ಒಟ್ಟು 209 ಎಸೆತಗಳನ್ನು ಎದುರಿಸಿದ ರವೀಂದ್ರ ಜಡೇಜಾ, 7 ಬೌಂಡರಿಗಳ ಸಹಾಯದಿಂದ ಒಟ್ಟು 102 ರನ್ ಕಲೆಹಾಕಿದರು. ಇದು ಅವರ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದ 16ನೇ ಶತಕವಾಗಿದೆ. ಕಷ್ಟದ ಸಮಯದಲ್ಲಿ ಕ್ರೀಸ್‌ಗೆ ಬಂದ ಅವರು ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿಕೊಟ್ಟರು. ಆದರೆ ಶತಕದ ಸಂಭ್ರಮದಲ್ಲಿದ್ದ ಜಡೇಜಾ, ಎದುರಾಳಿ ಛತ್ತೀಸ್‌ಗಢ ತಂಡದ ಎಡಗೈ ಸ್ಪಿನ್ನರ್ ಧರ್ಮೇಂದ್ರಸಿನ್ಹ ಜಡೇಜಾ ಬೌಲಿಂಗ್‌ನಲ್ಲಿ 'ಕಾಟ್ ಅಂಡ್ ಬೌಲ್ಡ್' ಆದರು.
ಇಲ್ಲಿ ವಿಶೇಷ ಏನೆಂದರೆ ಧರ್ಮೇಂದ್ರಸಿನ್ಹ ಜಡೇಜಾ ಹಿಂದೆ ಸೌರಾಷ್ಟ್ರ ತಂಡದಲ್ಲೇ ರವೀಂದ್ರ ಜಡೇಜಾ ಜೊತೆ ಸಾಕಷ್ಟು ಕ್ರಿಕೆಟ್ ಆಡಿದ್ದರು. ಆದರೆ ಇತ್ತೀಚೆಗಷ್ಟೇ ಅವರು ತಂಡ ಬದಲಾಯಿಸಿ ಛತ್ತೀಸ್‌ಗಢ ಸೇರಿಕೊಂಡಿದ್ದರು. ಈಗ ಅದೇ ಹಳೇ ದೋಸ್ತನ ಬೌಲಿಂಗ್‌ನಲ್ಲಿ ಜಡ್ಡು ವಿಕೆಟ್ ಒಪ್ಪಿಸಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಒಟ್ಟಿನಲ್ಲಿ ಜಡೇಜಾ ಅವರ ಈ ಕಮ್‌ಬ್ಯಾಕ್ ಶತಕ ಮತ್ತು ಹಳೇ ಸ್ನೇಹಿತನ ಕೈಯಲ್ಲೇ ಔಟ್ ಆಗಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದೆ.

