ನಾನು ನಮ್ಮ ಸಿಂಹಿಣಿಯನ್ನು ನಿಮಗೆ ಪರಿಚಯಿಸಲು ಬಯಸುತ್ತೇನೆ. ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿತ್ತು. ಆದರೆ ಆಕೆ ಹೆದರದೇ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು ಎಂದರು. ಶಾಂತಿಯುತ ಪ್ರತಿಭಟನೆಯ ಸಂದರ್ಭದಲ್ಲಿ ಎನ್ಎಸ್ಯುಐ ಕಾರ್ಯಕರ್ತರನ್ನು ಬಸ್ಗಳಲ್ಲಿ ವಶಕ್ಕೆ ಪಡೆದ ನಂತರ, ಚಂಚಲ್ ಯಾದವ್ ಎಂದು ಗುರುತಿಸಲಾದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಈ ವೇಳೆ ಯುವತಿ ತಿಳಿಸಿದರು. ಮೂರು ಬಸ್ಗಳ ಪೈಕಿ ಪ್ರತಿಯೊಂದರಲ್ಲೂ ಸುಮಾರು 30-40 ಪ್ರತಿಭಟನಾಕಾರರಿದ್ದರು ಮತ್ತು ತಾವು ಪ್ರಯಾಣಿಸುತ್ತಿದ್ದ ಬಸ್ನಲ್ಲಿ ಇಬ್ಬರು ಮಹಿಳೆಯರು ಹಾಗೂ 20-30 ಮಂದಿ ಇತರ ಎನ್ಎಸ್ಯುಐ ಸದಸ್ಯರಿದ್ದರು ಎಂದು ಅವರು ಮಾಹಿತಿ ನೀಡಿದರು.
ಹಲ್ಲೆಗೊಳಗಾದ ಯುವತಿ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಚ್ಚರು. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವು. ಆಗ ನಮ್ಮನ್ನು ಮೂರು ಬಸ್ಗಳಲ್ಲಿ ವಶಕ್ಕೆ ಪಡೆಯಲಾಯಿತು. ಪ್ರತಿ ಬಸ್ನಲ್ಲೂ ನಮ್ಮ ಸುಮಾರು 30 ರಿಂದ 40 ಮಂದಿ ಸಹೋದ್ಯೋಗಿಗಳಿದ್ದರು. ನಮ್ಮ ಬಸ್ನಲ್ಲಿ ಇಬ್ಬರು ಯುವತಿಯರು ಹಾಗೂ 20 ರಿಂದ 30 ಮಂದಿ ಇತರ ಎನ್ ಎಸ್ ಯು ಐ ಸಹೋದ್ಯೋಗಿಗಳಿದ್ದರು. ಆ ಬಸ್ನಲ್ಲಿ ಚಂಚಲ್ ಯಾದವ್ ಎಂಬ ಮಹಿಳಾ ಕಾನ್ಸ್ಟೇಬಲ್ ನಮ್ಮ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದರು ಎಂದು ಯುವತಿ ಆರೋಪಿಸಿದರು.
ದೆಹಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳದ ವಿದ್ಯಾರ್ಥಿನಿ ಅತಿರಾ ಬಗ್ಗೆಯೂ ರಾಹುಲ್ ಗಾಂಧಿ ಮಾತನಾಡಿುದರು. ಪೊಲೀಸ್ ಕ್ರಮದ ವೇಳೆ ತಮ್ಮ ಕಿವಿ ಮತ್ತು ಕಣ್ಣಿಗೆ ಗಾಯಗಳಾಗಿವೆ. ಅವರು ತಮ್ಮ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾರೆ. ಕಳೆದ ಬಾರಿ ನಾನು ನಿಮಗೆ ದೃಷ್ಟಿ ಕಳೆದುಕೊಂಡಿದ್ದ ಬಾಲಕನೊಬ್ಬನನ್ನು ತೋರಿಸಿದ್ದೆ ಎಂದು ಹೇಳಿದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವಾಗ ಬಸ್ನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಇರಲಿಲ್ಲ ಎಂದು ಆರೋಪಿಸಿದ ಅತಿರಾ, ವಶಕ್ಕೆ ಪಡೆಯುವ ಪ್ರಕ್ರಿಯೆಯ ಸಮಯದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಹಾಜರಿರುವಂತೆ ತಾವು ಕೋರಿದ್ದಾಗಿ ತಿಳಿಸಿದರು.
ಪ್ರತಿಭಟನಾಕಾರರ ವಿರುದ್ಧ ಕೇಂದ್ರ ಸರ್ಕಾರ ದ್ವೇಷ ಕಾರುತ್ತಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಪ್ರೀತಿಯಿಂದಲೇ ಉತ್ತರ ನೀಡಲಿದೆ ಎಂದು ರಾಹುಲ್ ಹೇಳಿದರು. ಯಾವುದೇ ಕಾರಣಕ್ಕೂ ಪ್ರತಿಭಟನೆಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ರಾಹಲ್ ಗಾಂಧಿ, ಚುನಾವಣಾ ಆಯೋಗವನ್ನು ಸ್ವಚ್ಚಗೊಳಿಸಲು ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಅಲ್ಲದೇ ಪೊಲೀಸ್ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವುದಾಗಿ ಇದೇ ಸಂದರ್ಭದಲ್ಲಿ ಅವರು ಘೋಷಣೆ ಮಾಡಿದರು.


