AIMIM ಮುಖಂಡ ಅಸದುದ್ದೀನ್ ಓವೈಸಿ ಮತ್ತೊಮ್ಮೆ ಗುಡಿಗಿದ್ದಾರೆ. ನಮಗೆ ಇನ್ನು ಮುಂದೆ ಯಾವ ಗಾಂಧಿ ಅಥವಾ ನೆಹರೂ ಅವರ ಅಗತ್ಯವಿಲ್ಲ,ನಮಗೆ ನಮ್ಮದೇ ಆದ ನಾಯಕರು ಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.  

ಉತ್ತರ ಪ್ರದೇಶದಲ್ಲಿ ಮಾತನಾಡಿದ ಓವೈಸಿ ನಮ್ಮ ಸಂಕಷ್ಟಗಳ ಬಗ್ಗೆ ಯಾರೂ ಮಾತನಾಡಲ್ಲ.ಆದರೂ ಇವತ್ತು ಪೊಲೀಸರು ಯಾರನ್ನಾದರೂ ವಶಕ್ಕೆ ಪಡೆದು, ಒಂದು ವರ್ಷದವರೆಗೆ ಪ್ರತಿಭಟನೆ ನಡೆಸದಂತೆ ಆದೇಶಿಸುತ್ತಾರೆ. ಓ ಮುಸ್ಲಿಮರೇ, ಅವರನ್ನು ಬೆಂಬಲಿಸಿ ಅವರ ನಡುವಿನಿಂದಲೇ ನೆಹರೂ ಮತ್ತು ಗಾಂಧಿಯಂತಹವರು ಉದಯಿಸುತ್ತಾರೆ ಎಂದು ಹೇಳುವುದನ್ನು ನಾನು ನೋಡಿದ್ದೇನೆ. ಅವರಿಗೂ ಮತ್ತು ಓವೈಸಿಗೂ ಇರುವ ವ್ಯತ್ಯಾಸವಿದು ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಓವೈಸಿ ನಾನು ನೀವೇ ನಾಯಕರಾಗಿ ಎನ್ನುತ್ತೇನೆ ಎಂದಿರುವ ಅವರು ನಾವು ಯಾರಿಗೂ ಗುಲಾಮರಲ್ಲ ಎಂದು ಖಾರವಾಗಿ ಹೇಳಿದ್ದಾರೆ. ಯಾರಾದರೂ ತಮ್ಮನ್ನು ತಾವು ಮುಂದಿನ ನೆಹರೂ ಅಥವಾ ಗಾಂಧಿ ಎಂದು ಕರೆದುಕೊಂಡ ಮಾತ್ರಕ್ಕೆ ನಾವು ಅವರ ಹಿಂದೆ ಓಡುವುದಿಲ್ಲ. ನಮಗೆ ಇನ್ನು ಮುಂದೆ ಗಾಂಧಿ ಅಥವಾ ನೆಹರೂ ಅವರ ಅಗತ್ಯವಿಲ್ಲ ನಮಗೆ ನಮ್ಮದೇ ಆದ ನಾಯಕರು ಬೇಕು ಎಂದು ಅವರು ಖಡಕ್ ಆಗಿ ಹೇಳಿದರು. ಮತದಾರರಿಗೆ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದವರಿಗೆ ಸಾಂಪ್ರದಾಯಿಕ ನಾಯಕರ ಮುಂದೆ ತಲೆಬಾಗುವುದನ್ನು ನಿಲ್ಲಿಸಿ, ಸ್ವತಂತ್ರ ಮತ್ತು ಸ್ವಯಂ-ನಿರ್ಧಾರಿತ ನಾಯಕತ್ವವನ್ನು ರೂಪಿಸಿಕೊಳ್ಳುವಂತೆ ಅವರು ಕರೆ ನೀಡಿದರು

ಹಿಂದಿನ ಸಾಂಪ್ರದಾಯಿಕ ನಾಯಕರ ಮೇಲಿನ ಅವಲಂಬನೆ ತ್ಯಜಿಸುವ ಕುರಿತು ಮಾತನಾಡಿದ ಓವೈಸಿ ನಮ್ಮ ಸಮುದಾಯವು ಸಾಂಪ್ರದಾಯಿಕ ರಾಷ್ಟ್ರೀಯ ನಾಯಕರ ಮೇಲೆ ಅವಲಂಬಿತವಾಗುವ ಬದಲು ತನ್ನದೇ ಆದ ನಾಯಕತ್ವವನ್ನು ರೂಪಿಸಿಕೊಳ್ಳಬೇಕೆಂದು ಒತ್ತಿ ಹೇಳಿದರು. ಓವೈಸಿ ಅವರ ಈ ಹೇಳಿಕೆ ತೀರಾ ಅಚ್ಚರಿಗೆ ಕಾರಣವಾಗಿದೆ.