ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕ್ಯಾಪ್ಟನ್ ಶ್ರೇಯಸ್ ಅಯ್ಯರ್. 20 ಓವರ್ಗಳಲ್ಲಿ ಭಾರತ 6 ವಿಕೆಟ್ಗೆ 211 ರನ್ಗಳ ಬೃಹತ್ ಮೊತ್ತ ಕೊಟ್ಟಿತು. ಓಪನ್ ಬ್ಯಾಟ್ಮ್ಯಾನ್ ಆಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ಗಳೊಂದಿಗೆ 61 ರನ್ ಗಳಿಸಿದರೆ, ಕೊನೆಯಲ್ಲಿ ಆಟವಾಡಿದ ತಿಲಕ್ ವರ್ಮಾ ಕೇವಲ 22 ಎಸೆತಗಳಲ್ಲಿ ಅಜೇಯ 51 ರನ್ ಸಿಡಿಸಿ ಅಬ್ಬರಿಸಿದರು. ಶಿವಂ ದುಬೆ ಕೂಡ 27 ರನ್ಗಳ ಉಪಯುಕ್ತ ಕೊಡುಗೆ ನೀಡಿದರು.
212 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಭಾರತೀಯ ಬೌಲರ್ಗಳು ಆರಂಭದಲ್ಲೇ ಚುರುಕು ಮುಟ್ಟಿಸಿದರು. ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ವಿಕೆಟ್ ಪಡೆದು ಪಾಕ್ ಪಡೆಯನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಆದ್ರೆ ಪಾಕಿಸ್ತಾನದ ಹಸನ್ ನವಾಜ್ ಕೇವಲ 51 ಎಸೆತಗಳಲ್ಲಿ 96 ರನ್ ಸಿಡಿಸಿ ಏಕಾಂಗಿ ಹೋರಾಟ ನಡೆಸಿ ಭಾರತಕ್ಕೆ ಸಣ್ಣ ನಡುಕ ಹುಟ್ಟಿಸಿದ್ದರು.
ಕೊನೆ 2 ಓವರ್ಗಳಲ್ಲಿ ಪಾಕಿಸ್ತಾನಕ್ಕೆ 44 ರನ್ ಬೇಕಿತ್ತು. 19ನೇ ಓವರ್ ಎಸೆದ ಜಸ್ಪ್ರಿತ್ ಬುಮ್ರಾ ಕೇವಲ 10 ರನ್ ನೀಡಿ ಪಂದ್ಯವನ್ನು ಭಾರತದ ಕಡೆಗೆ ತಿರುಗಿಸಿದರು. ಕೊನೆಯ ಓವರ್ನಲ್ಲಿ 32 ರನ್ಗಳ ಅಗತ್ಯವಿದ್ದಾಗ ಬೌಲಿಂಗ್ ಮಾಡಿದ ಶಿವಂ ದುಬೆ, ಕೊನೆ ಎಸೆತದಲ್ಲಿ ಡೇಂಜರಸ್ ಹಸನ್ ನವಾಜ್ ವಿಕೆಟ್ ಕಿತ್ತು ಭಾರತಕ್ಕೆ 19 ರನ್ಗಳ ಗ್ರಾಂಡ್ ವಿಕ್ಟರಿ ಸಿಕ್ತು.



