ಪ್ರಮುಖ ನಗರಗಳಲ್ಲಿ ಇಂದಿನ ಹೊಸ ದರ ಹೀಗಿದೆ
ನವದೆಹಲಿ: 2,810 (62.50 ಏರಿಕೆ)
ಮುಂಬೈ: 2,764 (63 ಏರಿಕೆ)
ಚೆನ್ನೈ: 2,983 (66.50 ಏರಿಕೆ)
ಪಾಟ್ನಾ: 3,100.50 (71.50 ಏರಿಕೆ)
ಹೋಟೆಲ್, ಡಾಬಾಗಳಿಗೆ ಹೆಚ್ಚುವರಿ ಹೊರೆ
ಹಬ್ಬದ ದಿನಗಳಲ್ಲಿ ವ್ಯಾಪಾರ ಚುರುಕಾಗುವ ನಿರೀಕ್ಷೆಯಲ್ಲಿದ್ದ ಹೋಟೆಲ್, ರೆಸ್ಟೋರೆಂಟ್, ಡಾಬಾ ಹಾಗೂ ಕ್ಯಾಟರಿಂಗ್ ಮಾಲೀಕರಿಗೆ ಈ ಬೆಲೆ ಏರಿಕೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ದಿನನಿತ್ಯದ ನಿರ್ವಹಣಾ ವೆಚ್ಚ ಹೆಚ್ಚಾಗುವುದರಿಂದ ಮುಂಬರುವ ದಿನಗಳಲ್ಲಿ ಹೊರಗಿನ ಖಾದ್ಯಗಳು ಹಾಗೂ ಹೋಟೆಲ್ ಊಟದ ದರವೂ ಏರಿಕೆಯಾಗುವ ಸಾಧ್ಯತೆಯಿದೆ.
ಸಾಮಾನ್ಯ ಜನರಿಗೆ ಸಮಾಧಾನದ ಸಂಗತಿಯೆಂದರೆ, ಮನೆಗಳಲ್ಲಿ ಬಳಸುವ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರದಲ್ಲಿ ವ್ಯತ್ಯಾಸ ಮಾಡಲಾಗಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ದರ, ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಳಿತ ಹಾಗೂ ಸಾಗಣೆ ವೆಚ್ಚ ಹೆಚ್ಚಾಗಿರುವುದೇ ಈ ವಾಣಿಜ್ಯ ಸಿಲಿಂಡರ್ ದರ ಏರಿಕೆಗೆ ಮುಖ್ಯ ಕಾರಣ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ.
ಅಕ್ಟೋಬರ್ ತಿಂಗಳ ಆರಂಭದಲ್ಲೇ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಬಹಳಷ್ಟು ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ.


