ಸಿನಿಮಾದ ಬಿಡುಗಡೆಯ ದಿನದಂದೇ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗಣ್ಯರು ಹಾಗೂ ರಾಜಕೀಯ ನಾಯಕರಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲು ಯೋಜನೆ ರೂಪಿಸಲಾಗಿದ್ದು, ಸದ್ಯಕ್ಕೆ ಅಧಿಕೃತ ಅನುಮೋದನೆಗಾಗಿ ಪ್ರಯತ್ನಗಳು ನಡೆದಿವೆ. ಇದರ ಜೊತೆಗೆ ಚಿತ್ರತಂಡ ಜಟಾಯು ಪಾತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ಧರ್ಮಕ್ಕಾಗಿ ಹೋರಾಡುವ ಈ ಧೈರ್ಯಶಾಲಿ ಪಾತ್ರಕ್ಕೆ ಹಿರಿಯ ನಟ ಅನುಪಮ್ ಖೇರ್ ಧ್ವನಿ ನೀಡಲಿದ್ದಾರೆ ಎಂದು ಖಚಿತಪಡಿಸಲಾಗಿದೆ.
ಮತ್ತೊಂದೆಡೆ, ಚಿತ್ರದಲ್ಲಿ ಯಶ್ ಅವರ ರಾವಣನ ಲುಕ್ ಕುರಿತು ನಟ ಆರ್ಯ ಬಬ್ಬರ್ ಮಾತನಾಡಿದ್ದು, ಕೆಜಿಎಫ್ ಸಿನಿಮಾದಲ್ಲಿ ಇದ್ದ ಅದೇ ಗಡ್ಡದ ಗೆಟಪ್ ಇಲ್ಲೂ ಪುನರಾವರ್ತನೆಯಾಗಿದೆ ಎಂದು ಅಭಿಪ್ರಾಯಪಟ್ಟು ಸೈಫ್ ಅಲಿ ಖಾನ್ ಅವರ ನಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಚರ್ಚೆಗಳ ನಡುವೆಯೂ 3D, ಐಮ್ಯಾಕ್ಸ್ ಹಾಗೂ ಪ್ರೀಮಿಯಂ ಪರದೆಗಳಲ್ಲಿ ಬಿಡುಗಡೆಯಾಗಲಿರುವ ಈ ಬ್ರಹ್ಮಾಂಡದ ಕಥೆಯು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.


