ಸಾಮಾನ್ಯವಾಗಿ ಹಬ್ಬದ ಟೈಮ್‌ನಲ್ಲಿ ಬಸ್ ಸಿಗಲ್ಲ, ಸಿಕ್ಕರೂ ರಶ್ ಜಾಸ್ತಿ ಇರುತ್ತೆ ಅಂತಾನೇ ಕೆಲವರು ಪ್ಲ್ಯಾನ್ ಕ್ಯಾನ್ಸಲ್ ಮಾಡ್ಕೊಳ್ತಾರೆ. ಆದರೆ ಈ ಬಾರಿ ಆ ಚಿಂತೆ ಬಿಟ್ಟುಬಿಡಿ. ಅಕ್ಟೋಬರ್ 15 ರಿಂದ ಅಕ್ಟೋಬರ್ 27 ರವರೆಗೆ ಈ ಸ್ಪೆಷಲ್ ಬಸ್‌ಗಳ ಸೇವೆ ಇರಲಿದೆ. ಅಂದರೆ ದಸರಾ ಶುರುವಾಗೋದ್ರಿಂದ ಹಿಡಿದು ಹಬ್ಬ ಮುಗಿಯುವವರೆಗೂ ಬಸ್‌ಗಳ ಕೊರತೆ ಆಗದಂತೆ ಸಂಸ್ಥೆ ಸೂಕ್ತ ಪ್ಲ್ಯಾನ್ ಮಾಡಿಕೊಂಡಿದೆ.
ಯಾವ್ಯಾವ ಊರಿನಿಂದ ಎಷ್ಟೆಷ್ಟು ಬಸ್‌ಗಳಿವೆ ಗೊತ್ತಾ?
ಬೆಂಗಳೂರು ಹಾಗೂ ಸುತ್ತಮುತ್ತಲ ಜಾಗಗಳಿಂದ ಒಟ್ಟು 300 ಬಸ್‌ಗಳು
ಬೆಂಗಳೂರು ಸೆಂಟ್ರಲ್‌ನಿಂದ 80, ಬೆಂಗಳೂರು ದಕ್ಷಿಣದಿಂದ 55, ತುಮಕೂರಿನಿಂದ 45, ಮಧುಗಿರಿಯಿಂದ 20, ಕೋಲಾರದಿಂದ 50 ಹಾಗೂ ಚಿಕ್ಕಬಳ್ಳಾಪುರದಿಂದ 50 ಬಸ್‌ಗಳು ಹೊರಡಲಿವೆ.
ಮೈಸೂರು ಮತ್ತು ಪಕ್ಕದ ಜಿಲ್ಲೆಗಳಿಂದ ಒಟ್ಟು 400 ಬಸ್‌ಗಳು
ಮೈಸೂರು ಗ್ರಾಮಾಂತರ ಪ್ರದೇಶದಿಂದ 150, ಮೈಸೂರು ನಗರದಿಂದ 60, ಮಂಡ್ಯದಿಂದ 70, ಹಾಸನದಿಂದ 50 ಮತ್ತೆ ಚಾಮರಾಜನಗರದಿಂದ 70 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಹಬ್ಬದ ಸಮಯದಲ್ಲಿ ಜನಜಂಗುಳಿ ಜಾಸ್ತಿ ಇರೋದ್ರಿಂದ ಪ್ರಯಾಣಿಕರಿಗೆ ತೊಂದರೆ ಆಗಬಾರದು ಅಂತ ಈ ನಿರ್ಧಾರ ತಗೊಳ್ಳಲಾಗಿದೆ. ಮೈಸೂರು ಲೈಟಿಂಗ್, ಜಂಬೂಸವಾರಿ ನೋಡಿ ಖುಷಿಪಡೋಕೆ ಕಾಯ್ತಿರೋರಿಗೆ ಇದು ನಿಜಕ್ಕೂ ಖುಷಿಯ ವಿಷಯವಾಗಿದೆ.

