ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಆಕಾಶ್ ಆನಂದ್ ಹೊಂದಿದ್ದ ರಾಷ್ಟ್ರೀಯ ಸಂಯೋಜಕ ಹುದ್ದೆಯನ್ನು ಇಶಾನ್ ಆನಂದ್ ಅವರಿಗೆ ಮಾಯಾವತಿ ನೀಡಿದರು. ಈಗ ಇಶಾನ್ ಆನಂದ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಕಾರ್ಯಕರ್ತರು ಇಶಾನ್ ಆನಂದ್ ರನ್ನು ಉದಯೋನ್ಮುಖ ಯುವ ಮುಖವಾಗಿ ನೋಡುತ್ತಿದ್ದಾರೆ. ಈಗ ಅಧಿಕಾರದಿಂದ ಮೂಲೆಗುಂಪಾಗಿರುವ ಪಕ್ಷವನ್ನು ಮತ್ತೇ ಬಲಪಡಿಸಲು ಮಾಯವತಿ ತಳಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚನೆಯತ್ತ ಗಮನಹರಿಸುವಂತೆ ಮಾಯಾವತಿ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮತ್ತೊಂದು ವಿಶೇಷ ಎಂದರೆ ಕಾರ್ಯಕಾರಿಣಿ ಸಭೆಗೂ ಮುನ್ನ, ಇಶಾನ್ ಆನಂದ್ ಮಾಯಾವತಿ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದರು. ಮಾಯಾವತಿ ಇಶಾನ್ ಬೆನ್ನಿನ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ಮಾಯಾವತಿ ಅವರ ಕುಟುಂಬದೊಳಗೆ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ನಡುವೆಯೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಗಮನ ಸೆಳೆಯಿತು
ಜೌನ್ಪುರದ ಮುಂಗ್ರಾ ಬಾದ್ಶಾಹಪುರ ವಿಧಾನಸಭಾ ಕ್ಷೇತ್ರದ ಬಿಎಸ್ ಪಿ ಅಭ್ಯರ್ಥಿ ವಿನೋದ್ ಮಿಶ್ರಾ ಮಾಯಾವತಿ ಅವರನ್ನು ಮತ್ತೆ ಅಧಿಕಾರಕ್ಕೆ ತರುವ ಪಕ್ಷದ ಪ್ರಯತ್ನಗಳಿಗೆ ಬ್ರಾಹ್ಮಣ ಸಮುದಾಯವು ಬೆಂಬಲ ನೀಡಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು
ಅಧಿಕಾರ ವಂಚಿತವಾಗಿರುವ ಬಿಎಸ್ ಪಿಗೆ ಮುಂದಿನ ಚುನಾವಣೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಇದರಿಂದ ಈಗಿನಿಂದಲೇ ಕಸರತ್ತುನ ಶುರು ಮಾಡಿದೆ. ಚುನಾವಣಾ ಕಣದಲ್ಲಿ ಬಿಎಸ್ಪಿಯ ಅಸ್ತಿತ್ವವನ್ನು ವಿಸ್ತರಿಸಲು ಮತ್ತು ತಳಮಟ್ಟದಲ್ಲಿ ಪಕ್ಷದ ಬೆಂಬಲದ ನೆಲೆ ಗಟ್ಟಿಗೊಳಿಸು ಇಶಾನ್ ಆನಂದ್ ಹೇಗೆ ಕೆಲಸ ಮಾಡುತ್ತಾರೆ ಎನ್ನುವುದೇ ಕುತೂಹಲ.



