ಎಸ್ ಐಆರ್ ಪ್ರಕ್ರಿಯೆಗೆ ಸಂಬಧ ಪಟ್ಟಂತೆ ಚುನಾವಣಾ ಆಯೋಗದಲ್ಲಿ ಆಗಿರುವ ಆತಂರಿಕ ಭಿನ್ನಮತ ಬಹಿರಂಗವಾದ ಬೆನ್ನಲ್ಲೇ ದೇಶಾದ್ಯಂತ ಅಸಮಾಧಾನ ಸ್ಫೋಟಗೊಂಡಿದೆ. ಇದೇ ವಿಚಾರ ಮುಂದಿಟ್ಟು ಕೊಂಡು ಪ್ರತಿಪಕ್ಷಗಳು ಆರೋಪಗಳನ್ನು ತೀವ್ರಗೊಳಿಸಿವೆ. ಕೇಂದ್ರ ಸರ್ಕಾರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ ರನ್ನು ಹುದ್ದೆಯಿಂದ ವಜಾ ಮಾಡಬೇಕು ಅಂತ ಪಟ್ಟು ಹಿಡಿದಿವೆ. ಇದರ ನಡುವೆ ಒಂದು ಹೆಜ್ಜೆ ಮುಂದೆ ಇಟ್ಟಿರುವ ಸಿಜೆಪಿ ಜ್ಞಾನೇಶ್ ಕುಮಾರ್ ರನ್ನು ದೇಶದ್ರೋಹಿ ಎಂದು ಖಂಡಿಸಿದೆ. ಅಲ್ಲದೇ ಸಿಇಸಿ ರಾಜೀನಾಮೆ ನೀಡದೇ ಇದ್ದರೆ ದೇಶಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಹಾಗಿದ್ರೆ ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದು ಕೇಂದ್ರ ಸರ್ಕಾರ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುತ್ತಾ.? ಅದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ.? ಇವೆಲ್ಲವನ್ನೂ ಈಗ ತಿಳಿದುಕೊಳ್ಳೋಣ

ಇಲ್ಲಿ ಮುಖ್ಯಚುನಾವಣಾ ಆಯುಕ್ತರನ್ನು ಹುದ್ದೆಯಿಂದ ವಜಾಗೊಳಿಸಬಹುದಾ.? ಎನ್ನುವುದನ್ನು ನೋಡುವುದಾದರೆ ಖಂಡಿತಾ ಸಾಧ್ಯವಿಲ್ಲ. ಅವರನ್ನು ತೆಗೆಯುವ ಹಕ್ಕು ಪ್ರಧಾನಮಂತ್ರಿ, ರಾಷ್ಟ್ರಪತಿ ಅಷ್ಟೇ ಏಕೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೂ ಇಲ್ಲ. ಜೊತೆಗೆ ಅವರ ಮೇಲೆ ಯಾವುದೇ ಪ್ರಕರಣಗಳನ್ನು ದಾಖಲು ಮಾಡಲು ಕೂಡಾ ಸಾಧ್ಯವಿಲ್ಲ. ಹಾಗಿದ್ರೆ ಅವರನ್ನು ವಜಾಗೊಳಿಸುವುದ ಹೇಗೆ ಎನ್ನುವ ಪ್ರಶ್ನೆ ಕಾಡುತ್ತೆ. ಆದರೆ ಅದನ್ನು ತಿಳಿದುಕೊಳ್ಳುವುದಕ್ಕೂ ಮೊದಲು ಚುನಾವಣಾ ಆಯುಕ್ತರು ಹೇಗೆ ನೇಮಕವಾಗುತ್ತಾರೆ ಎನ್ನುವುದನ್ನು ತಿಳಿದುಕೊಳ್ಳೋಣ ..

-ಹಿಂದೆ ಹೇಗಿತ್ತು ಆಯ್ಕೆ ಪ್ರಕ್ರಿಯೆ.? ನಂತರ ಏನಾಯ್ತು.? 

