ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಕುಮಾರಸ್ವಾಮಿ ನೈಸ್ ಒಪ್ಪಂದ ಹಾಗೂ ಗುತ್ತಿಗೆದಾರರು ಮಾಡಿದ್ದೇನು ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ ಎಂದ ಕುಮಾರಸ್ವಾಮಿ ಯೋಜನೆ ಹೆಸರಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈತರ ಬದುಕಿನ ಜೊತೆ ಚೆಲ್ಲಾಟ ನಡೆಸುತ್ತಿದ್ದಾರೆ. ಗುಲಾಮಗಿರಿ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡ್ತಿರೋದು ಎನ್ನುವ ಭಾವನೆ ಇದ್ದು, ಇದೆಲ್ಲವನ್ನ ದಾಖಲೆ ಸಮೇತ ಹೇಳುವೆ ಎಂದು ಕುಮಾರಸ್ವಾಮಿ ಹೇಳಿದರು.
ನೈಸ್ ಯೋಜನೆಯನ್ನು ದೇವೇಗೌಡರ ಕೂಸು, ಕುಮಾರಸ್ವಾಮಿ ಕೂಸು ಅಂತ ಶಿವಕುಮಾರ್ ಹೇಳುತ್ತಾರೆ. ಆದರೆ ಇದು 2 ಜಿ ಸ್ಕ್ಯಾಮ್, ಕೋಲ್ ಸ್ಕ್ಯಾಮ್ ಗಿಂತಲೂ ದೊಡ್ಡದಾಗಿದೆ ಎಂದರು. ನ್ಯಾಯಾಲಯ ಗಮನಿಸಿರುವ ವಿಚಾರದಲ್ಲಿಯೂ. ಇವರು ತಪ್ಪು ಹೆಜ್ಜೆ ಇಡ್ತಿದ್ದಾರೆ. ನಾನು ವಿಧಾನಸೌಧದ ಮೆಟ್ಟಿಲ ಮೇಲೆ ಚರ್ಚೆಗೂ ನಾನು ಸಿದ್ದ. ಶಿವಕುಮಾರ್ ಸಿದ್ಧರಿದ್ದಾರಾ ಎಂದು ಮತ್ತೊಮ್ಮೆ ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಆಹ್ವಾನ ನೀಡಿದರು
ಇನ್ನು ನೈಸ್ ಯೋಜನೆಗೆ MOU ಆಗಿದ್ದು, ಸಹಿ ಹಾಕಿದ್ದು ದೇವೇಗೌಡರು ಅಂತ ಶಿವಕುಮಾರ್ ಹೇಳುತ್ತಲೇ ಇರುತ್ತಾರೆ. 8-11-1995 ರಲ್ಲಿ ಮೆಮೋರಂಡಮ್ ಮಾಡಿರೋದು. ಆಗ VHV ಎನ್ನುವ ಅಮೆರಿಕ ಕಂಪನಿ, ಕಲ್ಯಾಣಿ ಹಾಗೂ SAB ಕಂಪನಿ ಜೊತೆ ಎಂಓಯು ಆಗಿತ್ತು ಎಂದು ಕುಮಾರಸ್ವಾಮಿ ಬಿಡಿಸಿ ಹೇಳಿದರು. FWA ಅಗ್ರಿಮೆಂಟ್ 3 ಏಪ್ರಿಲ್ 1997ರಂದು ಆಗುತ್ತೆ. ಎಲ್ಲಿಯೂ ಕೂಡಾ ಕೃಷಿಗೆ ಉತ್ತಮವಾದ ಭೂಮಿಯನ್ನ ಯೋಜನೆಗೆ ಗುರುತಿಸಿಲ್ಲ. ಒಣ ಭೂಮಿ ತೆಗೆದುಕೊಳ್ಳಲು ತೀರ್ಮಾನ ಆಗಿರುತ್ತೆ. ಕೆರೆ ಜಾಗ ಕೂಡ ಬಳಸಬಾರದು ಅಂತ ಉಲ್ಲೇಖ ಆಗಿತ್ತು ಎಂದು ಕುಮಾರಸ್ವಾಮಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ರು.
-ಗಿರಾಕಿ ಎಂದಿದ್ದು ಯಾರಿಗೆ.?
