ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ, ಅವರ ಮಾಜಿ ಚಾಲಕ ಕಾರ್ತಿಕ್, ಪ್ರಜ್ವಲ್ ನ ವಿವಾದಾತ್ಮಕ ವಿಡಿಯೋಗಳು ಹರಿದಾಡುವ ಮುನ್ನವೇ ಅಂದರೆ 2023ರ ಆಗಸ್ಟ್ 5 ಮತ್ತು 6ರಂದು ಉಪಮುಖ್ಯಮಂತ್ರಿ ಆಗಿದ್ದ ಡಿ. ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ. ಶಿವಕುಮಾರ್ ಪ್ರಜ್ವಲ್ ಪೆನ್ಡ್ರೈವ್ ನಾನೇ ಹಂಚಿದ್ದು ಅಂತಾ ಆರೋಪಿಸಿದ್ದಾರೆ. ಆದರೆ ಪೆನ್ಡ್ರೈವ್ ಹಂಚಿದ್ದು ನಾನಲ್ಲ, ಪ್ರಜ್ವಲ್ ಕಾರು ಚಾಲಕ. ಈ ವಿಚಾರದಲ್ಲಿ ಪ್ರಜ್ವಲ್ ಕಾರು ಚಾಲಕನನ್ನು ಮನೆಗೆ ಕರೆಸಿಕೊಂಡು ಶಿವಕುಮಾರ್ ಷಡ್ಯಂತ್ರ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ. ಅಲ್ಲದೇ ಅದರ ಕುರಿತ ಕರೆಯ ಮಾಹಿತಿಗಳನ್ನೂ ಅವರು ಬಿಡುಗಡೆ ಮಾಡಿದ್ದಾರೆ. 2023ರ ಆಗಸ್ಟ್ 5 ಮತ್ತು 6ರಂದು ಕಾರ್ತಿಕ್ ಡಿಕೆಶಿ ಮನೆಗೆ ಹೋಗಿದ್ದು, ಆ ಕ್ಯಾಸೆಟ್ ಆಗಿದ್ದು ನಿಮ್ಮ ಮನೆಯಲ್ಲಾ? ಈ ಬಗ್ಗೆ ತನಿಖೆ ಆಗಿದ್ಯಾ ಎಂದು ಸಿಎಂರನ್ನು ಅವರು ಪ್ರಶ್ನಿಸಿದ್ದಾರೆ.ಜೊತೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ರಾಹುಲ್ ಪ್ರಧಾನಿ ಆಗುವುದನ್ನು ತಪ್ಪಿಸದರೆಂದು ನನ್ನ ಕುಟುಂಬವನ್ನು ಕಾಂಗ್ರೆಸ್ ನಾಯಕರು ನಿರ್ನಾಮ ಮಾಡಲು ಮುಂದಾದರು ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಟಿಂಗ್ ಪ್ರಕರಣ ಸಂಬಂಧ ನನ್ನ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಆರೋಪ ಮಾಡಿದ್ದಾರೆ. ಇದರಿಂದ ಈ ವಿಚಾರ ನನಗೆ ತಿರುಗಬಾಣವಾಗುತ್ತೆ ಅಂತಾ ಚರ್ಚೆ ಆಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ಮುಂದುವರೆದು ಮಾತನಾಡಿದ ಕುಮಾರಸ್ವಾಮಿ ದೆಹಲಿಯ ರಿತೇಶ್ ಪಾಂಡೆಯನ್ನು ಅರೆಸ್ಟ್ ಮಾಡಿದ್ದು ಎಲ್ಲಿ? ನನ್ನ ನಿವಾಸದಲ್ಲಿ ಆತನನ್ನು ಅರೆಸ್ಟ್ ಮಾಡಿದ್ದಾರಾ? ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೇಳಿದ್ದಾರೆ. ರಿತೇಶ್ ಪಾಂಡೆ ನನಗೆ ಯಾರು ಅಂತ ಗೊತ್ತಿಲ್ಲ, ಆತನ ಮುಖ ಕೂಡಾ ನೋಡಿಲ್ಲ. ನಮ್ಮ ದೆಹಲಿ ಮನೆಗೆ ಸಾಕಷ್ಟು ಜನ ಕೆಲಸ ಹೇಳಿಕೊಂಡು ಬರುತ್ತಾರೆ. ಇದರಿಂದ ಆ ಬಗ್ಗೆ ತನಿಖೆ ಮಾಡಿ. ನಿಮಗೆ ಯಾರೂ ಬೇಡ ಅಂದಿಲ್ಲ. ಆದರೆ ನಿನ್ನೆ ಕಮಿಷನರ್ ಮಾತನಾಡಿರುವುದು ಕಾನೂನು ಬಾಹಿರ ಎಂದು ಗುಡುಗಿದ್ದಾರೆ. ನಾನು ಕೋರ್ಟ್ಗೆ ಹೋದರೆ ಏನೂ ಆಗುತ್ತದೆ ಎಂದು ಆ ಅಧಿಕಾರಿಗೆ ಗೊತ್ತು. ಆದರೆ ನಾನು ಆ ರೀತಿ ಮಾಡಲ್ಲ. ಯಾಕೆಂದರೆ ಅವರು ಒತ್ತಡಕ್ಕೆ ಮಣಿದು ಹೇಳಿಕೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೃಪಾ ಆಳ್ವಾ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು.?
