ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಅನಿರುದ್ಧ್ ರವಿಚಂದರ್ ಅವರ ಸಂಗೀತದೊಂದಿಗೆ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಪೈರಸಿ ತಡೆಯಲು ಮದ್ರಾಸ್ ಹೈಕೋರ್ಟ್‌ನಿಂದ ವಿಶೇಷ ತಡೆಯಾಜ್ಞೆಯನ್ನೂ ತಂದಿದೆ. ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಮತ್ತು IMAX ಸ್ಕ್ರೀನ್‌ಗಳಲ್ಲಿ ಸಿನಿಮಾ ಮೂಡಿಬರುತ್ತಿದೆ. ರಜನಿ ಜೊತೆಗೆ ಶಿವರಾಜ್‌ಕುಮಾರ್ ಹಾಗೂ ಮೋಹನ್ ಲಾಲ್ ನಟನೆಯ ಕ್ರೇಜ್ ಇರುವುದರಿಂದ ಕರ್ನಾಟಕ ಹಾಗೂ ಕೇರಳದಲ್ಲಿ ಮುಂಜಾನೆ 6 ಗಂಟೆಯಿಂದಲೇ ಸ್ಪೆಷಲ್ ಫ್ಯಾನ್ ಶೋಗಳು ಆರಂಭವಾಗಲಿವೆ.
ಆದರೆ ಬೆಂಗಳೂರಿನಲ್ಲಿ ಟಿಕೆಟ್ ದರಗಳು ಗಗನಕ್ಕೇರಿರುವುದು ಪ್ರೇಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ 295 ರಿಂದ 350 ರಷ್ಟಿದ್ದ ಟಿಕೆಟ್ ಬೆಲೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಸರಾಸರಿ 500 ರಿಂದ 1,000 ವರೆಗೆ ಇದೆ. ಇನ್ನು ಮುಂಜಾನೆ ಶೋಗಳು ಹಾಗೂ ಐಷಾರಾಮಿ ಲೌಂಜ್ ಸೀಟುಗಳ ದರಗಳು ಕೆಲವು ಕಡೆ 1,600 ರಿಂದ 2,000+ ವರೆಗೆ ತಲುಪಿವೆ. ಚೆನ್ನೈನಂತಹ ಇತರೆ ನಗರಗಳ ಆರಂಭಿಕ ದರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ದರಗಳು ಬರೋಬ್ಬರಿ 15 ಪಟ್ಟು ಹೆಚ್ಚಿರುವುದು ವಿಶೇಷ. ಏನೇ ಇರಲಿ, ಥಿಯೇಟರ್‌ಗಳ ಮುಂದೆ ಸೂಪರ್‌ಸ್ಟಾರ್ ಅಭಿಮಾನಿಗಳ ಹಬ್ಬದ ಸಂಭ್ರಮ ಜೋರಾಗಿದೆ.