ಇದೇ ವೇಳೆ 1999ರಲ್ಲಿ ಈ ಗಿರಾಕಿ ಗುತ್ತಿಗೆದಾರ ಒಂದು ಲೆಟರ್ ಬರೆಯುತ್ತಾನೆ. ಹೈಕೋರ್ಟ್ ಸುಪ್ರೀಂಕೋರ್ಟ್ನಲ್ಲಿ ಪ್ರೇಮ್ವರ್ಕ್ ಅಗ್ರಿಮೆಂಟ್ಗೆ ಒಪ್ಪಿರುತ್ತಾರೆ. ಆದರೆ ಮತ್ತೆ ಬದಲಾವಣೆ ಮಾಡಬೇಕೆಂದು ಪತ್ರ ಬರೆಯುತ್ತಾನೆ. ನಂದಿ ಎಕಾನಾಮಿಕ್ ಕಾರಿಡಾರ್ ಎಂದು ಮತ್ತೊಂದನ್ನ ತರ್ತಾರೆ. ಇದರೊಂದಿಗೆ ಅಗಸ್ಟ್ 2002ರಲ್ಲಿ ಅಗ್ರಿಮೆಂಟ್ ಮಾಡ್ತಾರೆ ಎಂದು ಕುಮಾರಸ್ವಾಮಿ ಹೇಳಿದರು
-ಸಮಿತಿ ರಚನೆ ಮಾಡಿದ್ದ ಡಿ.ಕೆ.ಶಿವಕುಮಾರ್
ಮತ್ತೊಂದು ಆ ವೇಳೆ ನಗರಾಭಿವೃದ್ಧಿ ಸಚಿವವರಾಗಿದ್ದ ಡಿ.ಕೆ ಶಿವಕುಮಾರ್ ಕಡೆ ಮೇ 21, 2023ರಲ್ಲಿ ಒಂದು ಸಮಿತಿ ರಚನೆ ಮಾಡಿಕೊಳ್ತಾರೆ. ಆ ಸಮಿತಿಗೆ ಡಿ.ಕೆ. ಶಿವಕುಮಾರ್ ಅವರೇ ಅಧ್ಯಕ್ಷರಾಗಿರುತ್ತಾರೆ, ಎಂದು ಹೇಳಿದರು. ಅಲ್ಲದೇ ಇದರಲ್ಲಿ ಹನುಮಂತರಾಯಪ್ಪನ ಸೇರಿಸ್ಕೊಂಡಿರುತ್ತಾರೆ. ಅವರು ಯಾರು ಎಂದರೆ ಈಗ ರಾಜರಾಜೇಶ್ವರಿ ನಗರದಲ್ಲಿ ಯಾರನ್ನೋ ಎಂಎಲ್ಎ ಮಾಡ್ಬೇಕು ಅಂತ ಏನೋ ನಡೆಸುತ್ತಿದ್ದಾರಲ್ಲ ಅವರ ಅಪ್ಪ ಹನುಮಂತರಾಯ ಎಂದು ಕುಸುಮಾ ಅವರ ಹೆಸರೇಳದೇ ಕುಟುಕಿದರು. ಇದೇ ಕೇಣಿ ಹಾಗೂ ಶಿವಕುಮಾರ್ ಅವರಿಬ್ಬರನ್ನೂ ಹಕ್ಕ-ಬುಕ್ಕರು ಎಂದ ಕುಮಾರಸ್ವಾಮಿ ಯೋಜನೆ ಹೆಸರಲ್ಲಿ ಅಕ್ರಮವೆಸಗಿದ್ದು ಟೌನ್ ಶಿಪ್ ಜಾಗ ಕಡಿಮೆ ಮಾಡಿ ಟೋಲ್ ರೋಡ್ ಜಾಗ ಹೆಚ್ಚು ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
-ಜೆ.ಹೆ.ಪಟೇಲ್- ದೇವೇಗೌಡರಿಂದ ತಪ್ಪಾಗಿಲ್ಲ
ಇಲ್ಲಿ ಹೇಳ್ಬೇಕು ಎಂದರೆ ಜೆ.ಹೆಚ್ ಪಟೇಲ್ ಅವರಿಂದಾಗಲಿ ಇಲ್ಲ ದೇವೇಗೌಡರಿಂದಾಗಲಿ ಯಾವುದೇ ತಪ್ಪು ನಡೆದಿಲ್ಲ. ಅವರಿಬ್ಬರಿಗೂ ಇಲ್ಲೊಂದು ಉತ್ತಮ ಯೋಜನೆ ಬೇಕಾಗಿತ್ತು ಅಷ್ಟೇ.. ಪ್ರೇಮ್ವರ್ಕ್ಅಗ್ರಿಮೆಂಟ್ ಅಂತಿಮ ಎಂದು 1998ರಲ್ಲಿ ಸುಪ್ರೀಂಕೋರ್ಟ್ ಸಹ ಹೇಳಿದೆ. ಆದರೆ ಬಳಿಕ ತ್ರೀ ಪಾರ್ಟಿ ಅಗ್ರಿಮೆಂಟ್ನ 2002ರಲ್ಲಿ ಮಾಡ್ತಾರೆ. ನೈಸ್, ನೇಸ್ ಹಾಗೂ ರಾಜ್ಯ ಸರ್ಕಾರದ ನಡುವೆ ತ್ರಿಪಾರ್ಟಿ ಅಗ್ರಿಮೆಂಟ್ ಅಗಿದ್ದು ಇದು ಆಕ್ಸ್ಫರ್ಡ್ ಯುನಿವರ್ಸಿಟಿ ಅವರು ಮಾಡಿರೋದು. ಅದಕ್ಕೆ ನಾನು ಹೇಳಿದ್ದು ಡಿಕೆ-ಎಕೆ ಎಂದು ಹೇಳಿದರು. ಆಗ ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಆಗಿದ್ರು. 2004ರಲ್ಲಿ ಪ್ರೇಮ್ ವರ್ಕ್ ಅಗ್ರಿಮೆಂಟ್ ಬದಲಾವಣೆ ಮಾಡಿ ಅಕ್ರಮ ಮಾಡಿದ್ರು ಎಂದು ಕುಮಾರಸ್ವಾಮಿ ಆರೋಪ ಮಾಡಿದ್ರು.