2023ಕ್ಕೂ ಮೊದಲು ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆ ಅತ್ಯಂತ ಕಠಿಣವಾಗಿ ನಡೆಯುತ್ತಿತ್ತು. ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿ, ಲೋಕಸಭಾ ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಈ ಮೂವರು ಇರುತ್ತಿದ್ದರು. ಆದರೆ 2023ರಲ್ಲಿ ಕೇಂದ್ರ ಸರ್ಕಾರ ಇದರಲ್ಲೊಂದು ಬದಲಾವಣೆ ಮಾಡಿತು. 2023ರ ಮಾರ್ಚ್ ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆ, 2023 ಅನ್ನು ಜಾರಿಗೆ ತಂದಿತು. ಅದರಂತೆ ಚುನಾವಣಾ ಆಯುಕ್ತರನ್ನು ನೇಮಕ ಮಾಡುವಾಗ ಸಮಿತಿಯಲ್ಲಿ ಇರಬೇಕಿದ್ದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳನ್ನು ತೆಗೆದು ಹಾಕಲಾಯಿತು. ಮರು ರೂಪಿಸಲಾದ ಸಮಿತಿಯಲ್ಲಿ ಪ್ರಧಾನಮಂತ್ರಿ, ಲೋಕಸಭಾ ವಿರೋಧಪಕ್ಷದ ನಾಯಕರನ್ನು ಹಾಗೇ ಉಳಿಸಿಕೊಳ್ಳಲಾಯಿತು. ಮೂರನೆಯವರನ್ನು ಪ್ರಧಾನ ಮಂತ್ರಿ ತಮಗೆ ಇಚ್ಛೆಗನುಣವಾದ ಒಬ್ಬರು ಕ್ಯಾಬಿನೆಟ್ ಮಂತ್ರಿಯನ್ನು ನೇಮಿಸಿಕೊಳ್ಳಬಹುದಾದ ನಿಯಮವನ್ನು ಜಾರಿಗೆ ತರಲಾಯಿತು. ಅದರಂತೆ ಪ್ರಧಾನಮನಂತ್ರಿ ಮೋದಿ ಸಮಿತಿಗೆ ಗೃಹಸಚಿವ ಅಮಿತ್ ಶಾರನ್ನು ನೇಮಿಸಿಕೊಂಡರು. ಇನ್ನು ಇಲ್ಲಿ ಮತ್ತೊಂದು ವಿಚಾರ ಎಂದರೆ ಮುಖ್ಯಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಭೆಯಲ್ಲಿ 2ನೇ 1ರಷ್ಟು ಬೆಂಬಲ ಬೇಕು. 2023ರಲ್ಲಿ ಜ್ಞಾನೇಶ್ ಕುಮಾರ್ ನೇಮಕಗೊಳ್ಳುವಾಗ ನಡೆದಿದ್ದು ಇದೇ. ಅಂದು ಸಭೆಯಲ್ಲಿ ಜ್ಞಾನೇಶ್ ಕುಮಾರ್ ನೇಮಕವನ್ನು ರಾಹುಲ್ ಗಾಂಧಿ ವಿರೋಧಿಸಿ ಹೊರ ನಡೆದರು. ಆದರೆ ಮೋದಿ ಹಾಗೂ ಅಮಿತ್ ಇಬ್ಬರ ಬೆಂಬಲ ಇದ್ದಿದ್ದರಿಂದ ಜ್ಞಾನೇಶ್ ಕುಮಾರ್ ಈ ಹುದ್ದೆಗೆ ಸುಲಭವಾಗಿ ಏರಿದರು.

ಇಲ್ಲಿ ತ್ರಿ-ಸದಸ್ಯ ಸಮಿತಿಯಲ್ಲಿ ಪ್ರಧಾನಮಂತ್ರಿ ಹಾಗೂ ಅವರು ನಾಮನಿರ್ದೇಶನ ಮಾಡುವ ಕೇಂದ್ರ ಸಚಿವರು ಇದ್ದಿದ್ದರಿಂದ ಮೂವರಲ್ಲಿ ಇಬ್ಬರು ಸರ್ಕಾರದ ಪ್ರತಿನಿಧಿಗಳೇ ಆಗಿದ್ದರು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದರೂ ಸರ್ಕಾರ ತನಗೆ ಬೇಕಾದ ಅಭ್ಯರ್ಥಿಯನ್ನು ಬಹುಮತದ ಅಂದರೆ 2-1 ಬೆಂಬಲದ ಆಧಾರದಲ್ಲಿ ಸುಲಭವಾಗಿ ಜ್ಞಾನೇಶ್ ಕುಮಾರ್ ರನ್ನು  ಆಯ್ಕೆ ಮಾಡಲಾಯಿತು.

