ಪ್ರಾಥಮಿಕ ತನಿಖೆಯ ಪ್ರಕಾರ, ಪರ್ವೀಜ್ ಅವರ ಮೊಬೈಲ್ ಫೋನ್ನ ಕೊನೆಯ ನೆಟ್ವರ್ಕ್ ಲೊಕೇಷನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿತ್ತು. ಬಳಿಕ ಅವರು ತಮ್ಮ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು, ಕಳೆದ 18 ದಿನಗಳಿಂದ ಯಾವುದೇ ಮೊಬೈಲ್ ಸಂಪರ್ಕಕ್ಕೆ ಸಿಗದೆ ಇರುವುದಾಗಿ ತಿಳಿದುಬಂದಿದೆ.

ಮೊಬೈಲ್ ಸಂಪರ್ಕ ಕಡಿತಗೊಂಡಿದ್ದರೂ ಗದಗ ಪೊಲೀಸರು ಪಟ್ಟುಬಿಡದೆ ತನಿಖೆ ಮುಂದುವರಿಸಿದ್ದಾರೆ. ಸುಮಾರು 1,200 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುವ ಮೂಲಕ ಪರ್ವೀಜ್ ಪ್ರಯಾಣದ ಹಾದಿಯನ್ನು ಪತ್ತೆಹಚ್ಚಲಾಗಿದೆ.
ವಿಜಯವಾಡದಿಂದ ಪ್ರಯಾಣ ಬೆಳೆಸಿರುವ ಪರ್ವೀಜ್ ಭೂಪಾಲ್ ತಲುಪಿರುವುದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ. ಭೂಪಾಲ್ ರೈಲ್ವೇ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವರು ಸಂಚರಿಸುತ್ತಿರುವ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿವೆ.
ಮೊಬೈಲ್ ಫೋನ್ ಆಫ್ ಆಗಿರುವ ಕಾರಣ ನಿಖರ ಸ್ಥಳ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಆದರೂ ಗದಗ ಪೊಲೀಸ್ ತಂಡ ಭೂಪಾಲ್ನಲ್ಲಿ ಬೀಡುಬಿಟ್ಟು, ಸಿಸಿಟಿವಿ ಸೇರಿದಂತೆ ಲಭ್ಯವಿರುವ ವಿವಿಧ ಸುಳಿವುಗಳ ಆಧಾರದ ಮೇಲೆ ಪರ್ವೀಜ್ ಅವರ ಪತ್ತೆ ಕಾರ್ಯ ಮುಂದುವರಿಸಿದೆ.
ಪರ್ವೀಜ್ ಚಲನವಲನಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದು, ಶೀಘ್ರದಲ್ಲೇ ಅವರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವ ನಿರೀಕ್ಷೆಯಿದೆ. ಪ್ರಕರಣದ ತನಿಖೆ ಮುಂದುವರಿದಿದೆ.




