ಮುಖಪುಟಕ್ಕೆ ಹಿಂದಿರುಗಿ

ಪಾಡ್ಕಾಸ್ಟ್•19.56 ನಿಮಿಷಗಳು
ಪಾಡ್ ಕಾಸ್ಟ್ 1 |ಡಿಲಿಮಿಟೇಷನ್; ಒಕ್ಕೂಟ ವ್ಯವಸ್ಥೆಯಲ್ಲಿ ಒಡಕು ತರುವುದೇ? ಭಿನ್ನ ಸಾಧ್ಯತೆಗಳಿವೆಯೇ?
ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ತೀವ್ರ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಈ ಅವಸರದ ನಡೆ ದೇಶವನ್ನು ಉತ್ತರ ಮತ್ತು ದಕ್ಷಿಣ ಎರಡು ಭಾಗ ಮಾಡುತ್ತವೆ ಎಂಬ ಚರ್ಚೆ ಹುಟ್ಟುಹಾಕಿದೆ. ಒಂದೆಡೆ ರಾಜಕೀಯ ಪ್ರಾಬಲ್ಯವನ್ನು ಉತ್ತರದ ರಾಜ್ಯಗಳಿಗೆ ಒದಗಿಸುವ ಆತಂಕವಿದ್ದರೆ, ಇನ್ನೊಂದೆಡೆ ಆರ್ಥಿಕತೆ ಅಪಾರ ಕೊಡುಗೆ ನೀಡುತ್ತಿರುವ ದಕ್ಷಿಣದ ರಾಜ್ಯಗಳು ಉತ್ತರ ರಾಜ್ಯಗಳ ದಾಕ್ಷಿಣ್ಯದಲ್ಲಿ ಆಡಳಿತ ನಡೆಸಬೇಕಾಗುತ್ತದೆ ಎಂಬ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ ದಕ್ಷಿಣದ ರಾಜ್ಯಗಳು ಈ ಪುನರ್ವಿಂಗಡಣೆಯನ್ನು ತೀವ್ರವಾಗಿ ಪ್ರಶ್ನಿಸುತ್ತಿವೆ.