ನಾವು ದಿನನಿತ್ಯ ತಿನೋ ಅಡುಗೆಯಲ್ಲಿ ಉಪ್ಪು ಸ್ವಲ್ಪ ಜಾಸ್ತಿಯಾದ್ರೂ ಕಷ್ಟ, ಕಮ್ಮಿಯಾದ್ರೂ ಕಷ್ಟ. ಆದ್ರೆ ಇತ್ತೀಚಿನ ದಿನಗಳಲ್ಲಿ ಅತಿಯಾದ ಉಪ್ಪು ಸೇವನೆಯಿಂದ ಹಾರ್ಟ್ ಪ್ರಾಬ್ಲಮ್ ಮತ್ತು ಬಿಪಿ ಹೆಚ್ಚಾಗುತ್ತಿರೋದನ್ನು ತಡೆಯಲು ಕರ್ನಾಟಕ ಆರೋಗ್ಯ ಇಲಾಖೆ ಒಂದು ಹೊಸ ಪ್ಲಾನ್ ತಂದಿದೆ. 'ಉಪ್ಪು ಕಡಿತ ಮತ್ತು ಆರೋಗ್ಯಕರ ಆಹಾರ ಪದ್ಧತಿ' ಜಾರಿಗೆ ತರಲು ಸರ್ಕಾರಿ ಮಟ್ಟದಲ್ಲಿ ವಿಶೇಷ ಜಾಗೃತಿ ಆರಂಭವಾಗಿದೆ.

2030ರ ವೇಳೆಗೆ ಎಲ್ಲರೂ ಉಪ್ಪಿನ ಬಳಕೆಯನ್ನು ಶೇಕಡಾ ೩೦ರಷ್ಟು ಕಡಿಮೆ ಮಾಡಬೇಕು ಎಂಬುದು ಇದರ ಮುಖ್ಯ ಉದ್ದೇಶ. ಅಂದರೆ, ಒಬ್ಬ ಮನುಷ್ಯ ದಿನಕ್ಕೆ 5 ಗ್ರಾಂ (ಒಂದು ಸಣ್ಣ ಚಮಚ) ಗಿಂತ ಜಾಸ್ತಿ ಉಪ್ಪು ತಿನ್ನಲೇಬಾರದು.

ಆಹಾರ ಮತ್ತು ಆರೋಗ್ಯ ಇಲಾಖೆಯ ಮುಖ್ಯ ಮಾರ್ಗಸೂಚಿಗಳು ಮತ್ತು ಸಲಹೆಗಳು

ಹಿಟ್ಟು ಕಲಸುವಾಗ ಹುಷಾರ್: ರೊಟ್ಟಿ, ಚಪಾತಿ, ಪೂರಿ ಅಥವಾ ಅನ್ನ ಮಾಡುವಾಗ ಉಪ್ಪು ಹಾಕುವ ಅಭ್ಯಾಸವಿದ್ದರೆ ತಕ್ಷಣ ನಿಲ್ಲಿಸಿ.

ಮೇಲಿಂದ ಉಪ್ಪು ಉದುರಿಸಬೇಡಿ: ಸಲಾಡ್, ಹಣ್ಣು, ಮೊಸರು ಅಥವಾ ಬೇಯಿಸಿದ ತರಕಾರಿ ತಿನೋವಾಗ ಮೇಲಿಂದ ಉಪ್ಪು ಉದುರಿಸಿ ತಿನ್ನುವುದು ತುಂಬಾ ಅಪಾಯಕಾರಿ.

ರುಚಿ ತಡೆಯಿರಿ: ಹಪ್ಪಳ, ಉಪ್ಪಿನಕಾಯಿ, ಚಟ್ನಿ, ಸಾಸ್, ಕೆಚಪ್ ಮತ್ತು ಬಟರ್ ಬಳಕೆಯನ್ನು ಆದಷ್ಟು ಕಮ್ಮಿ ಮಾಡಿ.

ಬೇಕರಿ & ಜಂಕ್ ಫುಡ್ ಬೇಡ: ಚಿಪ್ಸ್, ಬಿಸ್ಕತ್ತು ಮತ್ತು ಇತರೆ ಪ್ಯಾಕೆಟ್ ತಿಂಡಿಗಳಲ್ಲಿ ಸೋಡಿಯಂ ಪ್ರಮಾಣ ವಿಪರೀತವಾಗಿರುತ್ತದೆ. ಹಾಗೆಯೇ ಅಡುಗೆಗೆ ಬಳಸುವ ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಮತ್ತು ಅಜಿನೊಮೊಟೊ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡಿ.

ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲೂ ಗ್ರಾಹಕರಿಗೆ ಜಾಸ್ತಿ ಉಪ್ಪು ಹಾಕಿದ ಅಡುಗೆ ಕೊಡದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಮಾರ್ಕೆಟ್‌ನಲ್ಲಿ ಸಿಗೋ ಪ್ಯಾಕೆಟ್ ಫುಡ್‌ಗಳ ಮೇಲೆ ಎಷ್ಟು ಉಪ್ಪಿದೆ ಎಂದು ಸ್ಪಷ್ಟವಾಗಿ ನಮೂದಿಸುವುದು ಮತ್ತು ಉಪ್ಪಿನ ಕವರ್‌ಗಳ ಮೇಲೆ ಎಚ್ಚರಿಕೆ ಸ್ಟಿಕ್ಕರ್ ಹಾಕಲು ಸರ್ಕಾರ ಸಿದ್ಧತೆ ನಡೆಸಿದೆ.