ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಒಡಿಐ ಸರಣಿಗಾಗಿ ವಿರಾಟ್ ಕೊಹ್ಲಿ ತಿರುವನಂತಪುರಂಗೆ ತಲುಪಿದ್ದು, ಭರ್ಜರಿ ಪ್ರಾಕ್ಟೀಸ್ ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನ್ ಸರಣಿಯಿಂದ ಬ್ರೇಕ್ ತಗೊಂಡಿದ್ದ ಕೊಹ್ಲಿ, ವಿಂಡೀಸ್ ವಿರುದ್ಧ ಅಬ್ಬರಿಸಲು ಕಾಯ್ತಿದ್ದಾರೆ.
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿರೋ ಮುಂದಿನ 2027ರ ವಿಶ್ವಕಪ್ ಟೂರ್ನಿಯೇ ತಮ್ಮ ಕರಿಯರ್‌ನ ಕೊನೆಯ ಚಾಪ್ಟರ್ ಅಂತ ಕೊಹ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. 2011ರಲ್ಲಿ ಧೋನಿ ನಾಯಕತ್ವದಲ್ಲಿ ವರ್ಲ್ಡ್ ಕಪ್ ಎತ್ತಿ ಹಿಡಿದಿದ್ದ ಕೊಹ್ಲಿ, 2019ರ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಕಪ್ ಗೆಲ್ಲುವ ಚಾನ್ಸ್ ಮಿಸ್ ಮಾಡಿಕೊಂಡಿದ್ದರು. ಈಗ ಶುಭಮನ್ ಗಿಲ್ ನಾಯಕತ್ವದಲ್ಲಿ ನಡೆಯಲಿರೋ 2027ರ ಏಕದಿನ ವಿಶ್ವಕಪ್ ಗೆದ್ದು, ಟೀಮ್ ಇಂಡಿಯಾಗೆ ಮತ್ತೊಮ್ಮೆ ಟ್ರೋಫಿ ತಂದುಕೊಟ್ಟು ಗೆತ್ತಿನಿಂದ ಕ್ರಿಕೆಟ್ ಅಂಗಳಕ್ಕೆ ವಿದಾಯ ಹೇಳುವುದು ವಿರಾಟ್ ಅವರ ಕೊನೆಯ ಆಸೆಯಾಗಿದೆ.



