ಈ ಅರ್ಜಿ ವಿಚಾರ ಹಾಗೂ ವಿಚಾರಣಾಧೀನ ನ್ಯಾಯಾಲಯದ ಕಲಾಪಗಳ ವಿಡಿಯೋ ತುಣುಕುಗಳು ಅನಧಿಕೃತವಾಗಿ ವೈರಲ್ ಆಗುತ್ತಿರುವುದನ್ನು ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ ಸಂಸ್ಥೆಗಳಿಗೆ ಕೋರ್ಟ್ ಅಧಿಕೃತ ನೋಟಿಸ್ ಜಾರಿಗೊಳಿಸಿದೆ. ಇನ್ನು ಕೋರ್ಟ್‌ನಲ್ಲಿ ಪ್ರದೋಷ್ ಅವರ ನಾಲ್ಕು ದಿನಗಳ ಸುದೀರ್ಘ ಗೌಪ್ಯ ಹೇಳಿಕೆ ಹಾಗೂ ಸಾಕ್ಷ್ಯ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪ್ರಸ್ತುತ ಸಾಕ್ಷ್ಯಾಧಾರಗಳ ಮಾರ್ಕಿಂಗ್ ಕೆಲಸ ನಡೆಯುತ್ತಿದೆ.
ಇನ್ನೊಂದೆಡೆ ಅಕ್ಟೋಬರ್ 6 ರಂದು ದರ್ಶನ್‌ಗೆ ಸೆಷನ್ಸ್ ಕೋರ್ಟ್‌ನಲ್ಲಿ ಮತ್ತೆ ಹಿನ್ನೆಡೆಯಾಗಿದೆ. ಮೊದಲ ದಿನ ವಿಷಯ ಮರೆತುಹೋಗಿತ್ತು ಎಂದು ಹೇಳಿ, ಎರಡನೇ ದಿನ ಹೆಚ್ಚುವರಿ ಸಂಗತಿಗಳನ್ನು ಸೇರಿಸಿ ಪ್ರದೋಷ್ ನೀಡಿದ್ದ ಹೇಳಿಕೆಯನ್ನು ವಜಾಗೊಳಿಸುವಂತೆ ದರ್ಶನ್ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, "ಈ ಆಕ್ಷೇಪಗಳನ್ನು ಮುಂದಿನ ವಿಚಾರಣೆ ಅಥವಾ ವಾದ-ಪ್ರತಿವಾದದ ಹಂತದಲ್ಲಿ ನೋಡೋಣ" ಎಂದು ಹೇಳಿದ ನ್ಯಾಯಾಧೀಶರು ದರ್ಶನ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ತಿರಸ್ಕರಿಸಿದರು.
ಮಾಫಿ ಸಾಕ್ಷಿಯ ಹೆಚ್ಚುವರಿ ಹೇಳಿಕೆಯನ್ನು ರದ್ದುಗೊಳಿಸಲು ಕೋರ್ಟ್ ನಿರಾಕರಿಸಿರುವುದು ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.



