ಮತ್ತು ಕಚೇರಿಗಳ ಸುತ್ತ ಹೆಚ್ಚುವರಿ ಕಾವಲಿಗಿವೆ.
ಇತ್ತೀಚೆಗೆ ದೆಹಲಿ ಮತ್ತು ಆಗ್ರಾದಲ್ಲಿರುವ ಜ್ಞಾನೇಶ್ ಕುಮಾರ್ ನಿವಾಸದ ಮುಂದೆ ಕೆಲವು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು. ಇದರ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ದೆಹಲಿ, ಆಗ್ರಾದಲ್ಲಿರುವ ಅವರ ನಿವಾಸಗಳು ಮತ್ತು ಚುನಾವಣಾ ಆಯೋಗದ ಪ್ರಧಾನ ಕಚೇರಿಯಲ್ಲಿನ ಭದ್ರತಾ ಸಿಬ್ಬಂದಿಯಲ್ಲೂ ಹೆಚ್ಚುವರಿಯಾಗಿ ಸಿಐಎಸ್ಎಫ್, ಸಿಆರ್ಪಿಎಫ್, ಆರ್ಪಿಎಫ್ ಹಾಗೂ ದೆಹಲಿ ಪೊಲೀಸರನ್ನು ನೇಮಿಸಲಾಗಿದೆ.