ಈಗ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಇಬ್ಬರು ಆಯುಕ್ತರು ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಲಿಖಿತ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ. ಪೂರ್ಣ ಆಯೋಗದ ಸಹಮತ ಅನುಮೋದನೆಯಿಲ್ಲದೇ ಕಾನೂನು ಬಾಹಿರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಇಬ್ಬರು ಆಯುಕ್ತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದೀಗ ಮಹಾಭಿಯೋಗ ನಡೆಸಿ ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಚುನಾವಣಾ ಆಯೋಗವನ್ನು ರಾಜಕೀಯ ಒತ್ತಡಗಳಿಂದ ಮುಕ್ತವಾಗಿಡಲು ಹಾಗೂ ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿಯೇ ಅತ್ಯಂತ ಕಠಿಣವಾಗಿ ರೂಪಿಸಲಾಗಿದೆ. ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳನ್ನು ವಜಾಗೊಳಿಸುವ ವಿಧಾನವನ್ನು ಒಳಗೊಂಡಿರುವ ಸಂವಿಧಾನದ ವಿಧಿ 124(4)ರ ಪ್ರಕಾರ ಸಾಬೀತಾದ ದುರ್ನಡತೆ ಅಥವಾ ಅಸಮರ್ಥತತೆಯ ಆಧಾರರ ಮೇಲೆ ಮಾತ್ರ ಅವರನ್ನು ಹುದ್ದೆಯಿಂದ ಪದಚ್ಯುತಿಗೊಳಿಸಬಹುದಾಗಿದೆ. ಈ ಪ್ರಕ್ರಿಯೆಗೆ ಇಂಪೀಚ್ಮೆಂಟ್ ಎಂದರೆ ಮಹಾಭಿಯೋಗ ಎಂದು ಕರೆಯಲಾಗುತ್ತದೆ. ಆದರೆ ಇದಕ್ಕೆ ಸಂವಿಧಾನದಲ್ಲಿ ರೀಮೂವಬಿಲಿಟಿ (ಹುದ್ದೆಯಿಂದ ವಜಾ) ಎಂದು ಕರೆಯಲಾಗಿದೆ. 

ಇನ್ನು ಮುಖ್ಯ ಚುನಾವಣಾ ಆಯುಕ್ತರ ವಜಾ ಪ್ರಕ್ರಿಯೆ ಕೂಡಾ ಅಷ್ಟೊಂದು ಸುಲಭವಾಗಿಲ್ಲ. ಅದು ಕಷ್ಟದ ದಾರಿಯಾಗಿದೆ. ಉಭಯ ಸದನಗಳ ಸದಸ್ಯರು ದುರ್ನಡತೆ ಇಲ್ಲವೇ ಅಸಮರ್ಥತೆಯನ್ನು ಸ್ಪಷ್ಟವಾದ ಆರೋಪ ಹೊರಿಸಿ ನಿರ್ಣಯ ಮಂಡನೆ ಮಾಡಬೇಕು. ಈ ದೋಷಾರೋಪಣ ನಿರ್ಣಯ ಅಂಗೀಕಾರಗೊಳ್ಳಲು ಲೋಕಸಭೆಯ ಕನಿಷ್ಠ 100 ಸಂಸತ್ ಸದಸ್ಯರು ಲೋಕಸಭೆಯ ಸ್ಪೀಕರ್ ಗೂ ರಾಜ್ಯಸಭೆಯ ಕನಿಷ್ಠ 50 ಸದಸ್ಯರು ರಾಜ್ಯಸಭೆಯ ಸಭಾಪತಿಗಳಿಗೂ ಸಹಿ ಹಾಕಿ ಸಲ್ಲಿಸಬೇಕು. ಆದರೆ ಇಲ್ಲಿ ಮತ್ತೊಂದು ವಿಚಾರ ಈ ನೋಟಿಸ್ ನ್ನು ಸ್ವೀಕರಿಸುವುದು ಹಾಗೂ ತಿರಸ್ಕರಿಸುವುದು ಲೋಕಸಭಾ ಮತ್ತು ರಾಜ್ಯಸಭೆಯ ಸ್ಪೀಕರ್ ಗಳ ವಿವೇಚನೆಗೆ ಬಿಟ್ಟಿದ್ದಾಗಿರುತ್ತದೆ. ಒಂದೇ ವೇಳೆ ಸ್ಪೀಕಾರವಾಗದೇ ಹೋದಲ್ಲಿ ಇದು ಇಲ್ಲಿಗೇ ಅಂತ್ಯವಾಗುತ್ತೆ. ನಿರ್ಣಯ ಅಂಗೀಕಾರವಾದರೆ ಅರೋಪಗಳ ಸತ್ಯಾಸತ್ಯತೆ ಪರೀಕ್ಷೆ ಮಾಡಲು ಒಂದು ತನಿಖಾ ಸಮಿತಿ ನೇಮಿಸಿ ಆದೇಶ ನೀಡಲಾಗುತ್ತದೆ. 

