ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್ ಅವರೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸುವ ಮೂಲಕವೇ ಮುಖ್ಯಮಂತ್ರಿಯಾದರು. ಇದನ್ನು ಕೆಲ ಕಾಂಗ್ರೆಸ್ ನಾಯಕರೇ ಮಾತನಾಡುತ್ತಿದ್ದಾರೆ ಹೀಗಿರುವಾಗ ವಿಪಕ್ಷಗಳ ಬಗ್ಗೆ ಶಿವಕುಮಾರ್ ಎಚ್ಚರಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಡಿಕೆ ಶಿವಕುಮಾರ್ ಈಗ ತಮ್ಮ ಹಳೆ ಕಸಬು ಮತ್ತೆ ಶುರು ಮಾಡಿದ್ದಾರೆ. ತಮ್ಮ ಸಚಿವರನ್ನು ನಿಯಂತ್ರಿಸಲು ಅದೇ ತಂತ್ರ ಬಳಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ (ಮಂಗಳವಾರ)ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಎರಡು ತಂಡಗಳಿಂದ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಸಚಿವರ ಚಲನವಲನದ ಮೇಲೆ ತೀವ್ರ ನಿಗಾ ಇಡಲಾಗಿದೆ, ಖಾಸಗಿ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಸಚಿವರು ಹುಷಾರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ ಎಂದಿದ್ದರು ಇದಾದ ಬೆನ್ನಲ್ಲೇ ಇವತ್ತು ಕುಮಾರಸ್ವಾಮಿ ಈ ತಿರುಗೇಟು ಕೊಟ್ಟಿದ್ದಾರೆ.

