ಈ ಬಾರಿ ರಜನಿಕಾಂತ್ ಅವರ ಮುತ್ತುವೇಲ್ ಪಾಂಡಿಯನ್ ಪಾತ್ರದ ಶಾಂತ ಸ್ವಭಾವ ಕೋಪನೇ ಮಾಡ್ಕೊಳ್ದೆ ಇರೋದರ ಹಿಂದೆ ದೊಡ್ಡ ಆಕ್ಷನ್ ಧಮಾಕವೇ ಅಡಗಿದೆ. 75ಕ್ಕೂ ಹೆಚ್ಚು ವಯಸ್ಸಿನಲ್ಲೂ ರಜನಿಕಾಂತ್ ಅವರ ಆ ಸ್ಟೈಲ್ ಮತ್ತು ಸ್ವ್ಯಾಗ್ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದೆ. ಹಾಗೆಯೇ ಎಸ್.ಜೆ. ಸೂರ್ಯ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಖಡಕ್ ಎಂಟ್ರಿ ಹಾಗೂ ಮೋಹನ್‌ಲಾಲ್ ಅವರ ಡಿಫರೆಂಟ್ ಲುಕ್ ಮಾಸ್ ಆಗಿದೆ. ಈ ಬಾರಿ ಶಿವಣ್ಣನವರದ್ದು ಕೇವಲ ಬಂದು ಹೋಗುವ ಸಣ್ಣ ಅತಿಥಿ ಪಾತ್ರವಲ್ಲ. ಮೊದಲ ಭಾಗಕ್ಕಿಂತಲೂ ಹೆಚ್ಚಿನ ಸಮಯ ಅವರು ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸ್ವತಃ ಶಿವಣ್ಣ ಹೇಳಿರುವಂತೆ ಕಥೆಯ ನಿರ್ಣಾಯಕ ಘಟ್ಟದಲ್ಲಿ ಬಂದು ಸಿನಿಮಾಗೆ ದೊಡ್ಡ ಟ್ವಿಸ್ಟ್ ಕೊಡಲಿದ್ದಾರೆ.
ಇನ್ನು ಈ ಟ್ರೇಲರ್‌ನ ಮತ್ತೊಂದು ಹೈಲೈಟ್ ಅಂದರೆ ಬಾಲಿವುಡ್ ನಟಿ ವಿದ್ಯಾಬಾಲನ್ ಅವರ ಮಾಸ್ ಲುಕ್. ಅವರ ಮಾತೇ ಶಾಸನ ಎನ್ನುವಂತಹ ಹಠಮಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ ಟ್ರೇಲರ್‌ನ ಕೊನೆಯಲ್ಲಿ ಕಾಣಿಸುವ ಆ ನಿಗೂಢ ನೆರಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದೆ. ಅದು ಬಾಲಿವುಡ್ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಅವರದ್ದು ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ಸ್ಟಂಟ್ ಬಾಡಿ ಡಬಲ್ ಸಹ ಇದನ್ನು ಖಚಿತಪಡಿಸಿದ್ದು, 1986ರ 'ಭಗವಾನ್ ದಾದಾ' ಬಳಿಕ ಸುಮಾರು 40 ವರ್ಷಗಳ ನಂತರ ರಜಿನಿ-ಹೃತಿಕ್ ಒಂದಾಗುತ್ತಿದ್ದಾರೆ ಎನ್ನಲಾಗಿದೆ. ಆದರೂ ಚಿತ್ರತಂಡ ಈ ವಿಚಾರವನ್ನು ಇನ್ನೂ ಸಸ್ಪೆನ್ಸ್ ಆಗಿ ಇಟ್ಟಿದೆ. ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ.
ಅಕ್ಟೋಬರ್ 5 ರಂದು ರಿಲೀಸ್ ಆದ ಟ್ರೇಲರ್‌ಗೆ "ನೋ ಲಾಜಿಕ್, ಓನ್ಲಿ ಮ್ಯಾಜಿಕ್" ಅಂತೀರೋ ಪ್ರೇಕ್ಷಕರು. ಇದೇ ಅಕ್ಟೋಬರ್ 15, 2026 ರಂದು ತೆರೆಗೆ ಬರಲಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡುವುದು ಖಚಿತ ಅಂತಿದ್ದಾರೆ ಪ್ರೇಕ್ಷಕರು.

