ಅವರ ಈ ದಿಢೀರ್ ನಿರ್ಧಾರ ಹೊರಬೀಳುತ್ತಿದ್ದಂತೆ, ದೇಶಾದ್ಯಂತ ಶುಭಾಶಯ ಹಾಗೂ ಗೌರವದ ಮಹಾಪೂರವೇ ಹರಿದುಬಂದಿದೆ. ಇದರ ನಡುವೆ, ಸಿಜೆಪಿ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹರ್ಮನ್‌ಪ್ರೀತ್ ಇನ್‌ಸ್ಟಾಗ್ರಾಮ್ ಪೋಸ್ಟ್'ಗೆ ಕಾಮೆಂಟ್ ಮಾಡಿ ಸ್ಟೋರಿ ಹಾಕಿರುವುದು ಎಲ್ಲರ ಗಮನ ಸೆಳೆದಿದೆ.
ಅಭಿಜೀತ್ ಕಾಮೆಂಟ್ ಅಲ್ಲಿ ಹೀಗೆ ಬರೆದಿದ್ದಾರೆ "ಮತ್ತೊಮ್ಮೆ ಕಾಮೆಂಟ್ ಮಾಡುತ್ತಿರುವುದಕ್ಕೆ ಕ್ಷಮಿಸಿ, ಆದರೆ ಇದನ್ನು ಹೇಳಲೇಬೇಕು. ಅಂದು ಸೆಮಿಫೈನಲ್ ಪಂದ್ಯದಲ್ಲಿ ನೀವು ರನೌಟ್ ಆಗಿ ಕೋಪದಿಂದ ಮೈದಾನ ತೊರೆದ ಕ್ಷಣ ನನಗೆ ಇಂದಿಗೂ ನೆನಪಿದೆ. ಅದು ನಿಜಕ್ಕೂ ಬೇಸರದ ಸಂಗತಿಯಾಗಿತ್ತು. ಕೆಲವರು ನಿಮ್ಮನ್ನು ಕೋಪಿಷ್ಠೆ, ಅತಿಯಾದ ಭಾವನಾತ್ಮಕ ವ್ಯಕ್ತಿ ಎಂದೆಲ್ಲಾ ಕರೆದರು. ಆದರೆ ನನಗೆ ಮಾತ್ರ ನೀವು ಈ ಆಟವನ್ನು ಎಷ್ಟು ಪ್ರೀತಿಸುತ್ತೀರಿ ಮತ್ತು ದೇಶಕ್ಕಾಗಿ ಗೆಲ್ಲಲು ಎಷ್ಟು ಹಂಬಲಿಸುತ್ತೀರಿ ಎಂಬುದು ಸ್ಪಷ್ಟವಾಗಿ ಕಾಣಿಸಿತು."
ಮುಂದುವರಿದು, "ಜನರು ಬಯಸುವ ಶಾಂತ ಸ್ವಭಾವದ ನಾಯಕಿಯಾಗಲು ನೀವು ಎಂದಿಗೂ ಪ್ರಯತ್ನಿಸಲಿಲ್ಲ. ಪ್ರತಿ ಗೆಲುವು, ಸೋಲು ಮತ್ತು ಹೋರಾಟವನ್ನು ನೀವು ಮನಸ್ಸಿಗೆ ತೆಗೆದುಕೊಂಡಿದ್ದೀರಿ. ನಿಮ್ಮಲ್ಲಿದ್ದ ಆ ಗೆಲುವಿನ ಹಸಿವೇ ಇಡೀ ತಂಡದ ಹಸಿವಾಯಿತು. ವರ್ಷಗಳ ಹೋರಾಟದ ನಂತರ ನೀವು ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದ್ದನ್ನು ನೋಡುವುದೇ ಒಂದು ಅದ್ಭುತ ಕ್ಷಣವಾಗಿತ್ತು" ಎಂದಿದ್ದಾರೆ.
"ನೀವು ಬಿಟ್ಟುಹೋಗುತ್ತಿರುವ ನಿಜವಾದ ಸಾಧನೆ ಅಂದರೆ ಅದು ಟ್ರೋಫಿ ಮಾತ್ರವಲ್ಲ, ಸೋಲೊಪ್ಪಿಕೊಳ್ಳದೆ ಶ್ರೇಷ್ಠತೆಗಾಗಿ ಹೋರಾಡುವ ಒಂದು ಬಲವಾದ ತಂಡ. ನಿಮ್ಮ ಅನುಪಸ್ಥಿತಿಯಲ್ಲೂ ಹೇಗೆ ಗೆಲ್ಲಬೇಕು ಎಂಬುದನ್ನು ನೀವು ಈ ತಂಡಕ್ಕೆ ಕಲಿಸಿದ್ದೀರಿ. ಮುಂಬರುವ ದಿನಗಳಲ್ಲಿ ಬೇರೆಯವರು ತಂಡವನ್ನು ಮುನ್ನಡೆಸಬಹುದು, ಆದರೆ ಅವರಲ್ಲಿ ನಿಮ್ಮ ಹೋರಾಟದ ಕಿಚ್ಚು ಖಂಡಿತ ಇರುತ್ತದೆ. ಇಷ್ಟೆಲ್ಲಾ ಸವಿನೆನಪುಗಳನ್ನು ನೀಡಿದ್ದಕ್ಕೆ ಧನ್ಯವಾದಗಳು ಕ್ಯಾಪ್ಟನ್" ಎಂದು ಅಭಿಜೀತ್ ಬರೆದಿದ್ದಾರೆ.