2011ರಷ್ಟು ಹಳೆಯ ಘಟನೆಯನ್ನು 2023ರಲ್ಲಿ ರೆಕಾರ್ಡ್ ಮಾಡಿದ ನಂತರವಷ್ಟೇ ಮುನ್ನೆಲೆಗೆ ತರಲಾಗಿದೆ ಎಂದು ಅವರು ಕುಮಾರಸ್ವಾಮಿ ಆರೋಪಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾಆಳ್ವಾ ಅವರ ಪಾತ್ರದ ಬಗ್ಗೆಯೂ ಅವರು ಪ್ರಶ್ನಿಸಿದರು. ಸಂಬಂಧಪಟ್ಟ ಮಹಿಳೆ 2015ರಲ್ಲೇ ಕೃಪಾ ಆಳ್ವಾ ಅವರಿಗೆ ಇಮೇಲ್ ಕಳುಹಿಸಿದ್ದರು ಎಂದು ಅವರು ಪ್ರತಿಪಾದಿಸಿದರು. ರೆಕಾರ್ಡಿಂಗ್ ನಡೆಯುವಾಗ ಅಲ್ಲಿ ಉಪಸ್ಥಿತರಿದ್ದ ವ್ಯಕ್ತಿ ಎಂದು ಹೇಳಲಾದ ವೃದ್ಧನ ಗುರುತನ್ನು ಪತ್ತೆಹಚ್ಚಬೇಕು ಮತ್ತು ಆ ಮಹಿಳೆಯನ್ನು ಅಲ್ಲಿಗೆ ಕರೆತಂದವರು ಯಾರು ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.
ಇದೇ ವೇಳೆ 2011ರಷ್ಟು ಹಳೆಯ ಘಟನೆಯನ್ನು 2023ರಲ್ಲಿ ಯಾಕೆ ರೆಕಾರ್ಡ್ ಮಾಡಲಾಯಿತು? ಆ ಮಹಿಳೆಯನ್ನು ಅಲ್ಲಿಗೆ ಕರೆತಂದವರು ಯಾರು? ಕೃಪಾ ಆಳ್ವ ಮತ್ತು ಆ ಮಹಿಳೆಯ ನಡುವೆ ಇರುವ ಸಂಬಂಧವೇನು? ಇದರ ಬಗ್ಗೆಯೂ ತನಿಖೆ ಆಗಬೇಕು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ರೆಕಾರ್ಡಿಂಗ್ನಲ್ಲಿ ಭಾಗಿಯಾದ ಎಲ್ಲರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆಯೇ? ಎಂದು ಅವರು ಪ್ರಶ್ನಿಸಿದರು. ಜೊತೆಗೆ 2023ರಲ್ಲಿ ಸಂಬಂಧಪಟ್ಟ ವ್ಯಕ್ತಿಯ ಗೃಹಪ್ರವೇಶ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಹಲವು ಗಂಟೆಗಳ ಕಾಲ ಏಕೆ ಕಳೆದರು ಎಂಬ ಬಗ್ಗೆಯೂ ಅವರು ಪ್ರಶ್ನೆ ಮಾಡಿದರು.
ತಮ್ಮ ನಿವಾಸದ ಮೇಲೆ ಪೊಲೀಸರು ಶೋಧನೆ ನಡೆಸಲು ವಾರಂಟ್ ಹೊರಡಿಸಬಹುದು ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಮ್ಮ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದರು. ಅಲ್ಲದೇ ಯಾವುದೇ ತನಿಖೆಯನ್ನು ಎದುರಿಸಲು ತಾವು ಸಿದ್ಧ ಎಂದು ತಿಳಿಸಿದರು. ನಾನು ಗುಪ್ತವಾಗಿ ಏನನ್ನೂ ಮಾಡುವ ಅಗತ್ಯವಿಲ್ಲ. ಅವರು ಬರಲಿ, ನನ್ನ ಮನೆ ಯಾವಾಗಲೂ ತೆರೆದಿರುತ್ತದೆ ಎಂದು ಅವರು ಹೇಳಿದರು. ಈ ವಿವಾದವು ಸಿಡಿ ಮತ್ತು ಸ್ಟಿಂಗ್ ಆಪರೇಷನ್ ಮೂಲಕ ನಡೆಸಲಾಗುವ ರಾಜಕೀಯ ಬ್ಲ್ಯಾಕ್ಮೇಲ್ ಎಂಬ ದೊಡ್ಡ ಷಡ್ಯಂತ್ರದ ಭಾಗವಾಗಿದೆ ಎಂದು ಆರೋಪಿಸಿದರು. ಅಲ್ಲದೆ ತಮ್ಮ ಹಿಂದಿನ ಹೇಳಿಕೆಗಳು ಮತ್ತು ನಡವಳಿಕೆಗಳ ಬಗ್ಗೆ ಉತ್ತರಿಸುವಂತೆ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಸವಾಲು ಹಾಕಿದರು


