SIR ಮೂಲಕ ದೇಶದ 13.3ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ತೆಗೆಯಲಾಗಿದೆ.ಇದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಸತತ ಹೋರಾಟಗಳು ನಡೆಯುತ್ತಿವೆ.ಮತ್ತೊಂದು ಕಡೆ ಈಗ ಕಾಂಗ್ರೆಸ್ ಈಗ ಹೆಸರು ಕಳೆದುಕೊಂಡಿರುವವನ್ನು ಮತ್ತೆ ಮತದಾನದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಮುಂದಾಗಿದೆ. ಅದರಂತೆ ದೇಶಾದ್ಯಂತ ಬೂತ್ ಮಟ್ಟದಲ್ಲಿ ಮತ ರಕ್ಷಕರು ಎಂಬ ಕಾರ್ಯಕರ್ತರನ್ನು ನೇಮಿಸಲು ನಿರ್ಧರಿಸಿದೆ.

ಪತ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಪ್ರಮುಖ ಸಭೆಯ ನಂತರ, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ನೂತನ ಅಭಿಯಾನವನ್ನು ಘೋಷಣೆ ಮಾಡಿದ್ದಾರೆ

ಏನು ಈ ಮತರಕ್ಷಕ ಅಭಿಯಾನದ ಪ್ಲಾನ್.? 
ದೇಶದ ಪ್ರತಿಯೊಂದು ಮತಗಟ್ಟೆಹಂತದಲ್ಲಿ ಮತರಕ್ಷಕರನ್ನು ನೇಮಿಸಲಾಗುತ್ತದೆ. ಈ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ವಿನಾಕಾರಣ ಅಥವಾ ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾದ ಅರ್ಹ ಮತದಾರರನ್ನು ಗುರುತಿಸುತ್ತಾರೆ.ಅಲ್ಲದೇ ಅವರ ಮರುಸೇರ್ಪಡೆಗಾಗಿ ಫಾರ್ಮ್ 6 ತುಂಬಲು ಮತ್ತು ಇತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಹಾಯ ಮಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾ.ಯಕರು 13.3 ಕೋಟಿ ಎಂಬುದು ಕೇವಲ ಸಂಖ್ಯೆಯಲ್ಲ; ಅದರಲ್ಲಿ ಯುವಕರು, ಮಹಿಳೆಯರು ಹಾಗೂ ಸಮಾಜದ ಎಲ್ಲಾ ವರ್ಗದ ಜನರು ಸೇರಿದ್ದಾರೆ. ಹೆಸರು ಕಳೆದುಕೊಂಡ ಪ್ರತಿಯೊಬ್ಬ ಅರ್ಹ ಮತದಾರನಿಗೆ ಅವರ ಹಕ್ಕನ್ನು ಮರಳಿಸುವುದು ನಮ್ಮ ಉದ್ದೇಶ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಇದೇ ತಿಂಗಳ 10 ನೇ ತಾರೀಖಿನಿಂದ 20ರವರೆಗೆ ದೇಶಾದ್ಯಂತ ಬ್ಲಾಕ್ ಮಟ್ಟದಲ್ಲಿ ಬೈಕ್ ಜಾಥಾ,ಪಾದಯಾತ್ರೆ ಹಾಗೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಳಿಕ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಕೂಟದ ಬೃಹತ್ ಸಮಾರಂಭ ಆಯೋಜಿಸಲಾಗುವುದು. ಈ ವೇಳೆ ಕೇಂದಗ್ರ ಮುಖ್ಯ ಚುನಾವಣಾ ಆಯುಕ್ತರ ಜ್ಞಾನೇಶ್ ಕುಮಾರ್ ರಾಜೀನಾಮೆ ಹಾಗೂ ಪ್ರಸ್ತುತ ನಡೆಸಲಾದ ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಲು ಆಗ್ರಹಿಸಲಾಗುತ್ತಿದೆ.

ಇನ್ನೊಂದೆಡೆ, ಮತದಾರರ ಪಟ್ಟಿಯಿಂದ ತೆಗೆದುಹಾಕಲಾದವರ ಮರುಪರಿಶೀಲನೆ ಮತ್ತು ಅರ್ಹರನ್ನು ಸೇರ್ಪಡೆಗೊಳಿಸಲು ವಿಶೇಷ ಚಾಲನೆ ನೀಡಲಾಗುತ್ತಿದೆ. ಇದರಲ್ಲಿ ನಿಗದಿತ ಅರ್ಜಿ ನಮೂನೆಗಳ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.