ಇದಕ್ಕೂ ಮೊದಲು ಗವಿಮಠದ ಸ್ವಾಮೀಜಿ ಹಾಗೂ ಪತ್ನಿಯೊಂದಿಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಮಂಗಳವಾದ್ಯಗಳ ನಾದದ ನಡುವೆ ವಿವಿಧ ಜನಪದ ಕಲಾತಂಡಗಳು ಅವರಿಗೆ ವಿಶೇಷ ಸ್ವಾಗತ ಕೋರಿದವು. ಇದೇ ವೇಳೆ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹಾಗೂ ಸಿಎಂ ಡಿ ಕೆ ಶಿವಕುಮಾರ್ ಮೆಟ್ಟಿಲುಗಳಲ್ಲಿ ನಮಸ್ಕಾರ ಮಾಡಿದರು.
ನೇರಳೆ ಬಣ್ಣದ ಸೀರೆಯಿಂದ ಅಲಂಕರಿಸಲಾಗಿದ್ದ ದೇವಿಯ ವಿಗ್ರಹವನ್ನು ಚಾಮುಂಡಿ ಬೆಟ್ಟದ ದೇವಸ್ಥಾನದ ಪಕ್ಕದಲ್ಲಿರುವ ಬೆಳ್ಳಿಯ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಈ ವಿಶೇಷ ಏನಂದರೆ ವಿವಿಧ ಮಠಗಳ ಸುಮಾರು 200 ಮಠಾಧೀಶರು ಹಾಗೂ ಸಿಖ್ ಮತ್ತು ಟಿಬೆಟಿಯನ್ ಧಾರ್ಮಿಕ ಮುಖಂಡರು ಸೇರಿದಂತೆ ವಿವಿಧ ಧರ್ಮಗಳ ಮುಖ್ಯಸ್ಥರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇವರಿಗಾಗಿ ವಿಶೇಷ ಎತ್ತರದ ವೇದಿಕೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಡಿನಲ್ಲಿ ಬರಗಾಲ ಹೋಗಿ ಮಳೆ ಬೆಳೆ ಆಗಿ ಸುಭಿಕ್ಷದಿಂದ ಎಲ್ಲರು ಇರುವಂತೆ ಮಾಡು ತಾಯಿ ಎಂದು ದೇವರಲ್ಲಿ ಬೇಡಿಕೊಂಡರು
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ, ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಸಚಿವ ರಿಜ್ವಾನ್ ಅರ್ಷದ್, ಮಾಜಿ ಸಚಿವರಾದ ಎಚ್.ಸಿ. ಮಹದೇವಪ್ಪ ಮತ್ತು ಕೆ. ವೆಂಕಟೇಶ್, ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ತನ್ವೀರ್ ಸೇಠ್ ಮುಂತಾದವರು ಉಪಸ್ಥಿತರಿದ್ದರು