ಒಂದು ವೇಳೆ ಆರೋಪ ಸಾಬೀತಾದರೆ, ಸಂಸತ್ತಿನ ಉಭಯ ಸದನಗಳಲ್ಲಿ ಪ್ರತ್ಯೇಕವಾಗಿ, ಹಾಜರಿದ್ದು ಮತ ಚಲಾಯಿಸುವ 2/3 ಭಾಗದಷ್ಟು ಬಹುಮತದೊಂದಿಗೆ ನಿರ್ಣಯ ಅಂಗೀಕಾರವಾಗಬೇಕು. ಅಂತಿಮವಾಗಿ ರಾಷ್ಟ್ರಪತಿಗಳ ಆದೇಶದ ಮೂಲಕ ಸಿಇಸಿಯವರನ್ನು ಹುದ್ದೆಯಿಂದ ತೆರವುಗೊಳಿಸಲಾಗುತ್ತದೆ. ಇತರ ಚುನಾವಣಾ ಆಯುಕ್ತರನ್ನು ಸಿಇಸಿಯವರ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರು ವಜಾಗೊಳಿಸಬಹುದು.

-ಈ ಹಿಂದೆ ನಡೆದಿದೆಯಾ ಮಹಾಭಿಯೋಗ.?

ದೇಶದಲ್ಲಿ ಈಗ ಜ್ಞಾನೇಶ್ ಕುಮಾರ್ ವಜಾಗೆ ಸಂಬಂಧಿಸಿದಂತೆ ಮಹಾಭಿಯೋಗದ ಮಾತುಗಳು ಕೇಳಿ ಬರುತ್ತಿವೆ. ಹಾಗಿದ್ರೆ ಇದೂವರೆಗೆ ಯಾರಾದಾರೂ ಮುಖ್ಯ ಚುನಾವಣಾ ಆಯುಕ್ತರನ್ನೂ ಮಾಹಾಭಿಯೋಗದ ಮೂಲಕ ವಜಾಗೊಳಿಸಲಾಗಿದೆಯಾ ಅಂತ ನೋಡಿದರೆ ಇಲ್ಲಿಯವರೆಗೆ ಇಲ್ಲನವೆಂದೇ ಹೇಳಬಹುದು. 2009ರಲ್ಲಿ ಸಿಇಸಿ ಎನ್. ಗೋಪಾಲಸ್ವಾಮಿ ಅವರು ಸಹ-ಆಯುಕ್ತ ನವೀನ್ ಚಾವ್ಲಾರನ್ನು ವಜಾಗೊಳಿಸಲು ನೀಡಿದ್ದ ಶಿಫಾರಸನ್ನು ಅಂದಿನ ಸರ್ಕಾರ ತಿರಸ್ಕರಿಸಿತ್ತು. ಇದರಿಂದ ಸಂಸತ್ತಿನಲ್ಲಿ ಮತದಾನದ ಹಂತಕ್ಕೆ ತಲುಪಿ ವಜಾಗೊಂಡ ಉದಾಹರಣೆ ದೇಶದಲ್ಲಿ ನಡೆದಿಲ್ಲ.

ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವುದು ಸುಲಭದ ಮಾತಲ್ಲ..ಇಷ್ಟೊಂದು ಪ್ರಕ್ರಿಯೆಗಳನ್ನು ದಾಟಿಕೊಂಡು ಬರಬೇಕು. ಆದರೆ ಈಗ ಜ್ಞಾನೇಶ್ ಕುಮಾರ್ ವಿರುದ್ಧ ಹೋರಾಟ ಹೆಚ್ಚಾಗುತ್ತಿದೆ. ನಿಯಮಗಳನ್ನು ದಾಟಿ ವಜಾಗೊಳಿಸಬೇಕೆಂಬ ಕೂಗುಗಳು ಜೋರಾಗುತ್ತಿವೆ. ಈ ಹೋರಾಟಗಳು ಹೆಚ್ಚಾದರೆ ಕಾನೂನು ಹಾಗೂ ನೀತಿ-ನಿಯಮಗಳನ್ನು ಮೀರಿ ಹೊಸ ನೀತಿ ರೂಪಿಸಿ ವಜಾಗೊಳಿಸಲೇ ಬೇಕಾದ ಅನಿವಾರ್ಯತೆ ಕೇಂದ್ರ ಸರ್ಕಾರಕ್ಕೆ ಎದುರಾಗಬಹುದು.